ಪಾರ್ಕ್ ಏರಿಯಾದಲ್ಲಿ ಬೆಂಕಿ, ಐದು ಬೈಕ್ ಬೆಂಕಿಗಾಹುತಿ !

30-09-20 03:28 pm       Mangalore Correspondent   ಕ್ರೈಂ

ನಗರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಂದು ಕಡೆ ಐದು ಬೈಕುಗಳು ಬೆಂಕಿಗಾಹುತಿಯಾದರೆ ಇನ್ನೊಂದು ಕಡೆ ಬ್ಯಾಂಕ್ ಕಚೇರಿ ಒಳಗೆ ಬೆಂಕಿ ಅವಘಡ ಉಂಟಾಗಿದೆ. 

ಮಂಗಳೂರು, ಸೆಪ್ಟಂಬರ್ 30: ನಗರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಂದು ಕಡೆ ಐದು ಬೈಕುಗಳು ಬೆಂಕಿಗಾಹುತಿಯಾದರೆ ಇನ್ನೊಂದು ಕಡೆ ಬ್ಯಾಂಕ್ ಕಚೇರಿ ಒಳಗೆ ಬೆಂಕಿ ಅವಘಡ ಉಂಟಾಗಿದೆ. 

ಬಂಟ್ಸ್ ಹಾಸ್ಟೆಲ್ ಸಮೀಪದ ಸಿ.ವಿ.ನಾಯಕ್ ಹಾಲ್ ಬಳಿ ಭುವನೇಂದ್ರ ಅಪಾರ್ಟ್ಮೆಂಟ್ ನಲ್ಲಿ ಬುಧವಾರ ಮುಂಜಾನೆ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ಪಾರ್ಕ್ ಮಾಡಲಾಗಿದ್ದ 5 ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿದ್ದು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿಯನ್ನು ನಂದಿಸಲು ಸಹಕರಿಸಿದ್ದಾರೆ. ಆದರೆ ಬೈಕ್ ಪಾರ್ಕಿಂಗ್ ಏರಿಯಾದಲ್ಲಿ ಅಗ್ನಿ ಅವಘಡ ಹೇಗೆ ಸಂಭವಿಸಿತ್ತು ಎಂದು ತಿಳಿದುಬಂದಿಲ್ಲ. ಬ್ಯಾಟರಿ ಶಾರ್ಟ್ ಆಗಿ ಬೆಂಕಿ ಕಾಣಿಸಿದರೂ, ನಾಲ್ಕೈದು ಬೈಕಿಗೆ ಹರಡಿದ್ದು ಶಂಕೆಗೆ ಕಾರಣವಾಗಿದೆ. 

ಇನ್ನು ಬ್ಯಾಂಕ್ ಆಫ್ ಬರೋಡ ಹಂಪನಕಟ್ಟೆ ಶಾಖೆಯಲ್ಲಿ ಬುಧವಾರ ಮುಂಜಾನೆ ಸುಮಾರು ಐದು ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ. ಇದರ ಪರಿಣಾಮ ಕಚೇರಿಯಲ್ಲಿ ಹೆಚ್ಚಿನ ಅವಘಡಗಳು ಸಂಭವಿಸಿಲ್ಲ ಎನ್ನಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

video