ಡೋಪಿಂಗ್‌ ಪರೀಕ್ಷೆಯಲ್ಲಿ ರಸ್ಲರ್ ಸುಮಿತ್ ಮಲಿಕ್ ಫೇಲ್, ಅಮಾನತು

04-06-21 03:59 pm       MYKHEL: Sadashiva   ಕ್ರೀಡೆ

ಒಲಿಂಪಿಕ್ಸ್‌ ತಯಾರಿಯ ಭಾರತೀಯ ತಂಡದಲ್ಲಿರುವ ರಸ್ಲರ್ ಸುಮಿತ್ ಮಲಿಕ್ ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

ನವದೆಹಲಿ: ಒಲಿಂಪಿಕ್ಸ್‌ ತಯಾರಿಯ ಭಾರತೀಯ ತಂಡದಲ್ಲಿರುವ ರಸ್ಲರ್ ಸುಮಿತ್ ಮಲಿಕ್ ಡೋಪಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಬಲ್ಗೇರಿಯಾದಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ನಡೆಸಲಾದ ಉದ್ದೀಪನಾ ಪರೀಕ್ಷೆಯ ವೇಳೆ ಸುಮಿತ್ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಸುಮಿತ್ ಅವರನ್ನು ತಾತ್ಕಾಲಿಕವಾಗಿ ಸಮಾನತುಗೊಳಿಸಲಾಗಿದೆ.

2018ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದ ಸುಮಿತ್ ಮಲಿಕ್, ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್‌ಗಾಗಿ ಸಿದ್ಧತೆ ನಡೆಸುತ್ತಿರುವ ಭಾರತ ತಂಡದಲ್ಲಿ ಇದ್ದರು. ಒಲಿಂಪಿಕ್ಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಸುಮಿತ್ ಅವರ ಡೋಪಿಂಗ್ ವೈಫಲ್ಯ ಭಾರತಕ್ಕೆ ಮುಜುಗರ ತಂದಿದೆ.

ಒಲಿಂಪಿಕ್ಸ್‌ಗೆ ಕೆಲವೇ ದಿನಗಳು ಬಾಕಿಯಿರುವಾಗ ಭಾರತೀಯ ರಸ್ಲರ್ ಡೋಪಿಂಗ್ ವಿಚಾರದಲ್ಲಿ ಸಿಕ್ಕಿಬೀಳುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2016ರಲ್ಲಿ ರಿಯೋ ಒಲಿಂಪಿಕ್ಸ್ ಆರಂಭಕ್ಕೆ ಹತ್ತಿರವಿದ್ದಾಗ ನರಸಿಂಗ್ ಪಂಚಮ್ ಯಾದವ್ ಡೋಪಿಂಗ್‌ನಲ್ಲಿ ಫೇಲ್ ಆಗಿದ್ದರು.

125 ಕೆಜಿ ವಿಭಾಗದಲ್ಲಿದ್ದ ಸುಮಿತ್, ಬಲ್ಗೇರಿಯಾ ಪಂದ್ಯದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಜಪಾನ್‌ನಲ್ಲಿ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.

(Kannada Copy of  MYKHEL Kannada)