IPL 2022: ಸಿಎಸ್‌ಕೆ ತಂಡದ ಹ್ಯಾಟ್ರಿಕ್‌ ಸೋಲನ್ನು ಖಂಡಿಸಿದ ಸುನಿಲ್ ಗವಾಸ್ಕರ್‌!

04-04-22 04:45 pm       Source: Vijayakarnataka   ಕ್ರೀಡೆ

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇತಿಹಾಸದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಇದೇ ಮೊದಲ ಬಾರಿ ಲೀಗ್‌ನ ಆರಂಭದಲ್ಲೇ ಹ್ಯಾಟ್ರಿಕ್‌ ಸೋಲಿನ ಆಘಾತಕ್ಕೊಳಗಾಗಿದೆ. ನಾಲ್ಕು...

ಹರಾಜಿನಲ್ಲಿ ಗಿಟ್ಟಿಸಿದ ಭಾರಿ ಮೊತ್ತಕ್ಕೆ ಮೊದಲ ಬಾರಿ ಬೆಲೆ ತಂದುಕೊಟ್ಟ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟ್‌ ಮತ್ತು ಬಾಲ್‌ ಎರಡರಲ್ಲೂ ಭರ್ಜರಿ ಪ್ರದರ್ಶನ ನೀಡಿ, ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಪಂಜಾಬ್‌ ಕಿಂಗ್ಸ್‌ ತಂಡಕ್ಕೆ 54 ರನ್‌ಗಳ ಭರ್ಜರಿ ಜಯ ತಂದುಕೊಟ್ಟರು.

ಐಪಿಎಲ್‌ 2022 ಟೂರ್ನಿಯ 11ನೇ ಲೀಗ್‌ ಪಂದ್ಯದಲ್ಲಿ ಸೋಲಿನ ಕಡಲಲ್ಲಿ ಮುಳುಗುವಂತ್ತಾದ ಸಿಎಸ್‌ಕೆ ತಂಡ, ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಲೀಗ್‌ ಆರಂಭದಲ್ಲೇ ಮೊದಲ ಬಾರಿ ಹ್ಯಾಟ್ರಿಕ್‌ ಸೋಲಿನ ಆಘಾತಕ್ಕೊಳಗಾಗಿದೆ. ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್‌ಕೆ ಬ್ಯಾಟ್‌, ಬಾಲ್ ಮತ್ತು ಫೀಲ್ಡಿಂಗ್‌ ಎಲ್ಲದರಲ್ಲೂ ನಿರಾಶೆ ಮೂಡಿಸಿತು.

ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಮತ್ತು ಸಿಎಸ್‌ಕೆ ತಂಡದ ಮಾಜಿ ಓಪನರ್‌ ಮ್ಯಾಥ್ಯೂ ಹೇಡೆನ್‌ ನಾಲ್ಕು ಬಾರಿಯ ಚಾಂಪಿಯನ್ಸ್‌ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

Cause for concern': Sunil Gavaskar points out one key mistake made by  Indian batsmen at Headingley | Cricket - Hindustan Times

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದ ಚೆನ್ನೈ ತಂಡ ಪಂಜಾಬ್‌ ಕಿಂಗ್ಸ್‌ ತಂಡವನ್ನು 180/8 ರನ್‌ಗಳಿಗೆ ಕಟ್ಟಿಹಾಕಿತು. ಬಳಿಕ ಚೇಸಿಂಗ್‌ ಆರಂಭಿಸಿ 7.3 ಓವರ್‌ಗಳಲ್ಲಿ 36ಕ್ಕೆ 5 ವಿಕೆಟ್‌ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತು. ಈ ಹಂತದಲ್ಲಿ ಆಲ್‌ರೌಂಡರ್‌ ಶಿವಮ ದುಬೇ 30 ಎಸೆತಗಳಲ್ಲಿ 57 ರನ್‌ ಸಿಡಿಸಿ, ಧೋನಿ 28 ಎಸೆತಗಳಲ್ಲಿ 23 ರನ್‌ ಗಳಿಸಿ ಚೇತರಿಕೆ ತಂದರು. ಆದರೆ, ಸಿಎಸ್‌ಕೆ 18 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲ್‌ಔಟ್‌ ಆಯಿತು.

"ಎಂಎಸ್‌ಡಿ ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗದೇ ಇದ್ದರೂ, ಚುರುಕಿನ 1-2 ರನ್‌ಗಳನ್ನು ತೆಗೆಯುತ್ತಾರೆ. ಆದರೆ, ಈ ಬಾರಿ ಧೋನಿ 1-2 ರನ್‌ಗಳನ್ನು ಕದಿಯುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರನ್‌ಚೇಸ್‌ನಲ್ಲಿ ಸಿಎಸ್‌ಕೆಗೆ ಭಾರಿ ಹಿನ್ನಡೆ ಎದುರಾಯಿತು," ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಗವಾಸ್ಕರ್‌ ಹೇಳಿದ್ದಾರೆ.

Sir yes sir, any tips sir' - MS Dhoni's witty reply to Twitter troll  resurfaces

ಪಂಜಾಬ್‌ ಕಿಂಗ್ಸ್ ಎದುರು ಭರ್ಜರಿಯಾಗಿ ಬ್ಯಾಟ್‌ ಮಾಡಿದ ಶಿವಂ ದುಬೇ ಆಟವನ್ನು ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡೆನ್‌ ಗುಣಗಾನ ಮಾಡಿದ್ದಾರೆ. "ಶಿವಂ ದುಬೇ ಅತ್ಯುನ್ನತ ಇನಿಂಗ್ಸ್‌ ಆಡಿದ್ದಾರೆ. ದುರದೃಷ್ಟವಶಾತ್‌ ಅವರಿಗೆ ಸೂಕ್ತ ಬೆಂಬಲ ಸಿಗದೇ ಹೋಯಿತು. ಎಂಎಸ್‌ ಧೋನಿ ಕೂಡ 80ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಲಯದಲ್ಲಿ ಇಲ್ಲದೇ ಇರುವಂತೆ ಕಂಡರು. ಹೀಗಾಗಿ ರನ್‌ ಚೇಸ್‌ನಲ್ಲಿ ಎಲ್ಲಿಯೂ ಕೂಡ ಸಿಎಸ್‌ಕೆಗೆ ನಿಯಂತ್ರಣ ಸಿಗಲಿಲ್ಲ," ಎಂದು ಮ್ಯಾಥ್ಯೂ ಹೇಡೆನ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪಂಜಾಬ್‌ ಕಿಂಗ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 180 ರನ್‌ (ಶಿಖರ್‌ ಧವನ್‌ 33, ಲಿಯಾಮ್‌ ಲಿವಿಂಗ್‌ ಸ್ಟೋನ್‌ 60, ಜಿತೇಶ್ ಶರ್ಮಾ 26; ಕ್ರಿಸ್‌ ಜಾರ್ಡನ್ 23ಕ್ಕೆ 2, ಡ್ವೇನ್‌ ಪ್ರೆಟೋರಿಯಸ್‌ 30ಕ್ಕೆ 2).
ಚೆನ್ನೈ ಸೂಪರ್‌ ಕಿಂಗ್ಸ್‌: 18 ಓವರ್‌ಗಳಲ್ಲಿ 126ಕ್ಕೆ ಆಲ್‌ಔಟ್‌ (ಶಿವಂ ದುಬೇ 57, ಎಂಎಸ್‌ ದೋನಿ 23; ರಾಹುಲ್ ಚಹರ್ 25ಕ್ಕೆ 3, ಲಿಯಾಮ್‌ ಲಿವಿಂಗ್‌ಸ್ಟೋನ್‌ 25ಕ್ಕೆ 2).

Ipl 2022 Sunil Gavaskar Dissect Csks 3rd Straight Defeat In 15th Edition Of Indian Premier League.