ಮೆಡಿಕಲ್ ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ ; ಅಪರಾಧಿಗೆ ಏಳು ವರ್ಷ ಶಿಕ್ಷೆ

28-09-20 05:20 pm       Mangalore Correspondent   ಕ್ರೈಂ

ಲೇಡಿಸ್ ಹಾಸ್ಟೆಲ್ ನುಗ್ಗಿ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಗೈದು ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಏಳು ವರ್ಷಗಳ ಶಿಕ್ಷೆ ನೀಡಿದೆ. 

ಮಂಗಳೂರು, ಸೆಪ್ಟಂಬರ್ 28: ಲೇಡಿಸ್ ಹಾಸ್ಟೆಲ್ ನುಗ್ಗಿ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಗೈದು ದರೋಡೆ ನಡೆಸಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಿಂದ ಏಳು ವರ್ಷಗಳ ಶಿಕ್ಷೆ ನೀಡಿದೆ. 

ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸೈದುನ್ನೀಸಾ ಈ ತೀರ್ಪು ನೀಡಿದ್ದಾರೆ. ಅಪರಾಧಿ ಎಂದು ಪರಿಗಣಿಸಲ್ಪಟ್ಟ ನಾಗೇಶ್ (30) ಗೆ ಏಳು ವರ್ಷಗಳ ಕಠಿಣ ಸಜೆ ಮತ್ತು ದಂಡ ವಿಧಿಸಲಾಗಿದೆ. 

2007 ರಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ದೇರಳಕಟ್ಠೆಯ ಹಾಸ್ಟೇಲ್ ಒಂದರಲ್ಲಿ ಘಟನೆ ನಡೆದಿತ್ತು. ಕೇರಳ ಮೂಲದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸಂತ್ರಸ್ತೆಯಾಗಿದ್ದಳು. 

ಮುಂಜಾನೆ 4.30 ರ ಸುಮಾರಿಗೆ ಹಾಸ್ಟೆಲ್ ಹಿಂಭಾಗದ ಪೈಪ್ ಮೂಲಕ ಕೊಠಡಿಗೆ ನುಗ್ಗಿದ್ದ ಆರೋಪಿ, ವಿದ್ಯಾರ್ಥಿನಿಯ ಅತ್ಯಾಚಾರಗೈದು ಕೊಲೆ ಬೆದರಿಕೆಯೊಡ್ಡಿ 5 ಲಕ್ಷ  ನಗದು ನೀಡುವಂತೆ ಒತ್ತಾಯಿಸಿದ್ದ. ಬಳಿಕ ವಿದ್ಯಾರ್ಥಿನಿಯ ಪರ್ಸ್ ನಿಂದ ಮೂರು ಸಾವಿರ ನಗದು, ಎಟಿಎಂ ಕಾರ್ಡ್ ಸಹಿತ ಪಿನ್ ನಂಬರ್ ಪಡೆದು ಮತ್ತೊಂದು ಕೊಠಡಿಗೆ ನುಗ್ಗಿ ಇನ್ನೊಬ್ಬಳು ವಿದ್ಯಾರ್ಥಿನಿಯ ಮೊಬೈಲ್ ಎಗರಿಸಿ ಪರಾರಿಯಾಗಿದ್ದ. 

ಕೃತ್ಯದ ಬಳಿಕ ಆರೋಪಿ, ನಗರದ ಕಂಕನಾಡಿ ಎಟಿಎಂ ನಲ್ಲಿ ವಿದ್ಯಾರ್ಥಿನಿಯ ಕಾರ್ಡ್ ನಿಂದ ಹಣ ವಿತ್ ಡ್ರಾ ಮಾಡಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು. ಬೆರಳಚ್ಚು ಮತ್ತು ಎಟಿಎಂ ಸಿಸಿ ಟಿವಿ ಆಧರಿಸಿ ಅಪರಾಧಿಯ ಪತ್ತೆ ಮಾಡಿದ ಪೊಲೀಸರು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯ ಕೃತ್ಯ ಸಾಬೀತಾಗಿದ್ದರಿಂದ ಶಿಕ್ಷೆ ಘೋಷಣೆ ಮಾಡಿದೆ.

Join our WhatsApp group for latest news updates (2)