ಟೋಕಿಯೋ ಒಲಂಪಿಕ್ಸ್: ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಮೀರಾಬಾಯಿ ಚಾನು

24-07-21 01:04 pm       MYKHEL: Madhukara Shetty   ಕ್ರೀಡೆ

49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಸ್ಪರ್ಧಿಸಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಚಾನು 84 ಕೆಜಿ ಹಾಗೂ 87 ಕೆಜಿಯನ್ನು ಎತ್ತುವಲ್ಲಿ ಯಶಸ್ವಿಯಾದರು.

49 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಸ್ಪರ್ಧಿಸಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಚಾನು 84 ಕೆಜಿ ಹಾಗೂ 87 ಕೆಜಿಯನ್ನು ಎತ್ತುವಲ್ಲಿ ಯಶಸ್ವಿಯಾದರು. ಆದರೆ 89 ಕೆಜಿ ಎತ್ತುವಲ್ಲಿ ವಿಫಲರಾದರು. ಹೀಗಾಗಿ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚೀನಾದ ಹೌಸ್ ಜಿಹು ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ. 94 ಕೆಜಿ ಭಾರತ ಎತ್ತುವ ಮೂಲಕ ಅವರು ಹೊಸ ಒಲಿಂಪಿಕ್ಸ್ ದಾಖಲೆ ಮಾಡಿದ್ದಾರೆ.

87 ಕೆಜಿ ಭಾರ ಎತ್ತುವ ಮೂಲಕ ಮೀರಾಭಾಯಿ ತಮ್ಮ ವೈಯಕ್ತಿಕ ಅತ್ಯುತ್ತಮ ಸಾಧನೆಯನ್ನು ಸರಿಗಟ್ಟಿದರು. ಇದಕ್ಕೂ ಮುನ್ನ ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಆದರೆ ಈ ಬಾರಿ ಮೊದಲ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಗರಿಮೆ ಮೂಡಿಸಿದ್ದಾರೆ. ಮೀರಾಬಾಯಿ ಸಾನು ಅವರ ಈ ಸಾಧನೆಗೆ ದೇಶಾದ್ಯಂತ ಸಾಕಷ್ಟು ಪ್ರಶಂಸೆಗಳು ಹರಿದು ಬರುತ್ತಿದೆ. ಭಾರತದ ಕ್ರೀಡಾಪ್ರೇಮಿಗಳು ಮೀರಾಭಾಯಿ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ನರೇಂದ್ರ ಮೋದಿ ಕೂಡ ಮೀರಾಬಾಯಿ ಚಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

(Kannada Copy of Mykhel Kannada)