'2021ರ ಐಪಿಎಲ್‌ ತೊರೆದಿದ್ದೇ ತಪ್ಪಾಯ್ತು' ಆರ್‌ಸಿಬಿ ಮಾಜಿ ವೇಗಿ ಬೇಸರ!

16-02-22 05:01 pm       Source: Vijayakarnataka   ಕ್ರೀಡೆ

ಕಳೆದ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ವಿಥ್‌ಡ್ರಾ ಮಾಡಿಕೊಂಡಿದ್ದರಿಂದ ಈ ಬಾರಿ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳು ನಮ್ಮನ್ನು ಖರೀದಿಸಲು ಮುಂದೆ ಬರಲಿಲ್ಲ ಎಂದು ಆಸ್ಟ್ರೇಲಿಯಾ ತಂಡದ ಸ್ಟಾರ್ ವೇಗಿ ಕೇನ್‌ ರಿಚರ್ಡ್ಸನ್‌ ತಿಳಿಸಿದ್ದಾರೆ.

ಬೆಂಗಳೂರು: ಕಳೆದ ವಾರಾಂತ್ಯದಲ್ಲಿ ನಡೆದಿದ್ದ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮೆಗಾ ಹರಾಜಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಸಾಕಷ್ಟು ಸ್ಟಾರ್‌ ಆಟಗಾರರು ಅನ್‌ಸೋಲ್ಡ್‌ ಆಗಿದ್ದರು. ಈ ಪಟ್ಟಿಯಲ್ಲಿ ಕಳೆದ ಟಿ20 ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್‌, ಇಂಗ್ಲೆಂಡ್‌ ನಾಯಕ ಐಯಾನ್‌ ಮಾರ್ಗನ್ ಕೂಡ ಇದ್ದಾರೆ.

ಅಂದಹಾಗೆ 2021ರ ಟಿ20 ವಿಶ್ವಕಪ್‌ ಚಾಂಪಿಯನ್ಸ್‌ ತಂಡದ ಆಟಗಾರರಾಗಿದ್ದ ಕೇನ್‌ ರಿಚರ್ಡ್ಸನ್‌, ಆಡಂ ಝಾಂಪ ಕೂಡ ಅನ್‌ಸೋಲ್ಡ್‌ ಆದವರಲ್ಲಿ ಪ್ರಮುಖರು. ಕಳೆದ ಹದಿನಾಲ್ಕನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಈ ಇಬ್ಬರೂ ಆಟಗಾರರು ಟೂರ್ನಿಯ ಆರಂಭಕ್ಕೂ ಮೊದಲೇ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಆಸ್ಟ್ರೇಲಿಯಾಗೆ ವಾಪಸ್‌ ಹೋಗಿದ್ದರು. ಇದರ ಜೊತೆಗೆ ಯುಎಇ ಚರಣದಲ್ಲಿಯೂ ಅವರು ಭಾಗವಹಿಸಿರಲಿಲ್ಲ.

ಹದಿನೈದನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆಟಗಾರರ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಬಗ್ಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾ ವೇಗಿ ಕೇನ್ ರಿಚರ್ಡ್ಸನ್‌, ಕಳೆದ ಆವೃತ್ತಿಯಲ್ಲಿ ಟೂರ್ನಿ ಆಡದೆ ವಾಪಸ್‌ ತವರಿಗೆ ಮರಳಿದ್ದರಿಂದ ಈ ಬಾರಿ ನಮಗೆ ಹಿನ್ನಡೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

Royal Challengers Bangalore duo Kane Richardson and Adam Zampa leave IPL  2021 due to personal reasons - Sports News

ಆರ್‌ಸಿಬಿಗೆ ಈ ಆಟಗಾರನೇ ನಾಯಕ, ಪ್ರಕಟಿಸುವುದೊಂದೆ ಬಾಕಿ ಎಂದ ಚೋಪ್ರಾ!

"ಕಳೆದ ವರ್ಷ ಐಪಿಎಲ್‌ ತೊರೆಯುವುದಕ್ಕೂ ಮುನ್ನ ನಾನು ಹಾಗೂ ಆಡಂ ಝಾಂಪ ಸಂಭಾಷಣೆ ನಡೆಸಿದ್ದೆವು. ಈ ವೇಳೆ, 'ನಾವು ಐಪಿಎಲ್‌ ಆಡದೆ ತವರಿಗೆ ವಾಪಸಾದರೆ, ಮುಂದಿನ ಆವೃತ್ತಿಯಲ್ಲಿ ಇಲ್ಲಿಗೆ ಬಂದಾಗ ಫ್ರಾಂಚೈಸಿಗಳು ನಮ್ಮನ್ನು ಕಡೆಗಣಿಸಬಹುದು' ಎಂದು ಝಾಂಪಗೆ ಮನವರಿಕೆ ಮಾಡಿದ್ದೆ. ಆದರೆ ಆ ಸನ್ನಿವೇಶದಲ್ಲಿ ಆಸ್ಟ್ರೇಲಿಯಾಗೆ ಮರಳುವುದು ನಮ್ಮ ಮೊದಲ ಪ್ರಾಶಸ್ತ್ಯವಾಗಿತ್ತು," ಎಂದು ರಿಚರ್ಡ್‌ಸನ್‌ ತಿಳಿಸಿದ್ದಾರೆ.

"ಕಳೆದ ವರ್ಷದ ಘಟನೆ ಎಲ್ಲಾ ಫ್ರಾಂಚೈಸಿಗಳ ಮನಸಿನಲ್ಲಿ ಇದ್ದೇ ಇರುತ್ತದೆ. ಈ ಇಬ್ಬರೂ ಮುಂದೆ ಇದೇ ರೀತಿ ಅರ್ಧಕ್ಕೆ ಕೈಕೊಡಬಹುದೆಂದು ಫ್ರಾಂಚೈಸಿಗಳು ಊಹಿಸಿವೆ. ನಮ್ಮನ್ನು ಖರೀದಿಸುವ ವಿಷಯದಲ್ಲಿ ಈ ಅಂಶ ಪ್ರಭಾವ ಬೀರಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಇದರ ಬಗ್ಗೆ ನನಗೆ ಖಚಿತತೆ ಇಲ್ಲ. ಈ ಬಗ್ಗೆ ನಾನು ಯಾವುದೇ ಫ್ರಾಂಚೈಸಿ ಬಳಿ ಆಗಲಿ ಅಥವಾ ಯಾವುದೇ ವ್ಯಕ್ತಿಯ ಬಳಿಯೂ ಮಾತನಾಡಿಲ್ಲ. ಅಂದಹಾಗೆ ಮಗುವಿನ ನಿರೀಕ್ಷೆಯಲ್ಲಿದ್ದ ನಾನು 2020ರ ಟೂರ್ನಿಯಲ್ಲಿಯೂ ಭಾಗವಹಿಸಿರಲಿಲ್ಲ," ಎಂದರು.

'The bloke's a psychopath': Richardson happy Pattinson on his team

ಮೆಗಾ ಆಕ್ಷನ್‌ ಬೆನ್ನಲ್ಲೇ ಮ್ಯಾಕ್ಸ್‌ವೆಲ್‌ ಕಡೆಯಿಂದ ಆರ್‌ಸಿಬಿಗೆ ಆಘಾತದ ಸುದ್ದಿ!

"ಕಳೆದ ಎರಡು ಆವೃತ್ತಿಗಳಲ್ಲಿ ಐಪಿಎಲ್‌ ಟೂರ್ನಿಯಲ್ಲಿ ನಾನು ಭಾಗವಹಿಸಿರಲಿಲ್ಲ. ಈ ಕಾರಣದಿಂದಲೇ ನನ್ನ ಐಪಿಎಲ್‌ ವೃತ್ತಿ ಜೀವನಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ನನ್ನಿಂದ ಸಾಧ್ಯವಾದಷ್ಟು ಕ್ರಿಕೆಟ್‌ ಆಡಲು ನಾನು ಪ್ರಯತ್ನಿಸುತ್ತೇನೆ. ಈ ಹಿಂದಿನ ಆವೃತ್ತಿಗಳಲ್ಲಿ ನನ್ನ ಸನ್ನಿವೇಶಗಳು ಕಠಿಣವಾಗಿದ್ದವು," ಎಂದು ರಿಚರ್ಡ್ಸನ್‌ ಹೇಳಿದ್ದಾರೆ.

ಆರ್‌ಸಿಬಿ ಡಿವಿಲಿಯರ್ಸ್‌ ಸೇವೆ ಕಳೆದುಕೊಳ್ಳಲು ಬಲವಾದ ಕಾರಣ ಇಲ್ಲಿದೆ!

ಐಪಿಎಲ್‌ 2022 ಟೂರ್ನಿಗೆ ಆರ್‌ಸಿಬಿ ಕಟ್ಟಿರುವ ತಂಡ ಹೀಗಿದೆ
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಫಾಫ್ ಡು'ಪ್ಲೆಸಿಸ್, ವಾನಿಂದು ಹಸರಂಗ, ದಿನೇಶ್ ಕಾರ್ತಿಕ್, ಜಾಶ್ ಹೇಜಲ್‌ವುಡ್, ಶಹಬಾಝ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಾಶ್‌ ಪ್ರಭುದೇಸಾಯ್, ಚಾಮಾ ಮಿಲಿಂದ್, ಅನೀಶ್ವರ್‌ ಗೌತಮ್, ಕರಣ್‌ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ.

Ipl 2022, I Definitely Think Thats A Factor Australia Star Kane Richardson Reveals Potential Reason Behind Going Unsold In Ipl Auction.