IPL 2022: ಸೋತರೂ ಈ ಒಂದು ಕಾರಣಕ್ಕೆ ಸಂತಸ ವ್ಯಕ್ತಪಡಿಸಿದ ವಿಲಿಯಮ್ಸನ್‌!

05-04-22 02:12 pm       Source: Vijayakarnataka   ಕ್ರೀಡೆ

ಸೋಮವಾರ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ ತಂಡ 12 ರನ್‌ಗಳಿಂದ ಸೋಲು ಅನುಭವಿಸಿತ್ತು. ನಂತರ...

 ಇಲ್ಲಿನ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್‌ ವಿರುದ್ಧ 12 ರನ್‌ ಸೋಲಿನ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್‌ ಬೌಲರ್‌ಗಳ ಪವರ್‌ಪ್ಲೇ ಬೌಲಿಂಗ್‌ ಪ್ರದರ್ಶನವನ್ನು ನಾಯಕ ಕೇನ್‌ ವಿಲಿಯಮ್ಸನ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಆವೇಶ್‌ ಖಾನ್‌ 4 ವಿಕೆಟ್‌ ಸಾಧನೆ ಹಾಗೂ ಕೆ.ಎಲ್‌ ರಾಹುಲ್(68) ಮತ್ತು ದೀಪಕ್‌ ಹೂಡ(51) ಅವರ ಅರ್ಧಶತಕಗಳ ಬಲದಿಂದ ಲಖನೌ ಸೂಪರ್‌ ಜಯಂಟ್ಸ್‌ ತಂಡ 12 ರನ್‌ ಗೆಲುವು ದಾಖಲಿಸಿತು. ಸನ್‌ರೈಸರ್ಸ್ ಹೈದರಾಬಾದ್‌ ಪರ ವಾಷಿಂಗ್ಟನ್‌ ಸುಂದರ್‌, ಶೆಫರ್ಡ್‌ ಹಾಗೂ ಟಿ ನಟರಾಜನ್‌ ಅವರು ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.

ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಕೇನ್‌ ವಿಲಿಯಮ್ಸನ್‌, "ತಂಡದಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದೆ. ಮೂರು ವಿಕೆಟ್‌ ಪಡೆಯುವ ಮೂಲಕ ಪವರ್‌ಪ್ಲೇನಲ್ಲಿ ನಮ್ಮ ಬೌಲಿಂಗ್‌ ಅತ್ಯುತ್ತಮವಾಗಿತ್ತು. ಇದಾದ ಬಳಿಕ ಮುಂದಿನ ದೊಡ್ಡ ಜೊತೆಯಾಟವನ್ನು ನಾವು ಮುರಿಯಬೇಕಾಗಿತ್ತು. ಆದರೆ ಇದರ ಶ್ರೇಯ ಕೆ.ಎಲ್‌ ರಾಹುಲ್‌ ಹಾಗೂ ದೀಪಕ್‌ ಹೂಡ ಅವರಿಗೆ ಸಲ್ಲಬೇಕು. ಈ ಜೋಡಿಯ ಜೊತೆಯಾಟದಿಂದ ಲಖನೌ ಸೂಪರ್‌ ಜಯಂಟ್ಸ್‌ ತಂಡ ನಮಗೆ 170 ರನ್‌ ಗುರಿ ನೀಡಿತ್ತು," ಎಂದು ಹೇಳಿದರು.

IPL 2022: Kane Williamson lauds his team for good powerplay bowling after  defeat against LSG – ThePrint

"ಕಡಿಮೆ ಅಂತರದಲ್ಲಿ ನಾವು ಸೋಲು ಅನುಭವಿಸಿದ್ದೇವೆ ಹಾಗೂ ಎಲ್ಲರೂ ಸಕಾರಾತ್ಮಕವಾಗಿದ್ದಾರೆ. ನಮ್ಮ ತಂಡದ ಬೌಲರ್‌ಗಳು ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ. ಡೆತ್‌ ಓವರ್‌ಗಳಲ್ಲಿಯೂ ಕೂಡ ಅವರು ಅತ್ಯುತ್ತಮವಾಗಿ ಕಂಡಿದ್ದಾರೆ. ಆದರೆ ನಾವು ಒಂದು ಅಥವಾ ಎರಡು ರನ್‌ಗಳನ್ನು ಸತತವಾಗಿ ಕಲೆ ಹಾಕಬೇಕಾಗಿತ್ತು. ಮುಂದಿನ ಪಂದ್ಯದಲ್ಲಿ ನಮ್ಮ ಸಂಗತಿಗಳನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುತ್ತೇವೆ," ಎಂದು ಹೇಳಿದರು.

ಕೊನೆಯ ಮೂರು ಓವರ್‌ಗಳಿಗೆ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ 33 ರನ್‌ ಅಗತ್ಯವಿತ್ತು. ಈ ವೇಳೆ ನಿಕೋಲಸ್‌ ಪೂರನ್‌(34) ಅವರನ್ನು ಆವೇಶ್‌ ಖಾನ್ ಮೊಟ್ಟ ಮೊದಲ ಎಸೆತದಲ್ಲಿಯೇ ಔಟ್‌ ಮಾಡಿದರು. ನಂತರ ಮುಂದಿನ ಎಸೆತದಲ್ಲಿಯೇ ಅಬ್ದುಲ್‌ ಸಮದ್‌ ಅವರ ವಿಕೆಟ್‌ ಅನ್ನು ಆವೇಶ್‌ ಖಾನ್‌ ಕಬಳಿಸಿದರು.

ನಂತರ ವಾಷಿಂಗ್ಟನ್‌ ಸುಂದರ್‌ ಅವರು 18 ರನ್‌ ಗಳಿಸುವ ಮೂಲಕ ಸನ್‌ರೈಸರ್‌ ಹೈದರಾಬಾದ್‌ ತಂಡಕ್ಕೆ ಭರವಸೆ ಮೂಡಿಸಿದ್ದರು. ಆದರೆ ಅವರನ್ನು ಜೇಸನ್‌ ಹೋಲ್ಡರ್‌ ಔಟ್‌ ಮಾಡಿದರು. ನಂತರ ರೊಮಾರಿಯೊ ಶೆಫರ್ಡ್‌ ಮತ್ತು ಭುವನೇಶ್ವರ್‌ ಕುಮಾರ್‌ ಅವರ ವಿಕೆಟ್‌ಗಳನ್ನೂ ಹೋಲ್ಡರ್‌ ಕಿತ್ತರು. ಅಂತಿಮವಾಗಿ ಲಖನೌ ಸೂಪರ್‌ ಜಯಂಟ್ಸ್‌ ತಂಡ 12 ರನ್‌ಗಳಿಂದ ಗೆಲುವಿನ ನಗೆ ಬೀರಿತು.

IPL 2021: Bhuvneshwar Kumar explains reasons behind SRH's horrendous form  in IPL Phase 1

ಗೇಮ್‌ ಪ್ಲಾನ್‌ ತಿಳಿಸಿದ ಆವೇಶ್‌ ಖಾನ್‌: ಪೋಸ್ಟ್ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಅವೇಶ್‌ ಖಾನ್‌, ಸನ್‌ರೈಸರ್ಸ್‌ ಹೈದರಾಬಾದ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರ ವಿಕೆಟ್‌ ಪಡೆಯಲು ರೂಪಿಸಿದ್ದ ಗೇಮ್‌ ಪ್ಲಾನ್‌ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.

"ಪವರ್‌ ಪ್ಲೇ ಮತ್ತು ಡೆತ್‌ ಓವರ್‌ಗಳಲ್ಲಿ ತಂಡಕ್ಕಾಗಿ ವಿಕೆಟ್‌ ಕಬಳಿಸಲು ನಾನು ಪ್ರಯತ್ನಿಸಿದೆ. ಹಾಗಾಗಿ ಕೇನ್‌ ವಿಲಿಯಮ್ಸನ್‌ಗೆ ನಿಧಾನಗತಿಯ ಎಸೆತವನ್ನು ಪ್ರಯೋಗ ಮಾಡಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಪಿಚ್‌ ಮೇಲೆ ಸ್ವಲ್ಪ ಹಿಡಿತವಿತ್ತು. ಹಾಗಾಗಿ ಎಲ್ಲಾ ಎಸೆತಗಳನ್ನು ಮಿಶ್ರಣ ಮಾಡಿದೆ," ಎಂದು ಹೇಳಿದರು.

Ipl 2022: 'Our Power Play Bowlimg Was Good With Three Wickets' Says Kane Williamson.