ಒಲಿಂಪಿಕ್ಸ್: ಟೇಬಲ್‌ ಟೆನಿಸ್‌ನಲ್ಲಿ ಭಾರತದ ಸುಂದರಿ ಮಣಿಕಾಗೆ ಸೋಲು

26-07-21 03:48 pm       MYKHEL: Sadashiva   ಕ್ರೀಡೆ

ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ.

ಟೋಕಿಯೋ: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ. ಆಸ್ಟ್ರಿಯಾದ ಸೋಫಿಯಾ ಪೋಲ್ಕನೋವಾ ಎದುರು ಬಾತ್ರಾ ಸೋಲು ಕಂಡಿದ್ದಾರೆ. ಇದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾರತದ ನಿರಾಸೆಯ ಹಾದಿ ಮುಂದುವರೆದಿದೆ.

ಸೋಮವಾರ (ಜುಲೈ 26) ನಡೆದ ಮಹಿಳಾ ಟೇಬಲ್ ಟೆನಿಸ್ ಮೂರನೇ ಸುತ್ತಿನ ಪಂದ್ಯದಲ್ಲಿ ಮಣಿಕಾ ಬಾತ್ರಾ ಅವರು ಸೋಫಿಯಾ ಪೋಲ್ಕನೋವಾ ಎದುರು 0-4 (8-11, 2-11, 5-11, 7-11)ರ ಅಂತರದ ಸೋಲನುಭವಿಸಿದ್ದಾರೆ. ಇಬ್ಬರ ಮಧ್ಯೆ 27 ನಿಮಿಷಗಳ ಕದನ ನಡೆದಿತ್ತು.

ಈ ಒಂದು ಪಂದ್ಯದಲ್ಲಿ ಮಣಿಕಾ ಗೆದ್ದಿದ್ದರೂ ಕೊನೇ 16ನೇ ಹಂತದ ಸ್ಪರ್ಧೆಗೆ ಬಾತ್ರಾ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ ವಿಶ್ವ ನಂ.16ನೇ ಶ್ರೇಯಾಂಕಿತೆ ಸೋಫಿಯಾ ಇದಕ್ಕೆ ಅವಕಾಶ ನೀಡಲಿಲ್ಲ. ಭಾರತೀಯ ಆಟಗಾರ್ತಿಯೆದುರು ಸೋಫಿಯಾ ಪಾರಮ್ಯ ಮೆರೆದಿದ್ದು ಕಾಣಸಿಕ್ಕಿತು.

ಸೋಮವಾರವೇ ಭಾರತದ ಮತ್ತೊಬ್ಬ ಟೇಬಲ್ ಟೆನಿಸ್ ಆಟಗಾರ್ತಿ ಸುತೀರ್ಥ ಮುಖರ್ಜಿ ಕೂಡ ಪಂದ್ಯ ಸೋತು ಕ್ರೀಡಾಕೂಟದಿಂದ ಹೊರನಡೆದಿದ್ದರು. ಇನ್ನು ಅನುಭವಿ ಆಟಗಾರ ಶರತ್ ಕಮಲ್ ಮೂರನೇ ಸುತ್ತಿಗೆ ಆಯ್ಕೆಯಾಗಿದ್ದು, ಅವರಿಗೆ ಜುಲೈ 27ರಂದು ಚೀನಾದ ಮಾ ಲಾಂಗ್ ವಿರುದ್ಧ ಸ್ಪರ್ಧೆಯಿದೆ.

(Kannada Copy of Mykhel Kannada)