ಬ್ರೇಕಿಂಗ್ ನ್ಯೂಸ್
21-08-20 11:53 am Headline Karnataka News Network ನ್ಯೂಸ್ View
ಗೌರವಾನ್ವಿತ ನ್ಯಾಯಾಲಯದ ತೀರ್ಪನ್ನು ನಾನು ಓದಿದ್ದೇನೆ. ಮೂರು ದಶಕಗಳಿಂದ ಹೊಗಳುಭಟನಾಗಿಯಲ್ಲದೇ, ಆದರೆ ವಿನಮ್ರ ಕಾವಲುಗಾರನಾಗಿ, ಒಂದಷ್ಟು ವೈಯಕ್ತಿಕ ಮತ್ತು ವೃತ್ತಿಜೀವನದ ಹಿತಾಸಕ್ತಿಗಳನ್ನು ಬದಿಗಿಟ್ಟು ನಾನು ಯಾವ ನ್ಯಾಯಾಲಯದ ಘನತೆಯನ್ನು ಎತ್ತಿಹಿಡಿಯಲು ಪ್ರಯತ್ನಿಸಿದ್ದೇನೋ ಅದೇ ನ್ಯಾಯಾಂಗದ ನಿಂದನೆ ಮಾಡಿದ್ದೇನೆಂದು ನನ್ನನ್ನು ತಪ್ಪಿತಸ್ಥನಾಗಿಸಿರುವ ತೀರ್ಪು ನನಗೆ ನೋವು ತಂದಿದೆ.
ನನಗೆ ನೋವಾಗುತ್ತಿರುವುದು ಶಿಕ್ಷೆ ಆಗಬಹುದು ಎಂಬ ಕಾರಣಕ್ಕಲ್ಲ, ನನ್ನ ಆಶಯವನ್ನು ಸಂಪೂರ್ಣವಾಗಿ ಅಪಾರ್ಥ ಮಾಡಿಕೊಂಡಿರುವುದಕ್ಕಾಗುತ್ತಿದೆ. ನ್ಯಾಯದಾನದ ಸಂಸ್ಥೆಯ ಮೇಲೆ “ದುರುದ್ದೇಶಪೂರಿತವಾದ ಕೀಳುಮಟ್ಟದ, ಲೆಕ್ಕಾಚಾರದ ದಾಳಿ” ಮಾಡಿದ್ದೇನೆಂದು ನ್ಯಾಯಾಲಯ ನನ್ನನ್ನು ತಪ್ಪಿತಸ್ಥನನ್ನಾಗಿಸಿರುವುದನ್ನು ನೋಡಿ ನನಗೆ ಅಘಾತವಾಗಿದೆ.
ಈ ದಾಳಿಗಳನ್ನು ಮಾಡುವುದಕ್ಕೆ ನನಗಿದ್ದ ಉದ್ದೇಶಗಳೇನು ಎಂಬುದಕ್ಕೆ ಯಾವುದೇ ಸಾಕ್ಷ್ಯ ನೀಡದೆ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿರುವುದು ನನ್ನನ್ನು ಕುಗ್ಗಿಸಿದೆ. ಸ್ವಯಂಪ್ರೇರಿತ ನೋಟಿಸ್ ನೀಡುವುದಕ್ಕೆ ಕಾರಣವಾದ ದೂರಿನ ಪ್ರತಿಯನ್ನು ಕೂಡ ಒದಗಿಸುವ ಅವಶ್ಯಕತೆ ಇಲ್ಲವೆಂದೂ, ನನ್ನ ಅಫಿಡವಿಟ್‌ನಲ್ಲಿ ಮಾಡಿದ ನಿರ್ದಿಷ್ಟ ಆರೋಪಗಳಿಗೆ ಅಥವಾ ನನ್ನ ಪರ ವಕೀಲರು ಸಲ್ಲಿಸಿದ ಅರ್ಜಿಗೆ ಉತ್ತರಿಸುವ ಅವಶ್ಯಕತೆ ಇಲ್ಲವೆಂದೂ ನ್ಯಾಯಾಲಯ ಬಗೆದಿರುವುದರಿಂದ ನನಗೆ ತೀವ್ರ ನಿರಾಶೆಯಾಗಿದೆ ಎಂದು ಸ್ಪಷ್ಟೀಕರಿಸುತ್ತೇನೆ.
ನನ್ನ ಟ್ವೀಟ್ “ಭಾರತದ ಪ್ರಜಾಪ್ರಭುತ್ವದ ಮುಖ್ಯ ಆಧಾರಸ್ತಂಭವನ್ನು ಅಲುಗಾಡಿಸುವ ಪರಿಣಾಮ ಉಂಟುಮಾಡಬಲ್ಲದು” ಎಂದು ನ್ಯಾಯಾಲಯಕ್ಕೆ ಕಂಡಿರುವುದನ್ನು ನಂಬಲು ಕಷ್ಟವಾಗುತ್ತಿದೆ. ಈ ಎರಡೂ ಟ್ವೀಟ್‌ಗಳು ನನ್ನ ಪ್ರಾಮಾಣಿಕ ನಂಬಿಕೆಯನ್ನು ಪ್ರತಿನಿಧಿಸಿದ್ದವು ಮತ್ತು ಆ ಅಭಿವ್ಯಕ್ತಿಗೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿರಲೇಬೇಕು ಎಂದು ನಾನು ಇಲ್ಲಿ ಮತ್ತೆ ಪುನರುಚ್ಚರಿಸುತ್ತೇನೆ.
ಅಲ್ಲದೆ, ನ್ಯಾಯಾಂಗದ ಆರೋಗ್ಯಕರ ನಿರ್ವಹಣೆಗೆ ಸಾರ್ವಜನಿಕ ಕಣ್ಗಾವಲು ಅತ್ಯವಶ್ಯ. ಸಾಂವಿಧಾನಿಕ ಸಮತೋಲನ ವ್ಯವಸ್ಥೆಯನ್ನು ಕಾಪಾಡಲು ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆಯ ಮುಕ್ತ ವಿಮರ್ಶೆ ಅತ್ಯವಶ್ಯ ಎಂದು ನಾನು ನಂಬಿದ್ದೇನೆ. ವೈಯಕ್ತಿಕ ಮತ್ತು ವೃತ್ತಿಪರ ಸೂಕ್ಷ್ಮಗಳಿಗಿಂತ ಸಾಂವಿಧಾನಿಕ ಸಮತೋಲನ ವ್ಯವಸ್ಥೆಯನ್ನು ಉಳಿಸುವುದು ಮೊದಲು ಆಗಬೇಕಾದ ಮತ್ತು ಭವಿಷ್ಯದ ಬಗ್ಗೆ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವರ್ತಮಾನದ ಚಿಂತನೆಗಳು ಅಡ್ಡಿ ಬರಬಾರದ, ಉನ್ನತ ಆದರ್ಶಗಳು ನಮ್ಮ ದಿನನಿತ್ಯದ ವಹಿವಾಟುಗಳನ್ನು ತೊಡೆದುಹಾಕಬೇಕಿರುವ ಐತಿಹಾಸಿಕ ಕಾಲಘಟ್ಟದಲ್ಲಿ ನಾವು ಬದುಕಿದ್ದೇವೆ. ಇಂತಹ ಸಮಯದಲ್ಲಿ ಅದೂ ನ್ಯಾಯಾಲಯದ ಅಧಿಕಾರಿಯಾಗಿರುವ ನನ್ನಂತಹವನಿಗೆ ಮಾತನಾಡದೆ ಇರುವುದು ನನ್ನ ಕರ್ತವ್ಯದಿಂದ ವಿಮುಖನಾದಂತೆ.
ಈ ನಮ್ಮ ಗಣರಾಜ್ಯದ ಐತಿಹಾಸಿಕ ಕಾಲಘಟ್ಟದಲ್ಲಿ ನಾನು ನಿರ್ವಹಿಸಬೇಕಿದ್ದ ಉನ್ನತ ಕರ್ತವ್ಯದ ಸಣ್ಣ ಭಾಗ ಆ ಟ್ವೀಟ್‌ಗಳು. ಅನ್ಯಮನಸ್ಕನಾಗಿ ಆ ಟ್ವೀಟ್‌ಗಳನ್ನು ನಾನು ಬರೆದಿಲ್ಲ. ಆ ಟ್ವೀಟ್‌ಗಳಲ್ಲಿ ಅಭಿವ್ಯಕ್ತವಾಗಿರುವ ಸಂಗತಿಗಳು ನನ್ನ ಪ್ರಾಮಾಣಿಕ ನಂಬಿಕೆಯ ಭಾಗವಾಗಿದ್ದವು ಮತ್ತು ಈಗಲೂ ಆಗಿವೆ. ಹೀಗಿರುವಾಗ ಆ ಟ್ವೀಟ್‌ಗಳ ಬಗ್ಗೆ ಕ್ಷಮೆ ಕೇಳುವುದು ನನ್ನ ಕಡೆಯಿಂದ ಅಪ್ರಾಮಾಣಿಕ ಮತ್ತು ನಿಂದನೆಯ ನಡೆಯಾಗುತ್ತದೆ. ಆದುದರಿಂದ, ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ತಮ್ಮ ವಿಚಾರಣೆಯಲ್ಲಿ ಹೇಳಿದ ಮಾತುಗಳನ್ನು ವಿನಮ್ರತೆಯಿಂದ ಮತ್ತೊಂದು ರೀತಿಯಲ್ಲಿ ಹೇಳಬಯಸುತ್ತೇನೆ: ನಾನು ಕ್ಷಮಿಸಿರೆಂದು ಕೋರುವುದಿಲ್ಲ. ನೀವು ಉದಾತ್ತ ವೈಶಾಲ್ಯತೆಯನ್ನು ತೋರಿರೆಂದೂ ಕೇಳುವುದಿಲ್ಲ.
ಆದುದರಿಂದ, ಯಾವುದನ್ನು ನಾಗರಿಕನಾಗಿ ನನ್ನ ಅತ್ಯುನ್ನತ ಕರ್ತವ್ಯವೆಂದು ಭಾವಿಸಿದ್ದೇನೋ, ಅದನ್ನು ನ್ಯಾಯಾಲಯವು ಅಪರಾಧ ಎಂದು ಪರಿಗಣಿಸಿರುವ ಈ ಸಂದರ್ಭದಲ್ಲಿ, ಯಾವ ಶಿಕ್ಷೆಯನ್ನು ಕಾನೂನುಪ್ರಕಾರ ನೀಡಲಾಗುತ್ತದೆಯೋ ಅದನ್ನು ಸಂತೋಷದಿಂದ ಸ್ವೀಕರಿಸಲು ನಾನಿಲ್ಲಿ ನಿಂತಿದ್ದೇನೆ.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm