ಬ್ರೇಕಿಂಗ್ ನ್ಯೂಸ್
27-09-25 01:06 pm Bangalore Correspondent ಕ್ರೈಂ
ಬೆಂಗಳೂರು, ಸೆ.27 : ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮಹಿಳಾ ವಿಜ್ಞಾನಿಯೊಬ್ಬರನ್ನು ಸೈಬರ್ ವಂಚಕರು ಯಾಮಾರಿಸಿ ಮೂರು ದಿನ ಡಿಜಿಟಲ್ ಅರೆಸ್ಟ್ ಮಾಡಿದ್ದಲ್ಲದೆ 8.80 ಲಕ್ಷ ರೂ. ಪೀಕಿಸಿ ವಂಚಿಸಿದ ಘಟನೆ ನಡೆದಿದೆ. 49 ವರ್ಷದ ಮಹಿಳಾ ವಿಜ್ಞಾನಿ ನೀಡಿದ ದೂರಿನ ಅನ್ವಯ ಕೇಂದ್ರ ವಿಭಾಗದ ಸೈಬರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೆ.16ರಂದು ಅಪರಿಚಿತನೊಬ್ಬ ವಿಜ್ಞಾನಿಗೆ ಕರೆ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ‘‘ ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬೇರೆಯವರು ಬಳಸುತ್ತಿದ್ದು, ಮಾನವ ಕಳ್ಳಸಾಗಣೆ ಸೇರಿ 17 ಪ್ರಕರಣಗಳು ದಾಖಲಾಗಿವೆ’’ ಎಂದು ಬೆದರಿಸಿದ್ದ. ಸದ್ಯಕ್ಕೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ತನಿಖೆಗೆ ಸಹಕರಿಸದಿದ್ದರೆ ಬಂಧಿಸಲಾಗುವುದು ಎಂದು ಬೆದರಿಸಿದ್ದ.
ಅಲ್ಲದೆ, ‘ಹೇಳಿದಂತೆ ಕೇಳಿದರೆ ಸಹಾಯ ಮಾಡುತ್ತೇನೆ’ ಎಂದು ನಂಬಿಸಿದ್ದ. ‘ತನಿಖೆ ಪೂರ್ಣವಾಗುವ ತನಕ ಮನೆಯವರಿಗೆ ವಿಷಯ ತಿಳಿಸಬಾರದು. ಒಂದು ವೇಳೆ ಮನೆಯವರಿಗೆ ಹೇಳಿದರೆ ಹೊರಗಡೆ ಇರುವ ಸಿಬ್ಬಂದಿ ತಕ್ಷಣ ಬಂಧಿಸಲಿದ್ದಾರೆ’ ಎಂದೂ ಹೇಳಿದ್ದ.
ನಿಜವಾಗಿಯೂ ಸಿಬಿಐ ಅಧಿಕಾರಿಯೇ ಮಾತನಾಡುತ್ತಿದ್ದಾರೆ ಎಂಬ ಆತಂಕದಿಂದ ಮೂರು ದಿನ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದ ವಿಜ್ಞಾನಿ, ವಂಚಕರು ನೀಡಿದ ಬ್ಯಾಂಕ್ ಖಾತೆಗೆ 8.80 ಲಕ್ಷ ರೂ. ವರ್ಗಾಯಿಸಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಅನುಮಾನದಲ್ಲಿ ಕುಟುಂಬಸ್ಥರ ನಡುವೆ ಚರ್ಚಿಸಿದಾಗ ಸೈಬರ್ ವಂಚಕರ ಕೃತ್ಯ ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
In a shocking case of cybercrime, a woman scientist from the Indian Institute of Science (IISc) was defrauded of ₹8.80 lakh after being trapped in a “digital arrest” by cyber fraudsters posing as Central Bureau of Investigation (CBI) officials.
15-04-26 07:05 pm
HK News Staffer
ಸಿಎಂ ಕಾರ್ಯದರ್ಶಿ ನಸೀರ್ ಅಹ್ಮದ್ ವಜಾ ಬೆನ್ನಲ್ಲೇ ಪರ...
15-04-26 03:15 pm
ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ ; ಸಿಎಂ ರಾಜ...
14-04-26 02:04 pm
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
15-04-26 11:40 pm
HK News Desk
ಬಾಲಕನ ಜೀವ ತೆಗೆದ ಕ್ರಿಕೆಟ್ ಆಟ ; ಚೆಂಡು ಹೆಕ್ಕಲು ಹ...
15-04-26 05:29 pm
ಚಿಕ್ಕೋಡಿಯಲ್ಲಿ ಮಾನಗೇಡಿ ಹತ್ಯೆ; ಪತಿಯನ್ನು ಬಿಟ್ಟು...
15-04-26 05:03 pm
ಕೌಟುಂಬಿಕ ಕಲಹ ; 14 ವರ್ಷದ ಮಗಳನ್ನು ಉಸಿರುಗಟ್ಟಿಸಿ...
14-04-26 11:16 pm
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am