ಮಾಜಿ ಕ್ರಿಕೆಟಿಗ ಬಿ ವಿಜಯಕೃಷ್ಣ ನಿಧನ, ಸಿಎಂ ಯಡಿಯೂರಪ್ಪ ಸಂತಾಪ

17-06-21 10:26 am       MYKHEL: Sadashiva   ಕ್ರೀಡೆ

ರ್ನಾಟಕದ ಪ್ರತಿಭಾವಂತ ಕ್ರಿಕೆಟಿಗರಾಗಿದ್ದ ಬಿ ವಿಜಯಕೃಷ್ಣ ಹೃದಯಾಘಾತದಿಂದಾಗಿ ಬುಧವಾರ ನಿಧನರಾಗಿದ್ದಾರೆ.

ಬೆಂಗಳೂರು, ಜೂನ್ 17 : ಕರ್ನಾಟಕದ ಪ್ರತಿಭಾವಂತ ಕ್ರಿಕೆಟಿಗರಾಗಿದ್ದ ಬಿ ವಿಜಯಕೃಷ್ಣ ಹೃದಯಾಘಾತದಿಂದಾಗಿ ಬುಧವಾರ (ಜೂನ್ 16) ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ 15 ವರ್ಷಗಳ ವೃತ್ತಿ ಜೀವನದಲ್ಲಿ ಅಪ್ರತಿಮ ಆಲ್ ರೌಂಡರ್ ಆಗಿದ್ದ ಬಿ ವಿಜಯಕೃಷ್ಣ ಅವರು 80 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿ 2297 ರನ್ ಗಳನ್ನು ಗಳಿಸಿ 194 ವಿಕೆಟ್ ಗಳನ್ನು ಪಡೆದಿದ್ದರು. ಕರ್ನಾಟಕ ರಣಜಿ ಟ್ರೋಫಿಯನ್ನು ಎರಡು ಬಾರಿ ಗೆಲ್ಲಲು ಅವರು ಪ್ರಮುಖ ಕಾರಣರಾಗಿದ್ದರು ಎಂದು ಯಡಿಯೂರಪ್ಪ ಸ್ಮರಿಸಿದ್ದಾರೆ.



ವಿಜಯಕೃಷ್ಣ ನಿಧನದಿಂದ ಅತ್ಯುತ್ತಮ ಕ್ರಿಕೆಟಿಗನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

1970s & 1980ರ ವೇಳೆ ಕರ್ನಾಟಕ ಕ್ರಿಕೆಟ್‌ ಬೆಳೆಯುವಲ್ಲಿ ವಿಜಯಕೃಷ್ಣ ಪ್ರಮುಖ ಕಾರಣರಾಗಿದ್ದರು. ಪ್ರತಿಭಾವಂತ ಕ್ರಿಕೆಟರ್ ಆಗಿದ್ದರೂ ಟೀಮ್ ಇಂಡಿಯಾದಲ್ಲಿ ಆಡಲು ಅವಕಾಶ ಸಿಗದ ಆಟಗಾರರ ಸಾಲಿನಲ್ಲಿ ವಿಜಯಕೃಷ್ಣ ಅವರೂ ಒಬ್ಬರಾಗಿದ್ದಾರೆ.

(Kannada Copy of Mykhel Kannada)