ಒಲಿಂಪಿಕ್ ವೀರ, ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ !

19-06-21 11:00 am       Headline Karnataka News Network   ಕ್ರೀಡೆ

ಭಾರತ ಕಂಡ ಅತ್ಯಂತ ಅಪರೂಪದ ಒಲಿಂಪಿಕ್ ವೀರ ಮಿಲ್ಖಾ ಸಿಂಗ್ (91) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. 

ಚಂಡೀಗಡ, ಜೂನ್ 19 : ‘ಫ್ಲೈಯಿಂಗ್ ಸಿಖ್‘ ಖ್ಯಾತಿಯ ಅಥ್ಲೀಟ್, ಭಾರತ ಕಂಡ ಅತ್ಯಂತ ಅಪರೂಪದ ಒಲಿಂಪಿಕ್ ವೀರ ಮಿಲ್ಖಾ ಸಿಂಗ್ (91) ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ. 

ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಅವರು ಚಂಡೀಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಅವರ ಪತ್ನಿ, ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯಾಗಿದ್ದ ನಿರ್ಮಲ್ ಕೌರ್ ಅವರು ಇತ್ತೀಚೆಗಷ್ಟೇ ಕೋವಿಡ್‌ನಿಂದ ಸಾವು ಕಂಡಿದ್ದರು. ಮಿಲ್ಖಾ ಸಿಂಗ್ ಅವರು ಮಗ, ಗಾಲ್ಫ್ ಆಟಗಾರ ಜೀವ್ ಮಿಲ್ಕಾಸಿಂಗ್ ಮತ್ತು ಮಗಳು ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. 

ಸ್ವಾತಂತ್ರ್ಯಾ ನಂತರದ ದೇಶದ ಕ್ರೀಡಾರಂಗದ ಹರಿಕಾರರಲ್ಲಿ ಒಬ್ಬರಾಗಿದ್ದ ಒಲಿಂಪಿಯನ್ ಮಿಲ್ಖಾ ಸಿಂಗ್,  ಕೋವಿಡ್‌ ಕಾರಣದಿಂದ ಕಳೆದ ತಿಂಗಳು ಮೊಹಾಲಿಯ ಫೋರ್ಟಿಸ್‌ ನಲ್ಲಿ ದಾಖಲಾಗಿದ್ದರು. ಒಂದು ವಾರದ ಚಿಕಿತ್ಸೆಯ ನಂತರ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಜೂನ್ 3ರಂದು ಅವರಿಗೆ ಉಸಿರಾಟದ ತೊಂದರೆ ಹೆಚ್ಚಿದ್ದರಿಂದ ಚಂಡೀಗಡದ ಪಿಜಿಐಎಂಇಆರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

1960ರ ರೋಮ್ ಒಲಿಂಪಿಕ್ಸ್‌ನ 400 ಮೀಟರ್ಸ್ ಓಟದಲ್ಲಿ ಫೈನಲ್ ತಲುಪಿದ್ದು ಭಾರತದ ಪಾಲಿಗೆ ಐತಿಹಾಸಿಕ ಸಾಧನೆಯಾಗಿತ್ತು. ಆ ಕೂಟದಲ್ಲಿ ಸ್ವಲ್ಪ ಅಂತರದಲ್ಲಿ ಚಿನ್ನದ ಪದಕ ಕೈತಪ್ಪಿತ್ತು. 1956 ಮತ್ತು 1964ರ ಒಲಿಂಪಿಕ್ಸ್‌ನಲ್ಲಿಯೂ ಭಾರತವನ್ನು ಪ್ರತಿನಿಧಿಸಿದ್ದರು. 1958ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಮಿಲ್ಖಾ ಅವರದ್ದು. ಆಬಳಿಕ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಕ್ರೀಡೆ ಮತ್ತು ಸೇನೆಯಲ್ಲಿ ನೀಡಿದ ಸೇವೆಯನ್ನು ಗುರುತಿಸಿ ಪಂಜಾಬ್ ಸರ್ಕಾರ ಮಿಲ್ಖಾ ಸಿಂಗ್ ಅವರನ್ನು ಕ್ರೀಡಾ ನಿರ್ದೇಶಕರಾಗಿಯೂ ನೇಮಕ ಮಾಡಿತ್ತು. ಮಿಲ್ಖಾ ಸಿಂಗ್ ಜೀವನ ಆಧರಿಸಿ ಬಾಲಿವುಡ್ ನಲ್ಲಿ ಬಂದಿದ್ದ ‘ಭಾಗ್‌ ಮಿಲ್ಖಾ ಭಾಗ್‘ ಹಿಂದಿ ಚಲನಚಿತ್ರವು ಭರ್ಜರಿ  ಹಿಟ್ ಆಗಿತ್ತು.

Legendary Indian sprinter Milkha Singh died on Friday due to post-Covid complications. He was being treated at the Post Graduate Institute of Medical Education & Research. The 91-year-old had tested positive for COVID-19 on May 19 but was in home isolation at his Chandigarh residence after revealing that he was asymptomatic.