ಟೋಕಿಯೋ ಒಲಿಂಪಿಕ್ಸ್: ಸಾತ್ವಿಕ್‌ಸಾಯ್‌ರಾಜ್-ಚಿರಾಗ್ ಜೋಡಿಗೆ ಸೋಲು

26-07-21 01:08 pm       MYKHEL: Sadashiva   ಕ್ರೀಡೆ

ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲೂ ಭಾರತಕ್ಕೆ ನಿರಾಸೆಯಾಗಿದೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ ಎರಡನೇ ಪಂದ್ಯದಲ್ಲಿ ಭಾರತೀಯ ಜೋಡಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋತಿದ್ದಾರೆ.

ಟೋಕಿಯೋ: ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲೂ ಭಾರತಕ್ಕೆ ನಿರಾಸೆಯಾಗಿದೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ ಎರಡನೇ ಪಂದ್ಯದಲ್ಲಿ ಭಾರತೀಯ ಜೋಡಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋತಿದ್ದಾರೆ. ವಿಶ್ವ ನಂ.1 ಇಂಡೋನೇಶಿಯನ್ ಜೋಡಿ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ಎದುರು ಭಾರತೀಯ ಜೋಡಿ ಸೋತಿದೆ.

ಸೋಮವಾರ (ಜುಲೈ 26) ನಡೆದ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್‌ ದ್ವಿತೀಯ ಪಂದ್ಯದಲ್ಲಿ ಸಾತ್ವಿಕ್‌ಸಾಯ್‌ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ದಂತಕತೆಗಳಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಮತ್ತು ಕೆವಿನ್ ಸುಕಮುಲ್ಜೊ ವಿರುದ್ಧ 13-21, 12-21ರ ನೇರ ಸೆಟ್ ಸೋಲನುಭವಿಸಿದ್ದಾರೆ.



ಟೋಕಿಯೋ ಒಲಿಂಪಿಕ್ಸ್ ಮೂಲಕ ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಿದ್ದ ಸಾತ್ವಿಕ್ ಮತ್ತು ಚಿರಾಗ್ ಬಗ್ಗೆ ನಿರೀಕ್ಷೆಗಳಿದ್ದವು. ಆದರೆ ದ್ವಿತೀಯ ಪಂದ್ಯದಲ್ಲಿ ಇಂಡೋನೇಶಿಯನ್ ಜೋಡಿ ಎದುರಾದಾಗಲೇ ಪದಕದಾಸೆ ಮಂಕಾಗಿತ್ತು.

ಭಾರತೀಯ ಜೋಡಿ ಮತ್ತು ಇಂಡೋನೇಶಿಯನ್ ಜೋಡಿಯ ಮಧ್ಯೆ 32 ನಿಮಿಷಗಳ ಕದನ ನಡೆದಿದ್ದು ಕಾಣಸಿಕ್ಕಿತು. ಈವರೆಗೆ ಭಾರತಕ್ಕೆ ಪದಕ ಬಂದಿದ್ದು ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮಾತ್ರ. 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದಿದ್ದು ಬಿಟ್ಟರೆ ಬೇರೆ ಪದಕಗಳು ಬಂದಿಲ್ಲ.

(Kannada Copy of Mykhel Kannada)