ಬ್ರೇಕಿಂಗ್ ನ್ಯೂಸ್
27-10-26 01:36 pm ಲೀನಾ ಜೋಶಿ, Leena Joshi ಅಂಕಣಗಳು
ಲೇಖನ ; “ಯುರೋಪ್ನಲ್ಲಿ 5 ಕೋಟಿ ಮುಸ್ಲಿಮರಿದ್ದಾರೆ. ಕತ್ತಿ ಇಲ್ಲದೆ, ಗನ್ ಇಲ್ಲದೆ, ಆಕ್ರಮಣವಿಲ್ಲದೆ ಅಲ್ಲಾಹನು ಯುರೋಪ್ನಲ್ಲಿ ಇಸ್ಲಾಮ್ಗೆ ವಿಜಯವನ್ನು ದಯಪಾಲಿಸುತ್ತಾನೆ. ಇನ್ನು ಕೆಲವೇ ದಶಕಗಳಲ್ಲಿ ಯುರೋಪ್ ಮುಸ್ಲಿಂ ಖಂಡವಾಗಲಿದೆ” (We have 50 million Muslims in Europe. There are signs that Allah will grant Islam victory in Europe without swords, without guns, without conquest it will turn it into a Muslim continent within a few decades). ಲಿಬಿಯಾದ ಅಧ್ಯಕ್ಷ ಮುಅಮ್ಮರ್ ಗಡಾಫಿ (Muammar Gaddafi) ಇಪ್ಪತ್ತು ವರ್ಷಗಳ ಹಿಂದೆ, ಯುರೋಪಿನಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಗುತ್ತಿದೆ. 2010 ರಲ್ಲಿ ಇಟಲಿಗೆ ಭೇಟಿ ನೀಡಿದ್ದ ಗಡಾಫಿ, ಆಫ್ರಿಕಾದಿಂದ ಯೂರೋಪಿಗೆ ವಲಸೆಯನ್ನು ನಿಯಂತ್ರಿಸಲು ಯುರೋಪಿಯನ್ ಒಕ್ಕೂಟವು ಲಿಬಿಯಾಕ್ಕೆ ವಾರ್ಷಿಕವಾಗಿ 500 ಕೋಟಿ ಯೂರೋ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದ್ದ. ವಲಸೆಯನ್ನು ನಿಯಂತ್ರಿಸದಿದ್ದರೆ “ಯುರೋಪ್ ಕಪ್ಪಾಗಬಹುದು” ಎಂದಿದ್ದ. ಆಫ್ರಿಕಾದಿಂದ ಯುರೋಪ್ಗೆ ನಡೆಯುವ ವಲಸೆಯನ್ನು ತಡೆಯಲು ಲಿಬಿಯಾ ಗಡಿ ನಿಯಂತ್ರಣ ಮತ್ತು ಭದ್ರತಾ ಕ್ರಮಗಳನ್ನು ಬಲಪಡಿಸಬೇಕಾದರೆ, ಯುರೋಪ್ ದೊಡ್ಡ ಪ್ರಮಾಣದ ಆರ್ಥಿಕ ನೆರವು ನೀಡಬೇಕು ಎಂಬುದು ಗಡಾಫಿಯ ವಾದವಾಗಿತ್ತು. ಲಿಬಿಯಾ ದೇಶ ಆಫ್ರಿಕನ್ ವಲಸಿಗರು ಯುರೋಪ್ಗೆ ಹೋಗದಂತೆ ತಡೆಯುವ "ಕೀಲಿ ಕೈ" ಇದ್ದಂತೆ ಎಂದು ಗಡಾಫಿ ಕರಾರುವಕ್ಕಾಗಿ ಹೇಳಿದ್ದ. ಈ ಮಾತು ಅವರ ಮರಣದ ನಂತರ ನಿಜವಾಯಿತು. ಗಡಾಫಿ ಅಧಿಕಾರದಲ್ಲಿದ್ದಾಗ, ಲಿಬಿಯಾ ಕಠಿಣ ಕಾನೂನುಗಳು ಮತ್ತು ಇಟಲಿ ಜೊತೆಗಿನ ಜಂಟಿ ನೌಕಾಪಡೆಗಳ ಮೂಲಕ ವಲಸಿಗರನ್ನು ಕಟ್ಟುನಿಟ್ಟಾಗಿ ತಡೆಯುತ್ತಿತ್ತು. 2011 ರಲ್ಲಿ ಗಡಾಫಿಯನ್ನು ಕೊಲ್ಲಲಾಯಿತು; ಲಿಬಿಯಾದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿಯಿತು. ಮೆಡಿಟರೇನಿಯನ್ ಸಮುದ್ರದ ಮೂಲಕ ಯುರೋಪ್ಗೆ ಅಕ್ರಮವಾಗಿ ಪ್ರವೇಶಿಸುವವರ ಸಂಖ್ಯೆ ಕೆಲವೇ ವರ್ಷಗಳಲ್ಲಿ ಲಕ್ಷಕ್ಕೇರಿತು.

ಯುರೋಪಿನಲ್ಲಿ ನಡೆಯುತ್ತಿರುವ ಪ್ರತಿಭಟನೆ, ದಂಗೆಗಳನ್ನು ನೋಡಿದಾಗ ಮನಸ್ಸು ದಶಕಗಳ ಹಿಂದಿನ ಪ್ಯಾರಿಸ್ ಭೇಟಿಯನ್ನು ನೆನಪಿಸಿತು. 2012 ರ ಡಿಸೆಂಬರ್ ನಲ್ಲಿ ರಾತ್ರಿ ವೇಳೆ ಐಫಿಲ್ ಟವರ್ ನೋಡಲು ಹೋದಾಗ, ಪ್ಲಾಸ್ಟಿಕಿನ, ಗಾಜಿನ ಐಫಿಲ್ ಟವರ್ ಪ್ರತಿಕೃತಿಗಳನ್ನು ಮಾರಾಟ ಮಾಡುವ ಆಫ್ರಿಕನ್ ಮೂಲದ ಜನರ ಹಿಂಡು ಎಲ್ಲಿ ಹೋದರೂ ಹಿಂಬಾಲಿಸಿಕೊಂಡು ಬರುತಿತ್ತು. ರಾತ್ರಿ ವೇಳೆ ಪ್ಯಾರಿಸಿನ ಬೀದಿಗಳಲ್ಲಿ ಕಳ್ಳಕಾಕರಿಂದ ಎಚ್ಚರಿಕೆಯಿಂದಿರಿ ಎಂದು ಹೋಟೆಲ್ ಸಿಬ್ಬಂದಿಗಳು ಎಚ್ಚರಿಸಿದ್ದರು. ಪ್ಯಾರಿಸಿನ ಪ್ರಮುಖ ಶಾಪಿಂಗ್ ಏರಿಯಾಗಳಲ್ಲಿ ಆಫ್ರಿಕನ್ ಮುಸ್ಲಿಂ ಯುವಕರೇ ಕಾಣುತಿದ್ದರು. ನಾನು ಪ್ಯಾರಿಸಿನಲ್ಲಿದ್ದೇನೋ ಅಥವಾ ಆಫ್ರಿಕಾದಲ್ಲಿದ್ದೇನೋ ಎಂದು ಕನ್ಫ್ಯೂಸ್ ಆಗಿದ್ದೆ. ಡ್ರೈವರ್ ಮೊರಕ್ಕೋ, ಅಲ್ಜೀರಿಯಾ ಮೂಲದವರು. ಟ್ಯಾಕ್ಸಿ ಬಿಲ್ ಫೇಕ್ ಬೇಕಾ ಅಥವಾ ಮೀಟರ್ ಪ್ರಕಾರ ಬೇಕಾ ಅಂತ ಕೇಳಿದಾಗ ನಾನು ಅರೆಕ್ಷಣ ದಂಗಾಗಿದ್ದೆ. ಶುಕ್ರವಾರ ರಸ್ತೆಯಲ್ಲೆಲ್ಲ ಮಸೀದಿಯಿಂದ ಹೊರಬರುತಿದ್ದ ಜನಸಮೂಹ ನೋಡಿ, ದೆಹಲಿಯ ಜಾಮಾ ಮಸೀದಿಯ ನೆನಪಾಗಿತ್ತು. ಫ್ರಾನ್ಸ್ ಯುರೋಪಿನ ಸುಂದರ ದೇಶ. ಫ್ರೆಂಚ್ ಜನರು ತಮ್ಮ ಭಾಷೆಯನ್ನು ಅತೀವ ಪ್ರೀತಿಸುತ್ತಾರೆ. ವೈನ್, ಚೀಸ್, ಬ್ರೆಡ್, ಸಾಹಿತ್ಯ, ಕಲೆ ಮತ್ತು ತತ್ತ್ವಶಾಸ್ತ್ರದ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಓದಿದ್ದೆ. ಡಿಪಾರ್ಟ್ಮೆಂಟಲ್ ಸ್ಟೋರಿನಲ್ಲಿ , ಇಂಗ್ಲೀಷಿನಲ್ಲಿ ಮಾತಾಡಿದಾಗ ಫ್ರೆಂಚ್ನಲ್ಲಿ ಉತ್ತರ ಕೊಟ್ಟಿದ್ದು ನೋಡಿ ತಮಿಳುನಾಡಿನ ಭಾಷಾ ಪ್ರೇಮ ನೆನಪಾಗಿತ್ತು.
ಜೀವನದಲ್ಲಿ ವಿಶ್ರಾಂತಿ, ಕುಟುಂಬ, ಸ್ನೇಹ ಮತ್ತು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸ್ಥಾನ ನೀಡುವ ಪರಂಪರೆ ಫ್ರಾನ್ಸಿನ ಸಾಮಾಜಿಕ ಜೀವನದ ಪ್ರಮುಖ ಅಂಶವಾಗಿದೆ. ಕಾನೂನುಬದ್ಧ ಕೆಲಸದ ವಾರ 35 ಗಂಟೆಗಳು, ಮಧ್ಯದಲ್ಲಿ ಕಾಫಿ ಬ್ರೇಕ್, ಲಂಚ್ ಬ್ರೇಕ್ ಸೇರಿ. ಪ್ರತಿಯೊಬ್ಬರೂ ಅಷ್ಟೇ ಗಂಟೆ ಕೆಲಸ ಮಾಡುತ್ತಾರೆ ಎಂದಲ್ಲ; ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನಕ್ಕೆ ಫ್ರೆಂಚ್ ಸಮಾಜದಲ್ಲಿ ಮಹತ್ವವಿದೆ. ತನ್ನದೇ ಸಂಸ್ಕೃತಿ ಮತ್ತು ಜೀವನಶೈಲಿಯ ಬಗ್ಗೆ ಹೆಮ್ಮೆಪಡುವ ಈ ರಾಷ್ಟ್ರವು ಇಂದು ವಲಸೆ, ರಾಷ್ಟ್ರೀಯ ಗುರುತು, ದಂಗೆಗಳಲ್ಲಿ ಏಕೆ ನಲುಗುತ್ತಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಇಂದಿನ ರಾಜಕೀಯದಲ್ಲಿ ಹುಡುಕಲಾಗುವುದಿಲ್ಲ. ಅದರ ಬೇರುಗಳು ಫ್ರಾನ್ಸಿನ ವಸಾಹತುಶಾಹಿ ಇತಿಹಾಸದಲ್ಲಿದೆ.

ಎರಡನೇ ವಿಶ್ವಯುದ್ಧದ ನಂತರ ಫ್ರಾನ್ಸ್ ತನ್ನ ಕೈಗಾರಿಕೆ, ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಪುನರ್ನಿರ್ಮಿಸಬೇಕಾಗಿತ್ತು. ಕಾರ್ಖಾನೆಗಳು, ಕಟ್ಟಡ ನಿರ್ಮಾಣಗಳಲ್ಲಿ ಹೆಚ್ಚಿನ ಕಾರ್ಮಿಕರ ಅಗತ್ಯವಿತ್ತು. ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಫ್ರಾನ್ಸ್ 1945ರಲ್ಲಿ “National Immigration Office” ಸ್ಥಾಪಿಸಿತು. ಉತ್ತರ ಆಫ್ರಿಕಾದ ಅಲ್ಜೀರಿಯಾ, ಮೊರೊಕ್ಕೊ, ತುನಿಷಿಯಾ (ಫ್ರಾನ್ಸಿನ ವಸಾಹತುಗಳು) ದಿಂದ ಸಾವಿರಾರು ಮುಸ್ಲಿಂ ಕಾರ್ಮಿಕರು ಫ್ರಾನ್ಸಿಗೆ ಬಂದರು. ಕಡಿಮೆ ಸಂಬಳದಲ್ಲಿ ದಿನವಿಡಿ ದುಡಿತ ಫ್ರಾನ್ಸಿನ ಆರ್ಥಿಕ ಬೆಳವಣಿಗೆಗೆ ನೆರವಾಯಿತು. ಕೇವಲ ಮೂರು ದಶಕಗಳಲ್ಲಿ ಕಾರ್ಮಿಕರ ಕುಟುಂಬ ದುಪ್ಪಟ್ಟಾಯಿತು. 1974ರಲ್ಲಿ ಫ್ರಾನ್ಸ್ ಕಾರ್ಮಿಕ ವಲಸೆಗೆ ನಿರ್ಬಂಧಗಳನ್ನು ಹೇರಿತು, ಹೊಸ ನಿಯಮಗಳಲ್ಲೂ ದೋಷಗಳಿದ್ದವು. ಕಾರ್ಮಿಕರಾಗಿ ಬಂದವರು ಶಾಶ್ವತವಾಗಿ ನೆಲೆಸಿದರು; ಅವರ ಕುಟುಂಬಗಳು ಡಿಪೆಂಡೆಂಟ್ ಆಗಿ ಬಂದು ನೆಲೆಸಿದವು; ಅವರ ಮಕ್ಕಳು ಫ್ರಾನ್ಸಿನಲ್ಲೇ ಹುಟ್ಟಿ ಬೆಳೆದರು. ಎಲ್ಲರಿಗೂ ಫ್ರಾನ್ಸ್ ಪೌರತ್ವ ನೀಡಿತು. ಆರ್ಥಿಕ ದೃಷ್ಟಿಯಿಂದ ಇದು ಅರ್ಥವಾಗುವ ನಿರ್ಧಾರವಾಗಿತ್ತು. ಕಾರ್ಮಿಕರ ಕೊರತೆಯಿದ್ದಾಗ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗಬಹುದು. ಸರ್ಕಾರಗಳು ಕಾರ್ಮಿಕರಿಗೆ ಪೌರತ್ವ ನೀಡುವಾಗ ಅವರ ಮುಂದಿನ ಜೀವನದ ಬಗ್ಗೆ ಯೋಚಿಸಲಿಲ್ಲ. ಕಾರ್ಮಿಕರು ಕುಟುಂಬಗಳನ್ನು ಕಟ್ಟುತ್ತಾರೆ, ಮಕ್ಕಳು ಹುಟ್ಟುತ್ತಾರೆ, ಮಕ್ಕಳು ಶಾಲೆಗೆ ಹೋಗುತ್ತಾರೆ, ಅವರು ಆ ದೇಶದ ಭಾಷೆಯನ್ನು ಕಲಿಯುತ್ತಾರೆ, ಅದರ ಸಮಾಜದಲ್ಲಿ ಬೆಳೆದು ಅದರ ನಾಗರಿಕರಾಗುತ್ತಾರೆ. ಹೀಗೆ ತಾತ್ಕಾಲಿಕ ಆರ್ಥಿಕ ಅಗತ್ಯದಿಂದ ಆರಂಭವಾದ ವಲಸೆ ದೀರ್ಘಕಾಲೀನ ಸಾಮಾಜಿಕ ಬದಲಾವಣೆಯಾಗಿ, ರೂಪುಗೊಳ್ಳುತ್ತದೆ. 2011ರಲ್ಲಿ ಸಿರಿಯಾದಲ್ಲಿ ಆರಂಭವಾದ ಅಂತರ್ಯುದ್ಧದ ನಂತರ, ಯುದ್ಧ, ಹಿಂಸಾಚಾರ ಮತ್ತು ಕಿರುಕುಳದಿಂದ ತಪ್ಪಿಸಿಕೊಳ್ಳಲು ಅನೇಕ ಸಿರಿಯನ್ನರು ಫ್ರಾನ್ಸ್ ಸೇರಿದಂತೆ ಯುರೋಪಿನ ವಿವಿಧ ದೇಶಗಳಲ್ಲಿ ನೆಲೆ ಕಂಡಿದ್ದಾರೆ.

ದುಬೈ,ಸೌದಿ ಅರೇಬಿಯಾ, ಕತಾರ್, ಕುವೈತ್, ಬಹ್ರೈನ್, ಅಬುಧಾಬಿ, ಒಮಾನ್ ಇತ್ಯಾದಿ ಕೊಲ್ಲಿ ರಾಷ್ಟ್ರಗಳಲ್ಲಿ ವಿದೇಶಿ ಕಾರ್ಮಿಕರು ಆರ್ಥಿಕತೆಯ ಪ್ರಮುಖ ಭಾಗವಾಗಿದ್ದಾರೆ. ಬಹುಪಾಲು ಜನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮರು. ದೀರ್ಘಕಾಲ ವಾಸಿಸುವುದರಿಂದ ಮಾತ್ರ ವಿದೇಶಿ ಕಾರ್ಮಿಕರಿಗೆ ಪೌರತ್ವ ದೊರೆಯುವುದಿಲ್ಲ. ಯಾವುದೇ ಅರಬ್ ರಾಷ್ಟ್ರವು ವಿದೇಶಿ ಮುಸ್ಲಿಮರಿಗೆ ಪೌರತ್ವ ನೀಡುವುದಿಲ್ಲ. ಸಿರಿಯಾ, ಪ್ಯಾಲೆಸ್ಟೈನ್, ಲೆಬನಾನ್ ದೇಶದ ಲಕ್ಷಾಂತರ ಜನ ನಿರ್ಗತಿಕರಾದರೂ ಯಾವುದೇ ಅರಬ ದೇಶ ಅವರಿಗೆ ಪೌರತ್ವ ನೀಡಲಿಲ್ಲ. ಅನೇಕ ಕೊಲ್ಲಿ ರಾಷ್ಟ್ರಗಳಲ್ಲಿ ವಿದೇಶಿ ಕಾರ್ಮಿಕರ ದೀರ್ಘಕಾಲೀನ ವಾಸ ಮತ್ತು ಪೌರತ್ವದ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ತಮ್ಮನ್ನು ಅತ್ಯಂತ “ಬುದ್ಧಿವಂತ ತಳಿ” ಎಂದು ಬೀಗುವ ಯುರೋಪಿನ ರಾಷ್ಟಗಳು ಅರಬ್ಬರಿಂದ ಕಲಿಯಬೇಕಾಗಿತ್ತು ವಲಸೆ ಕಾನೂನನ್ನು ಹೇಗೆ ರೂಪಿಸಬೇಕೆಂದು!
ಪ್ಯಾರಿಸ್ನ ಬೀದಿಗಳಲ್ಲಿ, ವಿಶೇಷವಾಗಿ ಮೆಟ್ರೋ ರೈಲುಗಳಲ್ಲಿ ನಾನು ಸಾಕಷ್ಟು ಓಡಾಡಿದ್ದೇನೆ. ಶುಕ್ರವಾರ ರಾತ್ರಿ, ಶನಿವಾರ ರಾತ್ರಿ ಹಾಗೂ ಭಾನುವಾರದ ಹಗಲಿನಲ್ಲಿ ಪ್ಯಾರಿಸ್ನ ಯುವಜನರ ಬದುಕನ್ನು ಹತ್ತಿರದಿಂದ ಗಮನಿಸಿದ್ದೇನೆ. ಅಲ್ಲಿ ನನಗೆ ಕಂಡ ಜನರಲ್ಲಿ ಬಹುತೇಕ ಜನ ಯಂಗ್ ಜನರೇಶನ್ , ಗುಂಪು ಗುಂಪಾಗಿ ಸೇರುತ್ತಿದ್ದರು, ಸಿಗರೇಟ್ ಸೇದುತ್ತಿದ್ದರು, ಡ್ರಿಂಕ್ಸ್ ಮಾಡುತ್ತಿದ್ದರು. ತಮ್ಮದೇ ಲೋಕದಲ್ಲಿ ಬಹಳ ಖುಷಿಯಾಗಿ, ಸ್ವತಂತ್ರವಾಗಿ ಬದುಕುತ್ತಿದ್ದಂತೆ ಕಾಣುತ್ತಿದ್ದರು. ಅವರ ಸುತ್ತಮುತ್ತ ಪೊಲೀಸ್ ವ್ಯಾನ್ಗಳು ಓಡಾಡುತ್ತಿದ್ದವು. ಕ್ರಿಸ್ಮಸ್ ಸಮಯವಾಗಿದ್ದರಿಂದ ಬಹುಶಃ ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದರು. ಅಲ್ಲಲ್ಲಿ ಯುವಕರ ಗುಂಪುಗಳು ಸೇರಿಕೊಂಡು ಜೋರಾಗಿ ಮಾತನಾಡುತ್ತಾ, ಕೂಗಾಡುತ್ತಾ, ತಮ್ಮದೇ ರೀತಿಯಲ್ಲಿ ಸಂಭ್ರಮಿಸುತ್ತಿದ್ದವು. ಅವರನ್ನು ನೋಡುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುತ್ತಿತ್ತು. ಇವರಲ್ಲಿ ಮೂಲ ಫ್ರೆಂಚ್ ಜನರು ಯಾರು? ವಲಸಿಗರಾಗಿ ಫ್ರಾನ್ಸಿಗೆ ಬಂದು, ಇಲ್ಲಿನವರನ್ನು ಮದುವೆಯಾಗಿ ನೆಲೆಸಿದವರ ಮಕ್ಕಳು ಯಾರು? ಇವರನ್ನು ಪ್ರತ್ಯೇಕಿಸಿ ಗುರುತಿಸುವುದು ನಿಜಕ್ಕೂ ಕಷ್ಟ. ಎಲ್ಲರೂ ಒಂದೇ ಸಮಾಜದ ಭಾಗವಾಗಿ ಬೆರೆತುಹೋಗಿದ್ದಾರೆ. ಈ ಎಲ್ಲವನ್ನೂ ಗಮನಿಸುತ್ತಿದ್ದಾಗ ನನಗೆ ಅನಿಸಿದ್ದು, ಇಂದಿನ ಫ್ರೆಂಚ್ ಯುವಜನರಿಗೆ ತಮ್ಮ ದೇಶದ ಇತಿಹಾಸದ ಬಗ್ಗೆ ಎಷ್ಟರ ಮಟ್ಟಿಗೆ ಅರಿವಿದೆ? ತಮ್ಮ ದೇಶಕ್ಕೊಂದು ಭವ್ಯ ಇತಿಹಾಸವಿದೆ, ಜಗತ್ತಿನ ಇತಿಹಾಸದಲ್ಲಿ ಮಹತ್ವದ ಸ್ಥಾನವಿದೆ ಎಂಬ ಅರಿವು ಅವರಿಗಿದೆಯೇ?
ಇದು ಫ್ರಾನ್ಸಿಗೆ ಮಾತ್ರ ಸೀಮಿತವಾದ ಪ್ರಶ್ನೆಯಲ್ಲ, ಭಾರತಕ್ಕೂ ಅಷ್ಟೇ ಅನ್ವಯಿಸುತ್ತದೆ. ಒಬ್ಬ ಅಜ್ಜ ತನ್ನ ಜೀವನವನ್ನೇ ಸವೆಸಿ, ಕಷ್ಟಪಟ್ಟು ಒಂದು ಮನೆಯನ್ನು ಕಟ್ಟುತ್ತಾನೆ. ಅವನ ಮಗ ಆ ಮನೆಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುತ್ತಾನೆ. ಆದರೆ ಆ ಮನೆಯಲ್ಲಿ ಸುಖವಾಗಿ ಬದುಕುವ ಮೊಮ್ಮಕ್ಕಳಿಗೆ, ಅದನ್ನು ಕಟ್ಟಲು ಅಜ್ಜ ಪಟ್ಟ ಕಷ್ಟದ ಅರಿವೇ ಇರುವುದಿಲ್ಲ. ಮನೆ ಸಿದ್ಧವಾಗಿ ಸಿಕ್ಕಿರುತ್ತದೆ, ಅದರ ಹಿಂದೆ ಅಜ್ಜ ಸುರಿಸಿದ ಬೆವರು, ಮಾಡಿದ ತ್ಯಾಗ, ಎದುರಿಸಿದ ಸಂಕಷ್ಟಗಳು ಅವರಿಗೆ ಗೊತ್ತಿರುವುದಿಲ್ಲ. ಸಮಾಜದ ವಿಚಾರದಲ್ಲಿಯೂ ಇದೇ ಆಗುತ್ತದೆ. ಹಿಂದಿನ ಪೀಳಿಗೆಗಳು ಕಷ್ಟಪಟ್ಟು ನಿರ್ಮಿಸಿದ ವ್ಯವಸ್ಥೆ, ಗಳಿಸಿದ ಸ್ವಾತಂತ್ರ್ಯ, ಉಳಿಸಿದ ಸಂಸ್ಕೃತಿ ಮತ್ತು ಸಾಧಿಸಿದ ಪ್ರಗತಿ ಮುಂದಿನ ಪೀಳಿಗೆಗೆ ಸಹಜವಾಗಿ ಸಿಗುತ್ತವೆ. ಹಾಗಾಗಿ, ಅವುಗಳ ಹಿಂದಿರುವ ಹೋರಾಟದ ಬೆಲೆ ನಿಧಾನವಾಗಿ ಮರೆತುಹೋಗುತ್ತದೆ. ಇತಿಹಾಸವೆಂದರೆ ಕೇವಲ ಗತಕಾಲದ ಕಥೆಯಲ್ಲ; ಇಂದು ನಾವು ಅನುಭವಿಸುತ್ತಿರುವ ಬದುಕಿನ ಹಿಂದೆ ಎಷ್ಟು ಜನರ ಶ್ರಮ ಮತ್ತು ತ್ಯಾಗವಿದೆ ಎಂಬುದನ್ನು ನೆನಪಿಸುವ ಪಾಠ. ಫ್ರಾನ್ಸ್ ಆಗಿರಲಿ, ಭಾರತವೇ ಆಗಿರಲಿ, ತನ್ನ ಪೂರ್ವಜರ ಇತಿಹಾಸವನ್ನು ಅರಿಯದ ಪೀಳಿಗೆಗೆ ತಾವು ಏನನ್ನು ಪಡೆದುಕೊಂಡಿದ್ದೇವೆ, ಅದನ್ನು ಪಡೆಯಲು ಹಿಂದಿನವರು ಏನೆಲ್ಲ ಕಳೆದುಕೊಂಡಿದ್ದಾರೆ ಎಂಬುದು ಅರ್ಥವಾಗುವುದು ಕಷ್ಟ. ಇತಿಹಾಸದ ಅರಿವು ಎಂದರೆ ಕೇವಲ ಹೆಮ್ಮೆಪಡುವುದಲ್ಲ; ಹಿಂದಿನವರ ಪರಿಶ್ರಮವನ್ನು ಅರ್ಥಮಾಡಿಕೊಂಡು, ಮುಂದಿನ ಪೀಳಿಗೆಗೆ ಇನ್ನಷ್ಟು ಉತ್ತಮವಾದ ಸಮಾಜವನ್ನು ಕಟ್ಟಿಕೊಡುವ ಜವಾಬ್ದಾರಿಯನ್ನೂ ಅರಿತುಕೊಳ್ಳುವುದು.
27-10-26 01:23 pm
HK News Desk
ದೇವೇಗೌಡ್ರ ಕುಟುಂಬವನ್ನು ಮುಗಿಸಲು ಡಿಕೆಶಿಯಿಂದ 600...
26-10-26 11:55 am
Rahul Gandhi, Siddaramaiah: ಸ್ಟಿಂಗ್ ಆಪರೇಶನ್ ;...
26-10-26 11:53 am
ಸ್ಟಿಂಗ್ ಆಪರೇಶನ್ ; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಗೆ...
24-10-26 05:35 pm
Parvez dharwad: 40 ದಿನಗಳ ನಿಗೂಢತೆ ಅಂತ್ಯ ; ಡೆತ್...
24-10-26 12:22 pm
25-10-26 09:40 pm
HK News Staffer
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್...
20-10-26 12:41 pm
Annamalai: ತಮಿಳುನಾಡಿನಲ್ಲಿ ಚುನಾವಣಾ ಅಖಾಡಕ್ಕೆ ಅಣ...
14-10-26 04:59 pm
27-10-26 01:53 pm
HK News Desk
ಸೌಜನ್ಯ ಪ್ರಕರಣದ ಎಸ್ಐಟಿ ಮುಖ್ಯಸ್ಥರ ಬದಲಾವಣೆಗೆ ಪಟ್...
26-10-26 03:41 pm
ನವರಾತ್ರಿಗೆ ಯಕ್ಷವೇಷ ಧರಿಸಿ ಗಳಿಸಿದ 2 ಲಕ್ಷ ದೇಣಿಗೆ...
25-10-26 10:26 pm
ಸ್ಟಿಂಗ್ ರಾಜಕೀಯ, ಸಿಎಂ ಬದಲಾವಣೆ ಕಾಂಗ್ರೆಸಿಗೆ ಹಿನ್...
25-10-26 08:25 pm
ಯುಪಿಐ ಮೇಲಿನ ತೆರಿಗೆ ಪ್ರಸ್ತಾಪಕ್ಕೆ ಅಣ್ಣಾಮಲೈ ವಿರೋ...
24-10-26 10:59 pm
26-10-26 09:22 pm
HK News Staffer
ಸಿಎಂ ಡಿಕೆಶಿ ಬಗ್ಗೆ ಲಘು ಹೇಳಿಕೆ ; ನಟ ಧನ್ವೀರ್ ವಿರ...
26-10-26 02:59 pm
Gurudas Shenoy: ಕೋಟದಲ್ಲಿ ಭೀಕರ ಅಪಘಾತ ; ಸೈಕಲ್ ನ...
26-10-26 12:49 pm
ಬೀದರಿನಲ್ಲಿ ಮತ್ತೊಂದು ಎಟಿಎಂ ಕತ್ತರಿಸಿ 23 ಲಕ್ಷ ದರ...
25-10-26 04:33 pm
ಐಷಾರಾಮಿ ಜೀವನಕ್ಕಾಗಿ ಹದಿಹರೆಯದ ಯುವಕರ ದುಷ್ಕೃತ್ಯ ;...
25-10-26 02:49 pm