ಬ್ರೇಕಿಂಗ್ ನ್ಯೂಸ್
07-08-21 10:28 pm Giridhar Shetty ಕ್ರೀಡೆ
Photo credits : Getty Images
ನವದೆಹಲಿ, ಆಗಸ್ಟ್ 7: ಆತ 12 ವರ್ಷದ ಬಾಲಕನಿದ್ದಾಗ ಬೊಜ್ಜು ಬೆಳೆದು ಧಡೂತಿಯಾಗಿದ್ದ. ಸಣ್ಣ ಪ್ರಾಯದಲ್ಲೇ 90 ಕೇಜಿ ತೂಗಿದ್ದರಿಂದ ಈತ ಸುಧಾರಿಸುವುದಿಲ್ಲ ಎಂದುಕೊಂಡು ಹೆತ್ತವರು ಗ್ರೌಂಡಿಗೆ ಕಳಿಸಿದ್ದರು. ವ್ಯಾಯಾಮ ಮಾಡಿ ಬೊಜ್ಜು ಕರಗಿಸುವಂತೆ ಹೇಳಿ, ಬಲವಂತದಿಂದ ಮೈದಾನಕ್ಕೆ ಕಳಿಸುತ್ತಿದ್ದರು. ಆದರೆ, ಬೊಜ್ಜು ಕರಗಿಸಲೆಂದು ಓಡುವುದು, ವ್ಯಾಯಾಮ ಅಭ್ಯಾಸ ಮಾಡುತ್ತಿದ್ದಾಗಲೇ ಅಲ್ಲಿ ಕೆಲವರು ಜಾವಲಿನ್ ತ್ರೋ ಮಾಡುತ್ತಿರುವುದನ್ನು ನೋಡಿ ಆಕರ್ಷಿತನಾಗಿದ್ದ.
ನಾನೂ ಒಂದು ಕೈ ಯಾಕೆ ನೋಡಬಾರದೆಂದು ಹೇಳಿ ಪ್ರಯತ್ನ ಪಟ್ಟಿದ್ದ. ಈಟಿ ರೀತಿಯ ಭರ್ಚಿಯನ್ನು ಹೇಗೆ ಎಸೆಯಬೇಕೆಂದೂ ತಿಳಿಯದ ಹುಡುಗ ಭರ್ಚಿ ಕೈಯಲ್ಲಿ ಹಿಡಿದಿದ್ದ. ನೋಡ ನೋಡುತ್ತಲೇ ಅಲ್ಲಿ ಅಭ್ಯಾಸ ನಡೆಸುತ್ತಿದ್ದವರನ್ನೇ ಬೆರಗಾಗಿಸುವ ರೀತಿ ಈಟಿಯನ್ನು ಅತ್ಯಂತ ದೂರಕ್ಕೆ ಎಸೆದಿದ್ದ. ಸುಮ್ಮನೆ ಒಂದು ಕೈ ನೋಡುವ ಎಂದು ಎಸೆಯಲು ಅಭ್ಯಾಸ ಮಾಡಿದ್ದ ಹುಡುಗ ಬರ ಬರುತ್ತಾ ಈಟಿ ಎಸೆತದಲ್ಲಿ ಪಳಗಲಾರಂಭಿಸಿದ್ದ. ಹರ್ಯಾಣದ ಪಾಣಿಪತ್ ನಲ್ಲಿರುವ ಶಿವಾಜಿ ಸ್ಟೇಡಿಯಂನಲ್ಲಿ ಇತರ ಹುಡುಗರ ಜೊತೆ ಈಟಿ ಎಸೆಯುತ್ತಲೇ ಸಾಧನೆಯತ್ತ ಮುನ್ನುಗ್ಗಿದ್ದಾನೆ. ಧಡೂತಿ ದೇಹಿಯಾಗಿದ್ದ ಹುಡುಗ ಬಾಲಿವುಡ್ ಸಿನಿಮಾ ನಟನ ರೀತಿ ಮೈಕಟ್ಟು ಬೆಳೆಸಿಕೊಂಡು ಮಿಂಚತೊಡಗಿದ್ದ.
ಈ ಹುಡುಗ ಮುಂದಕ್ಕೆ ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲುತ್ತಾನೆ, ಭಾರತಕ್ಕೆ ಮೊಟ್ಟಮೊದಲ ಅತ್ಲೆಟಿಕ್ ಸ್ವರ್ಣ ದೊರಕಿಸುತ್ತಾನೆ, ಕ್ರೀಡಾ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಾನೆಂದು ಯಾರು ಕೂಡ ಅಂದ್ಕೊಂಡಿರಲಿಲ್ಲ. ಯಾಕಂದ್ರೆ, ಆತ ಬಂದಿದ್ದೇ ಹೇಳಿ ಕೇಳಿ ತನ್ನ ಬೊಜ್ಜು ಕರಗಿಸಲು. ಸಾಧನೆ ಮಾಡಬೇಕೆಂಬ ಗುರಿ ಇಟ್ಟುಕೊಂಡು ಬಂದಿರಲಿಲ್ಲ. ಜೊತೆಗೆ, ಆತನ ಹೆತ್ತವರಿಗೂ ಮಗ ಕ್ರೀಡಾ ಸಾಧಕನಾಗಬೇಕು ಎಂಬ ಹೆಬ್ಬಯಕೆಯೂ ಇದ್ದಿರಲಿಲ್ಲ. ಆದರೆ, ಮೊದಲ ಕೋಚ್ ಆಗಿದ್ದ ಜೈ ಚೌಧರಿ ಹುಡುಗನಲ್ಲಿದ್ದ ಅಸಾಧಾರಣ ಸಾಮರ್ಥ್ಯವನ್ನು ಆಗಲೇ ಕಂಡಿದ್ದರೇನೋ..
ಚಪ್ಪಲಿ ಕಳ್ಳನನ್ನು ಪಳಗಿಸಿದ್ದ ಅವಿನಾಶ್
ಕನ್ನಡದ ಚಿನ್ನಾರಿ ಮುತ್ತ ಚಿತ್ರದಲ್ಲಿ ಚಪ್ಪಲಿ ಹಿಡಿದು ಓಟಕ್ಕಿತ್ತಿದ್ದ ಹುಡುಗನ ಓಟವನ್ನು ನೋಡಿಯೇ ಕ್ರೀಡಾ ಕೋಚ್ ಆಗಿದ್ದ ಅವಿನಾಶ್ ಹುಡುಗನ ಓಟದ ಸಾಮರ್ಥ್ಯದ ಬಗ್ಗೆ ಬೆರಗಾಗಿದ್ದರು. ಆನಂತರ, ಚಪ್ಪಲಿ ಕಳ್ಳನಾಗಿದ್ದ ಹುಡುಗನಿಗೆ ತಾನೇ ಕೋಚಿಂಗ್ ಕೊಟ್ಟು ಬೆಳೆಸಿ, ಓಟದ ಸಾಧನೆಯಲ್ಲಿ ಮೊದಲಿಗನಾಗಿ ಮಾಡುತ್ತಾರೆ, ನಟ ಅವಿನಾಶ್. ಅದೇ ರೀತಿಯ ಸಾಧನೆ ಈಗ ನೀರಜ್ ಚೋಪ್ರಾ ಪಾಲಿಗೆ ನಿಜವಾಗಿದೆ.
ನೀರಜ್ ಚೋಪ್ರಾ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಲೇ ಆತನಿಗೆ ವಿದೇಶಿ ಕೋಚ್ ಮೂಲಕ ತರಬೇತಿ ಕೊಡಿಸಿದ್ದಾರೆ. ಆಸ್ಟ್ರೇಲಿಯಾ ಮೂಲದ ಗ್ಯಾರಿ ಕ್ಯಾಲ್ವರ್ಟ್ ಭಾರತದ ಜಾವ್ಲಿನ್ ತಂಡಕ್ಕೆ ರಾಷ್ಟ್ರೀಯ ಕೋಚ್ ಆಗಿದ್ದರು. ನೀರಜ್ ಚೋಪ್ರಾನಲ್ಲಿ ಮೊಳಕೆಯಲ್ಲೇ ಇದ್ದ ಬೆಳೆಯ ಸಿರಿಯನ್ನು ಕಂಡ ಗ್ಯಾರಿ, ಅದಕ್ಕೆ ನೀರೆರೆದಿದ್ದರು. ಅದೇ ಕಾರಣದಿಂದ 2016ರಲ್ಲಿ ಹಾಲೆಂಡ್ ನಲ್ಲಿ ನಡೆದ ವಿಶ್ವ ಅಂಡರ್ 20 ಚಾಂಪ್ಯನ್ ಶಿಪ್ ನಲ್ಲಿ ಕೇವಲ 19 ವರ್ಷದ ಬಾಲಕ ನೀರಜ್ ಭಾರತಕ್ಕೆ ಮೊಟ್ಟಮೊದಲ ಅತ್ಲೀಟ್ ಗೋಲ್ಡ್ ತಂದುಕೊಟ್ಟಿದ್ದರು. ನೀರಜ್ ಪಾಲಿಗೆ ಅದು ಮೊದಲ ಅಂತಾರಾಷ್ಟ್ರೀಯ ಗೋಲ್ಡ್ ಕೂಡ ಆಗಿತ್ತು.
19 ವರ್ಷದ ಒಳಗಿರುವಾಗಲೇ ಅತ್ಲೀಟ್ ಸಾಧನೆ ಮಾಡಿದ್ದರಿಂದ ನೀರಜ್ ಚೋಪ್ರಾನಿಗೆ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿ ಕೆಲಸ ಕೊಡಲಾಗಿತ್ತು. ಆದರೆ, ಸೇನೆಯಲ್ಲಿ ಅಧಿಕಾರಿಯಾಗಿದ್ದರೂ, ಆತನಿಗೆ ಪೂರ್ಣ ಮಟ್ಟದಲ್ಲಿ ಜಾವಲಿನ್ ತರಬೇತಿ ಪಡೆಯಲು ಸರಕಾರದ ಕಡೆಯಿಂದಲೇ ಸೂಚನೆ ಇತ್ತು. 2019ರಲ್ಲಿ ಉವೇ ಹಾನ್ ಜಾವೆಲಿನ್ ತಂಡಕ್ಕೆ ರಾಷ್ಟ್ರೀಯ ಕೋಚ್ ಆಗಿದ್ದರು. ಭಾರತದಲ್ಲಿ ಪ್ರತಿಭೆಗಳಿದ್ದರೂ, ಸಾಕಷ್ಟು ಪ್ರೋತ್ಸಾಹ ಸಿಗದೇ ಇರುವ ಬಗ್ಗೆ ಸ್ಪೋರ್ಟ್ ಆಥಾರಿಟಿ ಆಫ್ ಇಂಡಿಯಾಕ್ಕೆ(ಎಸ್ಎಐ) ಪತ್ರ ಬರೆದಿದ್ದರು. ನುರಿತ ಸಪೋರ್ಟಿವ್ ಸ್ಟಾಫ್, ಅಗತ್ಯ ಸೌಲಭ್ಯ, ಡಯಟ್ ಎಲ್ಲ ಬೇಕಾಗುತ್ತದೆ ಎಂದು ಕ್ರೀಡಾ ಇಲಾಖೆಗೆ ಬರೆದ ಪತ್ರಕ್ಕೆ ತುರ್ತು ಸ್ಪಂದನೆ ಸಿಕ್ಕಿತ್ತು.
ಅದೇ ಕಾರಣದಿಂದ ಜರ್ಮನ್ ಮೂಲದ ಬಯೋ ಎಕ್ಸ್ ಪರ್ಟ್ ಆಗಿದ್ದ ಡಾ. ಕ್ಲಾಸ್ ಬರ್ಟೋನಿಡ್ಜ್ ಅವರನ್ನು ಸಪೋರ್ಟಿವ್ ಸ್ಟಾಫ್ ಆಗಿ ಸೇರ್ಪಡೆ ಮಾಡಲಾಗಿತ್ತು. ಎರಡು ವರ್ಷಗಳಿಂದ ಬರ್ಟೋನಿಡ್ಜ್ ಕಡೆಯಿಂದ ದೊರೆತ ತರಬೇತಿ ನೀರಜ್ ಚೋಪ್ರಾ ಪಾಲಿಗೆ ಮತ್ತಷ್ಟು ಪ್ಲಸ್ ಆಗಿತ್ತು. ಈ ಬಾರಿಯ ಟೋಕಿಯೋ ಒಲಿಂಪಿಕ್ ಅರ್ಹತಾ ಸುತ್ತಿನಲ್ಲೇ ಎಸೆದ ಮೊದಲ ಎಸೆತವೇ (86.6 ಮೀಟರ್) ನೀರಜ್ ಚೋಪ್ರಾನನ್ನು ಪದಕ ಖಚಿತ ಮಾಡಿಸಿತ್ತು. ಮೊದಲ ಬಾರಿಗೆ ಭಾರತೀಯನೊಬ್ಬ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಟಾಪರ್ ಆಗಿದ್ದ.
ನೀರಜ್ ಚೋಪ್ರಾನಿಗೆ ಸ್ಫೂರ್ತಿಯಾಗಿ ಕಂಡಿದ್ದು ಜೆಕ್ ರಿಪಬ್ಲಿಕ್ಕಿನ ಜಾನ್ ಜೆಲೆನ್ಝಿ ಎಂಬ ಜಾವಲಿನ್ ತಾರೆ. ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಜಾನ್ 86.47 ಮೀಟರ್ ಎಸೆಯುವ ಮೂಲಕ ಗೋಲ್ಡ್ ಸಂಪಾದಿಸಿದ್ದ. 2018ರಲ್ಲಿ ದೋಹಾ ಡೈಮಂಡ್ ಲೀಗ್ ನಲ್ಲಿ ಜಾನ್ 87.43 ಮೀಟರ್ ಎಸೆಯುವ ಮೂಲಕ ಜಾನ್ ಮತ್ತೊಂದು ರೆಕಾರ್ಡ್ ಮಾಡಿದ್ದ. ಇದನ್ನು ನೋಡಿದ ನೀರಜ್ ಚೋಪ್ರಾ ಆತನ ರೀತಿಯಲ್ಲೇ ಎಸೆಯಲು ಆರಂಭಿಸಿದ್ದ. 2018ರ ಏಶ್ಯನ್ ಗೇಮ್ಸ್ ನಲ್ಲಿ ನೀರಜ್ ಚೋಪ್ರಾ 88 ಮೀಟರ್ ಎಸೆಯುವ ಮೂಲಕ ಅಚ್ಚರಿಯ ಸಾಧನೆ ಮಾಡಿದ್ದ. ಅಂಡರ್ 19ರ ವಿಭಾಗದಲ್ಲಿ ಗೋಲ್ಡ್ ಸಂಪಾದನೆ ಮಾಡಿದ್ದ.
ಕಳೆದ ಎರಡು ವರ್ಷದಲ್ಲಿ ಒಲಿಂಪಿಕ್ ಸಾಧನೆಗಾಗಿ ಹಾಲೆಂಡ್ ನಲ್ಲಿ ತರಬೇತಿ ಪಡೆಯುತ್ತಿದ್ದ. ಭಾರತ ತಂಡದ ರಾಷ್ಟ್ರೀಯ ಕೋಚ್ ಆಗಿ ನೇಮಕಗೊಂಡಿದ್ದ ಡಾ.ಕ್ಲಾಸ್ ಬರ್ಟ್ರೋನಿಡ್ಜ್ ನೀರಜ್ ಪಾಲಿಗೆ ಪರ್ಸನಲ್ ಕೋಚ್ ಕೂಡ ಆಗಿದ್ದರು. ಎಳವೆಯಲ್ಲಿ ಜೈ ಚೌಧರಿ ಗುರುತಿಸಿದ್ದ ನೀರಜ್ ಚೋಪ್ರಾ ಭಾರತವನ್ನು ಕ್ರೀಡಾ ಜಗತ್ತಿನಲ್ಲಿ ಎತ್ತರಕ್ಕೆ ಒಯ್ದಿದ್ದಾನೆ. ಅದಕ್ಕಿಂತಲೂ ನೀರಜ್ ಗೆದ್ದ ಒಲಿಂಪಿಕ್ ಬಂಗಾರ ಭಾರತದ ಅತ್ಲೀಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸರಕಾರದ ಕಡೆಯಿಂದ ಸಿಕ್ಕ ಪ್ರೋತ್ಸಾಹ, ಅತ್ಯುತ್ತಮ ತರಬೇತಿ ಒಬ್ಬ ಸಾಮಾನ್ಯನನ್ನೂ ವರ್ಲ್ಡ್ ಚಾಂಪ್ಯನ್ ಆಗುವಂತೆ ಮಾಡಿದ್ದು ಚಿನ್ನಾರಿ ಮುತ್ತನ ಸಾಧನೆಯಷ್ಟೇ ಸರಿ.
Neeraj Chopra on Saturday became only the second Indian to win an individual gold in the Olympics, out-performing the field by quite a distance to notch up the first track-and-field Games medal for the country. The 23-year-old farmer’s son from Khandra village near Panipat in Haryana produced the second throw of 87.58m in the finals to stun the athletics world and end India’s 100-year wait for a track and field medal in the Olympics. Chopra won the country’s seventh medal and first gold in this Olympics and joined shooter Abhinav Bindra (2008 Beijing Games) as India’s individual gold winners in the showpiece. With this, the country surpassed the previous best haul of six medals achieved in the 2012 London Games. Neeraj Chopra will be taking the flag for India at the Tokyo Olympics closing ceremony.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm