Mangalore dacoity, crime, PWD, Ullayabettu: ಉಳಾಯಿಬೆಟ್ಟು ಪಿಡಬ್ಲ್ಯುಡಿ ಕಂಟ್ರಾಕ್ಟರ್ ಮನೆಗೆ ನುಗ್ಗಿ ದರೋಡೆ ; ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ನಗದು, ಒಡವೆ ಲೂಟಿ, ಮಾಸ್ಕ್ ಧಾರಿಗಳ ಕೃತ್ಯ 

21-06-24 11:21 pm       Mangalore Correspondent   ಕ್ರೈಂ

ಪಿಡಬ್ಲ್ಯುಡಿ ಕಂಟ್ರಾಕ್ಟರ್ ಒಬ್ಬರ ಮನೆಗೆ ನುಗ್ಗಿದ ಎಂಟು ಮಂದಿಯಿದ್ದ ತಂಡ ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ದರೋಡೆಗೈದ ಘಟನೆ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಎಂಬಲ್ಲಿ ನಡೆದಿದೆ. 

ಮಂಗಳೂರು, ಜೂನ್.21: ಪಿಡಬ್ಲ್ಯುಡಿ ಕಂಟ್ರಾಕ್ಟರ್ ಒಬ್ಬರ ಮನೆಗೆ ನುಗ್ಗಿದ ಎಂಟು ಮಂದಿಯಿದ್ದ ತಂಡ ಮನೆಯವರನ್ನು ಕಟ್ಟಿ ಹಾಕಿ ಚೂರಿ ತೋರಿಸಿ ದರೋಡೆಗೈದ ಘಟನೆ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಎಂಬಲ್ಲಿ ನಡೆದಿದೆ. 

ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಅವರ ಉಳಾಯಿಬೆಟ್ಟು ಮನೆಯಲ್ಲಿ ಘಟನೆ ನಡೆದಿದೆ. ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದ 8-9 ಮಂದಿಯಿದ್ದ ತಂಡ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದೆ. ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ ತಂಡದ ಸದಸ್ಯರು ಚೂರಿ ತೋರಿಸಿ ಮನೆಯವರನ್ನು ಹೆದರಿಸಿದ್ದಾರೆ. 

ಬಳಿಕ ಮನೆಯಲ್ಲಿದ್ದವರನ್ನು ಬೆಡ್ ಶೀಟ್ ಬಳಸಿ ಕೈಕಾಲುಗಳನ್ನು ಕಟ್ಟಿದ್ದು ನಮ್ಮ ಜೊತೆ ಸಹಕರಿಸಿ, ನಾವು ಮನೆಯಲ್ಲಿ ನಗದು ಹಣ ಇದೆಯಾ ಅಂತ ನೋಡುತ್ತೇವೆ ಎಂದಿದ್ದಾರೆ. ಮನೆಯ ಒಳಗೆಲ್ಲ ತಡಕಾಡಿ ಸಿಕ್ಕಿದ ನಗದು ಹಣ ಮತ್ತು ಒಡವೆಗಳನ್ನು ದೋಚಿದ್ದಾರೆ. ಬಳಿಕ ಮನೆ ಮಾಲೀಕನ ವಾಹನವನ್ನು ಕದ್ದುಕೊಂಡು ತೆರಳಿದ್ದು ಮನೆಯಿಂದ ಅನತಿ ದೂರದಲ್ಲಿ ಬಿಟ್ಟು ಹೋಗಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Mangalore dacoity robbery at PWD Contrator house at Ullayabettu. Padnabham Kotiyan (PWD Contrator) living besides his farm in Ullayabettu area in Mangalore witnessed  8-9 people wearing shirt and pent and with masks on their face entered the house and threatened the family with knifes. They tied the family with bedsheet and told them to cooperate since they only wanted cash. They searched the entire house for cash and took whatever cash and gold they could find in the house. They also took the owner's vehicle which was found some distance from the house abandoned. A case is being registered in Rural police station.