ಹಾರ್ದಿಕ್‌ ಪಾಂಡ್ಯ ನಮ್ಮ ಗೆಲುವನ್ನು ಕಸಿದುಕೊಂಡರು ಎಂದ ಸಂಜು ಸ್ಯಾಮ್ಸನ್‌!

15-04-22 02:54 pm       Source: Vijayakarnataka   ಕ್ರೀಡೆ

ಗುಜರಾತ್‌ ಟೈಟನ್ಸ್‌ ತಂಡದ 37 ರನ್‌ಗಳ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಹಾರ್ದಿಕ್‌ ಪಾಂಡ್ಯ ಅವರ ಬ್ಯಾಟಿಂಗ್‌ ಪ್ರದರ್ಶನವನ್ನು ಮುಕ್ತಕಂಠದಿಂದ ಗುಣಗಾ...

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 37 ರನ್‌ಗಳಿಂದ ಸೋಲುಅನುಭವಿಸಿದಹೊರತಾಗಿಯೂಎದುರಾಳಿ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ ಪ್ರದರ್ಶನವನ್ನು ರಾಜಸ್ಥಾನ್‌ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಗುರುವಾರ ರಾತ್ರಿ ಡಿ ವೈ ಪಾಟೀಲ್‌ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ 52 ಎಸೆತಗಳಲ್ಲಿ 87 ರನ್‌ಗಳನ್ನು ಸಿಡಿಸುವ ಮೂಲಕ ಗುಜರಾತ್‌ ಟೈಟನ್ಸ್‌ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಈ ಗೆಲುವಿನ ಮೂಲಕ ಗುಜರಾತ್‌ ಟೈಟನ್ಸ್‌ ತಂಡ 2022ರ ಐಪಿಎಲ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿತು.

ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರಾಜಸ್ಥಾನ್‌ ರಾಯಲ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ, "ಗುಜರಾತ್‌ ಟೈಟನ್ಸ್‌ ತಂಡ 10 ರಿಂದ 15 ರನ್‌ಗಳನ್ನು ಹೆಚ್ಚುವರಿಯಾಗಿ ಗಳಿಸಬಹುದಿತ್ತು. ಆದರೆ, 190ಕ್ಕೂ ಹೆಚ್ಚಿನ ರನ್‌ ಕಲೆಹಾಕಿದ್ದರ ಶ್ರೇಯ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಸಲ್ಲಬೇಕು. ಹಾರ್ದಿಕ್‌ ಪಾಂಡ್ಯ ಅದ್ಭುತ ಇನಿಂಗ್ಸ್‌ ಆಡಿದರು. ಗುಜರಾತ್‌ ಇಷ್ಟು ದೊಡ್ಡ ಮೊತ್ತ ಕಲೆ ಹಾಕಲು ಹಾರ್ದಿಕ್‌ ಪ್ರಮುಖ ಪಾತ್ರವಹಿಸಿದ್ದಾರೆ," ಎಂದು ಗುಣಗಾನ ಮಾಡಿದರು.

Indian Premier League 2022, RR vs GT: Hardik Pandya Praised By Yuvraj  Singh, Wasim Jaffer, Others After Epic All-Round Show vs Rajasthan Royals |  Cricket News

"ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ನಾವು ಕೊನೆಯವರೆಗೂ ವಿಕೆಟ್‌ಗಳನ್ನು ಉಳಿಸಿಕೊಂಡಿದ್ದರೆ, ಚೇಸ್‌ ಮಾಡಬಹುದಿತ್ತು. ಪವರ್‌ಪ್ಲೇನಲ್ಲಿ ನಮ್ಮ ರನ್‌ ರೇಟ್‌ ಉತ್ತಮವಾಗಿತ್ತು. ಆದರೆ, ನಿಯಮಿತವಾಗಿ ವಿಕೆಟ್‌ಗಳು ಉರುಳುತ್ತಲೇ ಇದ್ದವು. ಇದರಿಂದ ನಮಗೆ ಹಿನ್ನಡೆಯಾಯಿತು. ಆದರೆ ಟ್ರೆಂಟ್‌ ಬೌಲ್ಟ್‌ ಅವರನ್ನು ನಾವು ತುಂಬಾ ಮಿಸ್‌ ಮಾಡಿಕೊಂಡಿದ್ದೇವೆ. ಇವರು ಆದಷ್ಟು ಬೇಗ ತಂಡ ಕೂಡಿಕೊಳ್ಳಲಿದ್ದಾರೆಂಬ ನಿರೀಕ್ಷೆ ಇದೆ,"ಎಂದರು.

"ಕಳೆದ ಹಲವು ವರ್ಷಗಳಿಂದ ಐಪಿಎಲ್‌ ಟೂರ್ನಿ ಆಡುತ್ತಿರುವ ನನಗೆ ಪ್ರತಿಯೊಂದು ಪಂದ್ಯ ನಿರ್ಣಾಯಕ ಎಂಬುದು ಅರ್ಥವಾಗಿದೆ. ಕಲಿತು ಮುಂದಿನ ಪಂದ್ಯಕ್ಕೆ ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡುವುದು ತುಂಬಾ ಮುಖ್ಯ. ಕಳೆದ ಆವೃತ್ತಿಯಿಂದ ನಾನು ಮೂರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ನಿರಂತರವಾಗಿ ಆಡುತ್ತಿದ್ದೇನೆ. ಇದರ ಜೊತೆಗೆ ತಂಡದ ಅಗತ್ಯಕ್ಕೆ ತಕ್ಕಂತೆ 4 ಅಥವಾ5 ಅಥವಾ 6ನೇ ಕ್ರಮಾಂಕದಲ್ಲಿ ಆಡುವುದು ನನಗೆ ಆರಾಮದಾಯಕವಾಗಿದೆ," ಎಂದರು.

ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಿದ ಬಗ್ಗೆ ಮಾತನಾಡಿ, "ಅಶ್ವಿನ್‌ ಅವರು ಅಗ್ರ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಅದರಂತೆ ಕಳೆದ ಪಂದ್ಯವನ್ನು ನೀವು ನೋಡಬಹುದು. ಶಿಮ್ರಾನ್‌ ಹೆಟ್ಮಾಯೆರ್‌ ಅವರ ಜೊತೆ ಅಶ್ವಿನ್‌ ನಿರ್ಣಾಯಕ ಜೊತೆಯಾಟವನ್ನು ಆಡಿದ್ದರು. ಈ ಕಾರಣದಿಂದ ಅವರನ್ನು ಬಳಸಿಕೊಂಡಿದ್ದೇವೆ," ಎಂದರು.

ravichandran ashwin: Latest News, Videos and ravichandran ashwin Photos |  Times of India

"ರಶೀದ್‌ ಖಾನ್‌ ವಿರುದ್ಧ ಆರ್‌ ಅಶ್ವಿನ್‌ ಅತ್ಯುತ್ತಮವಾಗಿ ಬ್ಯಾಟ್‌ ಮಾಡಿದರು. ತಮ್ಮ ಅನುಭವವನ್ನು ಅವರು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ನನಗೆ ಅನಿಸಿದ ಹಾಗೆ ಅವರು ಅತ್ಯಂತ ಉಪಯುಕ್ತ ಆಲ್‌ರೌಂಡರ್‌ ಆಗಿದ್ದಾರೆ. ಸೂಕ್ತ ಸನ್ನಿವೇಶ ಹಾಗೂ ಸರಿಯಾದ ಸಂದರ್ಭದಲ್ಲಿ ಅವರನ್ನು ಬಳಸಿಕೊಳ್ಳುವುದು ಇಲ್ಲಿನ ಪ್ರಮುಖ ಸಂಗತಿಯಾಗಿದೆ," ಎಂದು ಹೇಳಿದರು.

Ipl 2022 If We Had Wickets In Hand This Was Chasable I Feel Rr Capatain Sanju Samson On 37 Loss Against Gujarat Titans.