IPL 2022 Auction, ಮೆಗಾ ಹರಾಜು ನೇರ ಪ್ರಸಾರದ ವಿವರ!

12-02-22 02:19 pm       Source: Vijayakarnataka   ಕ್ರೀಡೆ

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರ ಮೆಗಾ ಹರಾಜು ಇಂದು ನಡೆಯುತ್ತಿದ್ದು, ತಮ್ಮ-ತಮ್ಮ ಬೇಡಿಕೆಗೆ ಅನುಗುಣವಾಗಿ ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಲಿವೆ.

ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಆಟಗಾರರ ಮೆಗಾ ಹರಾಜು ಇಂದು ಆರಂಭವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮ್ಮ-ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಆಟಗಾರರನ್ನು ಖರೀದಿಸಲಿವೆ. ಹರಾಜಿನಲ್ಲಿ ಗರಿಷ್ಠ ಬೆಲೆ 2 ಕೋಟಿ ರೂ. ಗಳಿದ್ದು, ಕನಿಷ್ಠ ಬೆಲೆ 20 ಲಕ್ಷ ರೂ. ಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 33 ಆಟಗಾರರು ಈಗಾಗಲೇ ಆಯಾ ತಂಡಗಳಲ್ಲಿ ಉಳಿದುಕೊಂಡಿದ್ದು, ಇನ್ನುಳಿದ ಸ್ಥಾನಗಳಿಗೆ ಫ್ರಾಂಚೈಸಿಗಳು ಇಂದು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿವೆ.

10.75 ಕೋಟಿ ರೂ. ಗಳಿಗೆ ಆರ್‌ಸಿಬಿ ಸೇರಿದ ಹರ್ಷಲ್‌ ಪಟೇಲ್.

8.75 ಕೋಟಿ ರೂ. ಗಳೀಗೆ ಲಖನೌ ಸೂಪರ್‌ ಜಯಂಟ್ಸ್‌ಗೆ ಜೇಸನ್ ಹೋಲ್ಡರ್‌.

8 ಕೋಟಿ ರೂ. ಗಳಿಗೆ ಕೆಕೆಆರ್‌ ಸೇರಿದ ನಿತೀಶ್‌ ರಾಣಾ.

ದೇವದತ್‌ ಪಡಿಕ್ಕಲ್‌ 7.75 ಕೋಟಿ ರೂ. ಗಳಿಗೆ ರಾಜಸ್ಥಾನ್‌ ರಾಯಲ್ಸ್‌ ಸೇರಿದ್ದಾರೆ.

ಡ್ವೇನ್‌ ಬ್ರಾವೊ 4.40 ಕೋಟಿ ರೂ. ಗಳಿಗೆ ಸಿಎಸ್‌ಕೆಗೆ ಮರಳಿದ್ದಾರೆ.

ಜೇಸನ್‌ ರಾಯಲ್‌ ಮತ್ತು ರಾಬಿನ್‌ ಉತ್ತಪ್ಪ 2 ಕೋಟಿ ರೂ. ಬೆಲೆಗೆ ಕ್ರಮವಾಗಿ ಗುಜರಾತ್ ಮತ್ತು ಚೆನ್ನೈ ತಂಡ ಸೇರಿದ್ದಾರೆ.

 8.5 ಕೋಟಿ ರೂ. ಬೆಲೆಗೆ ರಾಜಸ್ಥಾನ್‌ ರಾಯಲ್ಸ್‌ ಸೇರಿದ ಶಿಮ್ರಾನ್‌ ಹೆಟ್ಮಾಯೆರ್‌.

4.6 ಕೋಟಿ ರೂ. ಬೆಲೆಗೆ ಲಖನೌ ತಂಡ ಸೇರಿದ ಮನೀಷ್‌ ಪಾಂಡೆ.

6.25 ಕೋಟಿ ರೂ. ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್‌ ಡೇವಿಡ್‌ ವಾರ್ನರ್‌ ಖರೀದಿಸಿದೆ.

6.75 ಕೋಟಿ ರೂ. ಬೆಲೆಗೆ ಲಖನೌ ಸೂಪರ್‌ ಜಯಂಟ್ಸ್‌ ಸೇರಿದ ಕ್ವಿಟಂನ್‌ ಡಿ'ಕಾಕ್‌.

7 ಕೋಟಿ ರೂ. ಬೆಲೆಗೆ ಫಾಫ್‌ ಡು'ಪ್ಲೆಸಿಸ್‌ ಆರ್‌ಸಿಬಿ ಸೇರಿದ್ದಾರೆ. ಚೆನ್ನೈ ಪರ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದ ಫಾಫ್‌ಗೆ ಚಾಲೆಂಜರ್ಸ್‌ ಮಣೆ ಹಾಕಿದೆ.

6.25 ಕೋಟಿ ರೂ. ಬೆಲೆಗೆ ಗುಜರಾತ್‌ ಟೈಟನ್ಸ್‌ ಸೇರಿದ ಮೊಹಮ್ಮದ್‌ ಶಮಿ.

12.25 ಕೋಟಿಗೆ ಕೆಕೆಆರ್‌ ಪಾಲಾದ ಶ್ರೇಯಸ್‌ ಅಯ್ಯರ್‌.

ನ್ಯೂಜಿಲೆಂಡ್‌ ತಂಡದ ಟ್ರೆಂಟ್‌ ಬೌಲ್ಟ್‌ 8 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸೇರಿದ್ದಾರೆ.

  • ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ 9.25 ಕೋಟಿ ರೂ. ಗಳಿಗೆ ಪಂಜಾಬ್ ಕಿಂಗ್ಸ್‌ ಪಾಲಾಗಿದ್ದಾರೆ.
  • ಆಸ್ಟ್ರೇಲಿಯಾ ತಂಡದ ಪ್ಯಾಟ್‌ ಕಮಿನ್ಸ್‌ ಅವರು 7.25 ಕೋಟಿ ರೂಗಳಿಗೆ ಮತ್ತೆ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಪಾಲಾಗಿದ್ದಾರೆ. ಅವರ ಮೂಲ ಬೆಲೆ 2 ಕೋಟಿ ರೂ. ಗಳಾಗಿತ್ತು.
  • ಆರ್‌ ಅಶ್ವಿನ್‌ ಅವರನ್ನು 5 ಕೋಟಿ ರೂ. ಗಳಿಗೆ ರಾಜಸ್ಥಾನ್ ರಾಯಲ್ಸ್‌ ಖರೀದಿಸಿದೆ. ಇವರ ಮೂಲ ಬೆಲೆ ಎರಡು ಕೋಟಿ ರೂ. ಗಳಾಗಿತ್ತು.
  • ಎರಡು ಕೋಟಿ ರೂ. ಮೂಲ ಬೆಲೆಯ ಶಿಖರ್‌ ಧವನ್‌ ಅವರು ಮೆಗಾ ಹರಾಜಿನಲ್ಲಿ 8.25 ಕೋಟಿ ರೂ. ಗಳಿಗೆ ಪಂಜಾಬ್ ಕಿಂಗ್ಸ್‌ ಪಾಲಾಗಿದ್ದಾರೆ.ತಂಡಗಳ ಪರ್ಸ್‌ ಮೊತ್ತ ಹೀಗಿದೆ
  • ಸಿಎಸ್‌ಕೆ: ಪರ್ಸ್‌ ಮೊತ್ತ 48 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಡೆಲ್ಲಿ ಕ್ಯಾಪಿಟಲ್ಸ್‌: ಪರ್ಸ್‌ ಮೊತ್ತ 47.5 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಕೋಲ್ಕತಾ ನೈಟ್‌ ರೈಡರ್ಸ್‌: ಪರ್ಸ್‌ ಮೊತ್ತ 48 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 6 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಲಖನೌ ಸೂಪರ್‌ ಜಯಂಟ್ಸ್‌: ಪರ್ಸ್‌ ಮೊತ್ತ 59 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಮುಂಬೈ ಇಂಡಿಯನ್ಸ್‌: ಪರ್ಸ್‌ ಮೊತ್ತ 48 ಕೋಟಿ ರೂ., ಒಟ್ಟು 21 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಪಂಜಾಬ್ ಕಿಂಗ್ಸ್‌: ಪರ್ಸ್‌ ಮೊತ್ತ 72 ಕೋಟಿ ರೂ., ಒಟ್ಟು 23 ಆಟಗಾರರನ್ನು ಖರೀದಿಸಬಹುದು, 8 ವಿದೇಶಿಗರನ್ನು ಖರೀದಿಸಲು ಅವಕಾಶ.
  • ರಾಜಸ್ಥಾನ್‌ ರಾಯಲ್ಸ್‌: ಪರ್ಸ್‌ ಮೊತ್ತ 62 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಆರ್‌ಸಿಬಿ: ಪರ್ಸ್‌ ಮೊತ್ತ 57 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಸನ್‌ರೈಸರ್ಸ್‌ ಹೈದರಾಬಾದ್‌: ಪರ್ಸ್‌ ಮೊತ್ತ 68 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.
  • ಅಹ್ಮದಾಬಾದ್ ತಂಡ: ಪರ್ಸ್‌ ಮೊತ್ತ 52 ಕೋಟಿ ರೂ., ಒಟ್ಟು 22 ಆಟಗಾರರನ್ನು ಖರೀದಿಸಬಹುದು, 7 ವಿದೇಶಿಗರನ್ನು ಖರೀದಿಸಲು ಅವಕಾಶ.

 10 ತಂಡಗಳಲ್ಲಿ ಈಗಾಗಲೇ ಇರುವ ಆಟಗಾರರು

  1. ಅಹ್ಮದಾಬಾದ್‌ ಫ್ರಾಂಚೈಸಿ: ಹಾರ್ದಿಕ್‌ ಪಾಂಡ್ಯ, ಶುಭಮನ್ ಗಿಲ್, ರಶೀದ್‌ ಖಾನ್‌
  2. ಚೆನ್ನೈ ಸೂಪರ್‌ ಕಿಂಗ್ಸ್‌: ರವೀಂದ್ರ ಜಡೇಜಾ, ಎಂಎಸ್‌ ಧೋನಿ, ಮೊಯೀನ್‌ ಅಲಿ, ಋತುರಾಜ್‌ ಗಾಯಕ್ವಾಡ್‌
  3. ಡೆಲ್ಲಿ ಕ್ಯಾಪಿಟಲ್ಸ್‌: ರಿಷಭ್ ಪಂತ್‌, ಪೃಥ್ವಿ ಶಾ, ಅಕ್ಷರ್‌ ಪಟೇಲ್‌, ಎನ್ರಿಕ್‌ ನೊರ್ಕಿಯ
  4. ಕೋಲ್ಕತಾ ನೈಟ್‌ ರೈಡರ್ಸ್‌: ಸುನಿಲ್‌ ನರೈನ್‌, ಆಂಡ್ರೆ ರೆಸಲ್‌, ವರುಣ್‌ ಚಕ್ರವರ್ತಿ, ವೆಂಕಟೇಶ್‌ ಅಯ್ಯರ್‌
  5. ಲಖನೌ ಸೂಪರ್‌ ಜಯಂಟ್ಸ್‌: ಕೆಎಲ್‌ ರಾಹುಲ್‌, ಮಾರ್ಕಸ್‌ ಸ್ಟೋಯ್ನಿಸ್‌, ರವಿ ಬಿಷ್ಣೋಯ್‌
  6. ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ಕೈರೊನ್‌ ಪೊಲಾರ್ಡ್‌
  7. ಪಂಜಾಬ್‌ ಕಿಂಗ್ಸ್‌: ಮಯಾಂಕ್‌ ಅಗರ್ವಾಲ್‌, ಅರ್ಷದೀಪ್‌ ಸಿಂಗ್‌
  8. ರಾಜಸ್ಥಾನ್‌ ರಾಯಲ್ಸ್‌: ಸಂಜು ಸ್ಯಾಮ್ಸನ್‌, ಜೋಸ್‌ ಬಟ್ಲರ್‌, ಯಶಸ್ವಿ ಜೈಸ್ವಾಲ್‌
  9. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್‌ ಕೊಹ್ಲಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಹಮ್ಮದ್‌ ಸಿರಾಜ್‌
  10. ಸನ್‌ರೈಸರ್ಸ್‌ ಹೈದರಾಬಾದ್: ಕೇನ್‌ ವಿಲಿಯಮ್ಸನ್‌, ಅಬ್ದುಲ್‌ ಸಮದ್‌, ಉಮ್ರಾನ್‌ ಮಲಿಕ್‌

* ಇನ್ನು ಹರಾಜಿನಲ್ಲಿ ಆಟಗಾರರಿಗೆ ಗರಿಷ್ಠ 2 ಕೋಟಿ ರೂ. ಮತ್ತು ಕನಿಷ್ಠ 20 ಲಕ್ಷ ರೂ. ಬೆಲೆ ನಿಗದಿ ಪಡಿಸಲಾಗಿದೆ.

Ipl 2022 Auction From Bangalore, All Teams Focus On The Purchase Of The Best Players