ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ!! ಭಾರತಕ್ಕೆ ಮೊಟ್ಟಮೊದಲ ಅತ್ಲೆಟಿಕ್ಸ್ ಸ್ವರ್ಣ !!

07-08-21 05:46 pm       Headline Karnataka News Network   ಕ್ರೀಡೆ

ಜಾವ್ಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. 87.58 ಮೀಟರ್ ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ಇತಿಹಾಸ ಸೃಷ್ಟಿಸಿದ್ದು, ವಿಶ್ವದ ಗಮನ ಗೆದ್ದಿದ್ದಾರೆ.

ನವದೆಹಲಿ, ಆಗಸ್ಟ್ 7: ಭಾರತೀಯ ಕ್ರೀಡಾಭಿಮಾನಿಗಳ ಪಾಲಿಗೆ ಇಂದು ಮರೆಯಲಾರದ ದಿನ. ಇದೇ ಮೊದಲ ಬಾರಿಗೆ ಭಾರತೀಯನೊಬ್ಬ ಒಲಿಂಪಿಕ್ ಅತ್ಲೀಟ್ ವಿಭಾಗದಲ್ಲಿ ಚಿನ್ನದ ಬೇಟೆಯಾಡಿ ಇತಿಹಾಸ ಸೃಷ್ಟಿಸಿದ್ದಾನೆ. ಜಾವ್ಲಿನ್ ಥ್ರೋ ವಿಭಾಗದಲ್ಲಿ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದಾರೆ. 87.58 ಮೀಟರ್ ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ಹೊಸ ಚರಿತ್ರೆ ಸೃಷ್ಟಿಸಿದ್ದು, ವಿಶ್ವದ ಗಮನ ಗೆದ್ದಿದ್ದಾರೆ.

ಭಾರತದ ಯಾವುದೇ ಅತ್ಲೀಟ್ ಒಲಿಂಪಿಕ್ ನಲ್ಲಿ ಈವರೆಗೆ ಪದಕ ಪಡೆದಿದ್ದೇ ಇಲ್ಲ. ಆಫ್ರಿಕನ್ ಮೂಲದವರು ಅಥವಾ ಜರ್ಮನಿ, ಚೀನಾ ಮೂಲದವರು ಮಾತ್ರ ಅತ್ಲೀಟ್ ನಲ್ಲಿ ಪ್ರಾಬಲ್ಯ ಪಡೆದಿದ್ದರು. ಅಂಥದ್ದರಲ್ಲಿ ಭಾರತದ ನೀರಜ್ ಚೋಪ್ರಾ ಜಾವ್ಲಿನ್ ಥ್ರೋ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.

ಚೋಪ್ರಾ ಮೊದಲ ಅರ್ಹತಾ ಸುತ್ತಿನಲ್ಲೇ 86.59 ಮೀಟರ್ ದೂರಕ್ಕೆ ಜಾವ್ಲಿನ್ ಎಸೆದು ಗಮನ ಸೆಳೆದಿದ್ದರು. ಅರ್ಹತಾ ಸುತ್ತಿನಲ್ಲಿ ಅತ್ಯಂತ ಹೆಚ್ಚು ದೂರಕ್ಕೆ ಎಸೆದಿದ್ದು ಈ ಬಾರಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಎರಡನೇ ಸುತ್ತಿನಲ್ಲಿ 87.58 ಮೀಟರ್ ದೂರಕ್ಕೆ ಎಸೆದು ಪದಕ ಗೆಲ್ಲುವತ್ತ ಮತ್ತಷ್ಟು ಹತ್ತಿರವಾಗಿದ್ದರು. ಕೊನೆಗೆ, ಇದೇ 87.58 ಮೀಟರ್ ಉದ್ದಕ್ಕೆ ಎಸೆದ ಸಾಧನೆಯನ್ನು ಅತಿ ಗರಿಷ್ಠವೆಂದು ಪರಿಗಣಿಸಿ ಚಿನ್ನದ ಪದಕದ ಘೋಷಣೆ ಮಾಡಲಾಗಿದೆ.

ಜೆಕ್ ರಿಪಬ್ಲಿಕ್ ದೇಶದ ವೆಡ್ಲೆಜ್ ಜೇಕಬ್ 86.67 ಮೀಟರ್ ಸಾಧನೆಯ ಮೂಲಕ ಎರಡನೇ ಸ್ಥಾನಿಯಾದರು. ಅದೇ ದೇಶದ ವೆಸ್ಲೀ ಎಂಬಾತ 85.44 ಮೀಟರ್ ದೂರದ ಸಾಧನೆಯ ಮೂಲಕ ತೃತೀಯ ಸ್ಥಾನಿಯಾಗಿದ್ದಾರೆ. ಭಾರತದ ಪಾಲಿಗೆ ಎರಡನೇ ವೈಯಕ್ತಿಕ ಸ್ವರ್ಣದ ಸಾಧನೆಯಿದು. ಈ ಹಿಂದೆ ಶೂಟರ್ ಅಭಿನವ್ ಬಿಂದ್ರಾ ಚಿನ್ನದ ಸಾಧನೆ ಮಾಡಿದ್ದರು. 

Javelin thrower Neeraj Chopra won a historic athletics gold medal to become India's second ever individual Olympic gold medallist after shooter Abhinav Bindra. Wrestler Bajrang Punia