ಟೋಕಿಯೋ ಒಲಿಂಪಿಕ್ಸ್: ಆರಂಭಿಕ ಸುತ್ತಿನಲ್ಲೇ ಯುವ ರಸ್ಲರ್ ಸೋನಂ ಮಲಿಕ್‌ಗೆ ಸೋಲು

03-08-21 12:00 pm       Mykhel: Sadashiva   ಕ್ರೀಡೆ

ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ರಸ್ಲಿಂಗ್ 62 ಕೆ.ಜಿ. ಫ್ರೀ-ಸ್ಟೈಲ್ ಸ್ಪರ್ಧೆಯಲ್ಲಿ ಯುವ ರಸ್ಲರ್ ಸೋನಮ್ ಮಲಿಕ್‌ಗೆ ಸೋಲಾಗಿದೆ.

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನ ಮಹಿಳಾ ರಸ್ಲಿಂಗ್ 62 ಕೆ.ಜಿ. ಫ್ರೀ-ಸ್ಟೈಲ್ ಸ್ಪರ್ಧೆಯಲ್ಲಿ ಯುವ ರಸ್ಲರ್ ಸೋನಮ್ ಮಲಿಕ್‌ಗೆ ಸೋಲಾಗಿದೆ. ಆರಂಭಿಕ ಸುತ್ತಿನಲ್ಲಿ ಸ್ಪರ್ಧಿಸಿರುವ ಮಲಿಕ್, ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ 2-2ಯ ಅಂತರದಲ್ಲಿ ಭರ್ಜರಿ ಪೈಪೋಟಿ ನೀಡಿ, ಸೋತು ಪ್ರತಿಷ್ಠಿತ ಕ್ರೀಡಾಕೂಟದಿಂದ ಹೊರ ಬಿದ್ದಿದ್ದಾರೆ. ಮಲಿಕ್ ಇದು ಚೊಚ್ಚಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ ಮೊದಲ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲೇ ಸೋನಂಗೆ ನಿರಾಸೆಯಾಗಿದೆ.

ಮಂಗಳವಾರ (ಆಗಸ್ಟ್ 3) ನಡೆದ ಮಹಿಳಾ 62 ಕೆಜಿ ಫ್ರೀ ಸ್ಟೈಲ್ ವಿಭಾಗದ ಸ್ಪರ್ಧೆಯಲ್ಲಿ 19ರ ಹರೆಯದ ಸೋನಂ ಆರಂಭದಲ್ಲಿ 2 ಪುಶ್‌ಔಟ್ ಪಾಯಿಂಟ್‌ಗಳೊಂದಿಗೆ ಮುನ್ನಡೆ ಸಾಧಿಸಿದ್ದರು. ಆದರೆ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಬೊಲೊರ್ಟುಯಾ ಖುರೆಲ್ಖು ಸ್ಪರ್ಧೆ ಮುಕ್ತಾಯಕ್ಕೆ 35 ಸೆಕೆಂಡ್‌ಗಳು ಇದೆ ಅನ್ನುವಾಗ ಅಂಕ ಗಳಿಸಿ ಅಂಕ ಸರಿದೂಗಿಸಿಕೊಂಡರು.



ಅಸಲಿಗೆ ಅಂಕ 2-2ರಲ್ಲಿತ್ತು. ಆದರೆ ಕೊನೇ ಕ್ಷಣದಲ್ಲಿ ಅಂಕ ಗಳಿಸಿದ ಮಂಗೋಲಿಯನ್ ರಸ್ಲರ್ ವಿಜೇತರೆಂದು ಘೋಷಿಸಲಾಯ್ತು. 2017 ಮತ್ತು 2018ರಲ್ಲಿ ಕ್ಯಾಡೆಟ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿದ್ದ ಸೋನಂ, ಕಳೆದ ಏಪ್ರಿಲ್‌ನಲ್ಲಿ ಕಝಕೀಸ್ತಾನದ ಅಲ್ಮೆಟಿಯಲ್ಲಿ ನಡೆದಿದ್ದ ಏಷ್ಯನ್ ಕ್ವಾಲಿಫೈಯರ್ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದರು.

(Kannada Copy of Mykhel Kannada)