Euro 2020: ಇಂಗ್ಲೆಂಡ್ ಸೋಲಿಸಿ 2ನೇ ಯೂರೋ ಕಪ್‌ ಗೆದ್ದ ಇಟಲಿ

12-07-21 10:49 am       MYKHEL: Sadashiva   ಕ್ರೀಡೆ

ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಯುಇಎಫ್‌ಎ ಯೂರೋ 2020 ಫೈನಲ್‌ ಪಂದ್ಯದಲ್ಲಿ ಇಟಲಿ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ.

ವೆಂಬ್ಲಿ: ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ಸೋಮವಾರ (ಜುಲೈ 12) ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫೈನಲ್‌ ಪಂದ್ಯದಲ್ಲಿ ಇಟಲಿ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಇಟಲಿಗೆ ಇದು ಎರಡನೇ ಯೂರೋ ಟ್ರೋಫಿ.

ಅಸಲಿಗೆ ಪಂದ್ಯ 1-1ರಿಂದ ಡ್ರಾ ಅನ್ನಿಸಿತ್ತು. ಪಂದ್ಯದ ಆರಂಭದಲ್ಲಿ ಅಂದರೆ 2ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಲೂಕ್ ಶಾ ಮೊದಲನೇ ಗೋಲ್‌ ಬಾರಿಸಿದ್ದರು. ಅದಾಗಿ ಪ್ರಥಮಾರ್ಧದಲ್ಲಿ ಗೋಲ್ ದಾಖಲಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಇಟಲಿಯ ಲಿಯೊನಾರ್ಡೊ ಬೊನುಸಿ ಗೋಲ್ ಬಾರಿಸಿ ಫಲಿತಾಂಶವನ್ನು 1-1ರಿಂದ ಸರಿದೂಗಿಸಿದರು.

ಆ ಬಳಿಕ ವಿಜೇತರನ್ನು ಘೋಷಿಸುವುದಕ್ಕಾಗಿ ಪೆನಾಲ್ಟಿ ಶೂಟೌಟ್ ನಡೆಸಲಾಯ್ತು. ಇದರಲ್ಲಿ ಇಟಲಿ 3 ಗೋಲ್ ದಾಖಲಿಸಿದರೆ, ಇಂಗ್ಲೆಂಡ್ 2 ಗೋಲ್ ಬಾರಿಸಿತು. ಆದರೆ ಇಟಲಿಗೆ ಇದು ಬರೋಬ್ಬರಿ 53 ವರ್ಷಗಳ ಬಳಿಕ ಲಭಿಸುತ್ತಿರುವ ಯೂರೋ ಕಪ್‌.

1968ನೇ ಇಸವಿಯಲ್ಲಿ ಇಟಲಿ ತಂಡ ಮೊದಲ ಬಾರಿ ಯೂರೋ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು.

(Kannada Copy of Mykhel Kannada)