ಒಲಿಂಪಿಕ್ ; ರೆಸ್ಲಿಂಗ್ ಫೈನಲಿನಲ್ಲಿ ಮುಗ್ಗರಿಸಿದ ರವಿ ದಾಹಿಯಾ, ಭಾರತಕ್ಕೆ ಮತ್ತೊಂದು ಬೆಳ್ಳಿ !

05-08-21 05:25 pm       Mykhel: Madhu   ಕ್ರೀಡೆ

57 ಕೆಜಿ ವಿಭಾಗದ ರೆಸ್ಲಿಂಗ್‌ ಫೈನಲ್ ಸ್ಪರ್ಧೆಯಲ್ಲಿ ಭಾರತದ ರವಿಕುಮಾರ್ ದಾಹಿಯಾ ಭಾರತಕ್ಕೆ ಎರಡನೇ ಬೆಳ್ಳಿ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಟೋಕಿಯೋ, ಆಗಸ್ಟ್ 5: 57 ಕೆಜಿ ವಿಭಾಗದ ರೆಸ್ಲಿಂಗ್‌ ಫೈನಲ್ ಸ್ಪರ್ಧೆಯಲ್ಲಿ ಭಾರತದ ರವಿಕುಮಾರ್ ದಾಹಿಯಾ ಸೋಲು ಕಂಡಿದ್ದಾರೆ. ಹೀಗಾಗಿ ಚಿನ್ನದ ಪದಕ ಗೆಲ್ಲುವ ಪ್ರಯತ್ನದಲ್ಲಿ ಭಾರತ ವಿಫಲವಾಗಿದೆ. ಆದರೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಎರಡನೇ ಬೆಳ್ಳಿಯ ಪದಕ ಗೆಲ್ಲುವಲ್ಲಿ ಭಾರತ ಯಶಸ್ವಿಯಾಗಿದೆ.

ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌರ್ ಉಗುವ್ ವಿರುದ್ಧದ ಫೈನಲ್‌ನಲ್ಲಿ ರವಿ ಕುಮಾರ್ ದಾಹಿಯಾ ಹಿನ್ನಡೆಯನ್ನು ಅನುಭವಿಸಿದರು. ಮೊದಲ ಹಂತದಲ್ಲಿ 2-4 ಅಂತರದಿಂದ ಹಿನ್ನೆಡೆಯಲ್ಲಿದ್ದ ರವಿ ಕುಮಾರ್ ಬಳಿಕ 4-7 ಅಂತರದಿಂದ ಸೋಲು ಕಂಡರು. ಈ ಮೂಲಕ ರವಿ ಕುಮಾರ್ ಚಿನ್ನದ ಪದಕವನ್ನು ಗೆಲ್ಲುವಲ್ಲಿ ವಿಫಲವಾದರು. ಆದರೆ ಟೋಕಿಯೋ ಒಲಿಂಪಿಕಲ್ಸ್‌ನಲ್ಲಿ ಭಾರತಕ್ಕೆ ಎರಡನೇ ಬೆಳ್ಳಿ ಪದಕವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇದಕ್ಕೂ ಮುನ್ನ ಭಾರತದ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.



ಈ ಸಾಧನೆಯೊಂದಿಗೆ ರವಿ ಕುಮಾರ್ ದಾಹಿಯ ಒಲಿಂಪಿಕ್ಸ್‌ನಲ್ಲಿ ರೆಸ್ಲಿಂಗ್‌ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಎರಡನೇ ಕ್ರೀಡಾಪಟು ಎನಿಸಿದ್ದಾರೆ. ಇದಕ್ಕೂ ಮುನ್ನ 2012ರ ಲಂಡನ್ ಒಲಿಂಪಿಕ್ಸ್‌ನ ರಸ್ಲಿಂಗ್‌ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಪುರುಷರ ರಸ್ಲಿಂಗ್‌ನಲ್ಲಿ ಭಾರತ ಪದಕ ಗೆದ್ದುಕೊಂಡಿದೆ. ಫೈನಲ್ ಸ್ಪರ್ಧೆಯಲ್ಲಿ ಮೊದಲ ಹಂತದಲ್ಲಿ ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌರ್ ಉಗುವ್ ವಿರುದ್ಧ 2-4 ಅಂತರದಿಂದ ಹಿನ್ನೆಡೆ ಅನುಭವಿಸಿದ್ದರು. ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌರ್ ಉಗುವ್ ತಮಗಿದ್ದ ಮುನ್ನಡೆಯನ್ನು ಅಂತ್ಯದವರೆಗೂ ಕಾಯ್ದುಕೊಂಡಿದ್ದಲ್ಲದೆ ಹೆಚ್ಚು ಅಂಕವನ್ನು ಗಳಿಸಲು ಯಶಸ್ವಿಯಾದರು. ಈ ಮೂಲಕ ಭಾರತದ ಸ್ಪರ್ಧಿ ಅಂತಿಮ ಘಟ್ಟದಲ್ಲಿ ಸೋಲು ಕಾಣುವಂತಾಯಿತು.

(Kannada Copy of Mykhel Kannada)