ಹರಾಜಿನಲ್ಲಿ ಇಬ್ಬರನ್ನೂ ಖರೀದಿಸುವ ಆಲೋಚನೆ ಇರಲಿಲ್ಲ ಎಂದ ಕುಮಾರ ಸಂಗಕ್ಕಾರ!

11-04-22 07:17 pm       Source: Vijayakarnataka   ಕ್ರೀಡೆ

ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಚಾಂಪಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡ 15ನೇ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, 4 ಪಂದ್ಯಗಳ ಮುಕ್ತಾಯಕ್ಕೆ

ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಚಾಂಪಿಯನ್ಸ್‌ ರಾಜಸ್ಥಾನ್‌ ರಾಯಲ್ಸ್‌ ಇದೀಗ ಮತ್ತೊಂದು ಟ್ರೋಫಿ ಗೆಲುವಿನತ್ತ ಕಣ್ಣಿಟ್ಟಿದೆ. ಐಪಿಎಲ್‌ 2022 ಟೂರ್ನಿಯಲ್ಲಿ ಅಧಿಕಾರಯುತ ಪ್ರದರ್ಶನ ನೀಡುತ್ತಿರುವ ರಾಯಲ್ಸ್‌, ಈ ಬಾರಿ ಮೊದಲು ಬ್ಯಾಟ್‌ ಮಾಡಿ ಮೂರು ಪಂದ್ಯಗಳನ್ನು ಗೆದ್ದ ಏಕಮಾತ್ರ ತಂಡವಾಗಿದೆ.

ನಾಲ್ಕು ಪಂದ್ಯಗಳ ಅಂತ್ಯಕ್ಕೆ 6 ಅಂಕಗಳನ್ನು ಕಲೆಹಾಕಿರುವ ರಾಜಸ್ಥಾನ್‌ ರಾಯಲ್ಸ್‌ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಆಗಿ ಜೋಸ್‌ ಬಟ್ಲರ್‌ (218 ರನ್‌) ಮತ್ತು ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿ ಯುಜ್ವೇಂದ್ರ ಚಹಲ್‌ (11) ಹೊರಹೊಮ್ಮಿದ್ದು, ಕ್ರಮವಾಗಿ ಆರೆಂಜ್‌ ಮತ್ತು ಪರ್ಪಲ್‌ ಕ್ಯಾಪ್‌ ಪಡೆದುಕೊಂಡಿದ್ದಾರೆ.

A drunk player hung me from balcony of 15th floor': Chahal's startling  revelation from MI days in IPL 2013 | Cricket - Hindustan Times

ಕಳೆದ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಎದುರು ರಾಯಲ್ಸ್‌ 3 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಈ ಗೆಲುವಿನಲ್ಲಿ ತಂಡದ ಅನುಭವಿ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಮಹತ್ವದ ಪಾತ್ರ ನಿಭಾಯಿಸಿದ್ದರು. ಲಖನೌ ತಂಡದ 4 ಪ್ರಮುಖ ವಿಕೆಟ್‌ಗಳನ್ನು ಪಡೆದ ಚಹಲ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿದಿತ್ತು. ಈ ಬಗ್ಗೆ ಮಾತನಾಡಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಕುಮಾರ ಸಂಗಕ್ಕಾರ ತಂಡದ ಅನುಭವಿ ಸ್ಪಿನ್ನರ್‌ಗಳ ಪ್ರದರ್ಶನವನ್ನು ಗುಣಗಾನ ಮಾಡಿದ್ದಾರೆ.

"ನನ್ನ ಪ್ರಕಾರ ಅಶ್ವಿನ್‌-ಚಹಲ್‌ ಇಬ್ಬರು ಶ್ರೇಷ್ಠ ಸ್ಪಿನ್ನರ್‌ಗಳು. ಇಬ್ಬರೂ ಜೊತೆಯಾಗಿ ಅದ್ಭುತವಾಗಿ ಬೌಲಿಂಗ್‌ ಮಾಡುತ್ತಾರೆ. ಜೊತೆಗೂ ಪ್ರತ್ಯೇಕವಾಗಿಯೂ ಶ್ರೇಷ್ಠ ಪ್ರದರ್ಶನ ಹೊರತರುತ್ತಾರೆ. ತಮ್ಮ ಸಾಮರ್ಥ್ಯ ಮತ್ತು ತಮ್ಮೊಳಗಿನ ಚಾಕಚಕ್ಯತೆಗಳ ಬಗ್ಗೆ ಅವರಲ್ಲಿ ಸಂಪೂರ್ಣ ಅರಿವಿದೆ. ಹೀಗಾಗಿ ಮೆಗಾ ಆಕ್ಷನ್‌ನಲ್ಲಿ ಇವರಿಬ್ಬರನ್ನೂ ಒಟ್ಟಿಗೆ ಖರೀದಿ ಮಾಡುತ್ತೇವೆ ಎಂದು ನಾವು ಅಂದುಕೊಂಡೇ ಇರಲಿಲ್ಲ. ಅದೃಷ್ಟವಶಾತ್‌ ನಮಗೆ ಇಬ್ಬರ ಸೇವೆಯೂ ಸಿಕ್ಕಿದೆ. ಅವರ ಪ್ರದರ್ಶನ ಮತ್ತಷ್ಟು ಉತ್ತಮವಾಗಲು ನೆರವು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಅಂಗಣಕ್ಕೆ ಇಳಿದು ತಂಡದ ಬೌಲಿಂಗ್‌ ವಿಭಾಗವನ್ನು ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ," ಎಂದು ಸಂಗಕ್ಕಾರ ಹೇಳಿದ್ದಾರೆ.

ಕುಲ್ದೀಪ್‌ ಸೇನ್‌ ಬಗ್ಗೆ ಸಂಗಕ್ಕಾರ ಗುಣಗಾನ

Kumar Sangakkara: Looking for different match-winners in different games |  Cricket News - Times of India
ಲಖನೌ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್‌ ಪರ ಕೊನೇ ಓವರ್‌ ಎಸೆದ ಯುವ ವೇಗದ ಬೌಲರ್‌ ಕುಲ್ದೀಪ್‌ ಸೇನ್, ಪದಾರ್ಪಣೆಯ ಪಂದ್ಯದಲ್ಲೇ ಒತ್ತಡ ನಿಭಾಯಿಸಿದ ಪರಿಯನ್ನು ಕೋಚ್‌ ಸಂಗಕ್ಕಾರ ಗುಣಗಾನ ಮಾಡಿದ್ದಾರೆ. 200ಕ್ಕೂ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುತ್ತಿದ್ದ ಮಾರ್ಕಸ್‌ ಸ್ಟೊಯ್ನಿಸ್‌ ಎದು ಕೊನೇ ಓವರ್‌ನಲ್ಲಿ 15 ರನ್‌ಗಳನ್ನು ಕಾಯ್ದುಕೊಳ್ಳುವಲ್ಲಿ ಕುಲ್ದೀಪ್‌ ಸೇನ್‌ ಯಶಸ್ವಿಯಾಗಿದ್ದರು.

Who is Kuldeep Sen? – All you need to know about RR's pace sensation

"ಕೊನೇ ಓವರ್‌ ಬಗ್ಗೆ ನಾನು ಕುಲ್ದೀಪ್‌ ಬಳಿ ಚರ್ಚೆ ಮಾಡಲಿಲ್ಲ. ಆದರೆ, ಸಂಜು, ಜೋಸ್‌ ಮತ್ತು ತಂಡದ ಉಳಿದ ಆಟಗಾರರು ಅವರಿಗೆ ಪೂರ್ಣ ಬೆಂಬಲ ನೀಡಿದ್ದರು. ಸ್ಲಾಗ್‌ ಓವರ್‌ಗಳಲ್ಲಿ ಬೌಲಿಂಗ್‌ ಮಾಡಲು ನಮ್ಮದು ಸರಳ ರಣತಂತ್ರವಾಗಿದೆ. ಅಂದಹಾಗೆ ಕುಲ್ದೀಪ್‌ ಅವರ ಪ್ರದರ್ಶನ ನನ್ನನ್ನೂ ಒಳಗೊಂಡಂತೆ ಎಲ್ಲರ ಗಮನ ಸೆಳೆದಿದೆ. ಅತ್ಯಂತ ಕಠಿಣ ಓವರ್‌ನಲ್ಲಿ ಶ್ರೇಷ್ಠ ನೇರ ಮತ್ತು ನಿಖರತೆ ಕಾಯ್ದುಕೊಂಡರು," ಎಂದು ಸಂಗಕ್ಕಾರ ಹೇಳಿದ್ದಾರೆ.

ಆರ್‌ಆರ್‌ vs ಎಲ್‌ಎಸ್‌ಜಿ ಸಂಕ್ಷಿಪ್ತ ಸ್ಕೋರ್‌
ರಾಜಸ್ಥಾನ್‌ ರಾಯಲ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 165 ರನ್‌ (ಶಿಮ್ರಾನ್‌ ಹೆಟ್ಮಾಯೆರ್‌ 59, ದೇವದತ್ ಪಡಿಕ್ಕಲ್ 29, ಆರ್‌ ಅಶ್ವಿನ್‌ 28; ಕೆ ಗೌತಮ್ 30ಕ್ಕೆ 2, ಜೇಸನ್‌ ಹೋಲ್ಡರ್ 50ಕ್ಕೆ 2).
ಲಖನೌ ಸೂಪರ್‌ ಜಯಂಟ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 162 ರನ್‌ (ಕ್ವಿಂಟನ್‌ ಡಿ'ಕಾಕ್ 39, ಮಾರ್ಕಸ್‌ ಸ್ಟೊಯ್ನಿಸ್‌ 38*; ಯುಜ್ವೇಂದ್ರ ಚಹಲ್ 41ಕ್ಕೆ 4, ಟ್ರೆಂಟ್ ಬೌಲ್ಟ್‌ 30ಕ್ಕೆ 2).

Ipl 2022 We Never Expected To Get Both Ravi Ashwin And Yuzvendra Chahal In Auction Says Rr Head Coach Kumar Sangakkara.