ಬ್ರೇಕಿಂಗ್ ನ್ಯೂಸ್
20-08-20 12:07 pm Headline Karnataka News Network ಕ್ರೈಂ
ಉತ್ತರ ಪ್ರದೇಶ, ಆಗಸ್ಟ್ 20: ದೆಹಲಿ ಮೂಲದ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊರ್ವಳು ಉತ್ತರ ಪ್ರದೇಶದ ಆಗ್ರಾದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕಾಲೇಜಿನಿಂದ ಕೆಲವೇ ಕಿ.ಮೀ ಗಳ ದೂರದಲ್ಲಿ ಶವ ಪತ್ತೆಯಾಗಿದ್ದು, ಆಕೆಯ ಕಾಲೇಜಿನ ವೈದ್ಯರೊಬ್ಬರು ಕಿರುಕುಳ ಕೊಟ್ಟಿರುವುದೇ ಸಾವಿಗೆ ಕಾರಣವೆಂದು ಆಕೆಯ ಕುಟುಂಬ ಆರೋಪಿಸಿದೆ.
ಬುಧವಾರ ಬೆಳಿಗ್ಗೆ ವಿದ್ಯಾರ್ಥಿನಿಯ ಶವ ಪತ್ತೆಯಾಗುವ ಮೊದಲು ಕೆಲವೇ ಗಂಟೆಗಳ ಹಿಂದೆ ಆಕೆಯ ಕುಟುಂಬ ಕಾಣೆಯಾಗಿದ್ದಾಳೆ ಎಂದು ದೂರು ನೀಡಿತ್ತು. ವೈದ್ಯರ ಕಿರುಕುಳದಿಂದಲೇ ಆಕೆಯ ಸಾವು ಸಂಭವಿಸಿದೆ ಎಂಬ ಕುಟುಂಬದ ಆರೋಪದ ಹಿನ್ನೆಲೆಯಲ್ಲಿ ವೈದ್ಯನೊಬ್ಬನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ನಾತಕೋತ್ತರ ವೈದ್ಯ ಪದವಿ ಪಡೆಯಲು ದೆಹಲಿಯಿಂದ ಆಗ್ರಾಕ್ಕೆ ವಿದ್ಯಾರ್ಥಿನಿಯನ್ನು ಕಳಿಸಲಾಗಿತ್ತು. ಮಂಗಳವಾರ ಸಂಜೆಯಿಂದಲೇ ಕಾಣೆಯಾಗಿದ್ದಾಳೆ ಎಂದು ಆಕೆಯ ಕುಟುಂಬ ತಿಳಿಸಿದೆ.
ಬುಧವಾರ ಬೆಳಿಗ್ಗೆ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಆಕೆಯ ತಲೆ ಮತ್ತು ಕುತ್ತಿಗೆಗೆ ಪೆಟ್ಟುಗಳಾಗಿವೆ. ಆಕೆ ಸಾವಿಗೆ ಮುನ್ನ ಪ್ರತಿರೋಧಿಸಿರುವ ಲಕ್ಷಣಗಳಿವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದೇವೆ. ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಸುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೆಲವು ವಾರಗಳಲ್ಲಿ ಕೊಲೆ, ಅತ್ಯಾಚಾರ ಘಟನೆಗಳು ವಿಪರೀತವಾಗಿವೆ. ಅದರಲ್ಲಿಯೂ ಮಹಿಳೆಯರು, ಹೆಣ್ಣು ಮಕ್ಕಳ ಮೇಲಿನ ಹಿಂಸೆಗಳು ಮಿತಿ ಮೀರಿವೆ ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸಿವೆ.
ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ, ಬಿಎಸ್‌ಪಿಯ ಮಾಯಾವತಿ ಟೀಕಿಸಿದ್ದಾರೆ.
ಬುಲಂದ್‌ಶಹರ್, ಹಾಪುರ್, ಲಕ್ಷ್ಮಿಪುರ್ ಖೇರಿ ಮತ್ತು ಗೋರಕ್ ಪುರ್ ಈ ಎಲ್ಲಾ ಕಡೆ ಕೊಲೆ ಅತ್ಯಾಚಾರಗಳು ನಡೆದಿವೆ. ಇದು ಸರ್ಕಾರದ ನಿರ್ಲಕ್ಷ್ಯತನ ಮತ್ತು ವಿಫಲತೆಯನ್ನು ತೋರಿಸುತ್ತದೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.
ಪ್ರತಿನಿತ್ಯ ಮಹಿಳಾ ಕಿರುಕುಳ, ಕೊಲೆ ಅತ್ಯಾಚಾರಗಳು ಉತ್ತರ ಪ್ರದೇಶದಲ್ಲಿ ವರದಿ:
ನಿನ್ನೆ ತಾನೇ ವಯಸ್ಕ ಹುಡುಗಿಯೊಬ್ಬಳು ಯುಪಿಯ ಬದೋಯಿಯಿಂದ ಕಾಣೆಯಾಗಿದ್ದು, ಶವವಾಗಿ ಪತ್ತೆಯಾಗಿದ್ದಳು. ಶವದ ದೇಹ ಸುಟ್ಟಗಾಯಗಳಿಂದ ಕೂಡಿತ್ತು. ಕಳೆದ ವಾರದ ಲಕ್ಷ್ಮಿಪುರ ಖೇರಿಯ 13 ವರ್ಷದ ಬಾಲಕಿಯೊಬ್ಬಳನ್ನು ಅಮಾನವೀಯವಾಗಿ ಅತ್ಯಾಚಾರವೆಸಗಿ ಕೊಲ್ಲಲಾಗಿತ್ತು. ಆಕೆಯ ನಾಲಿಗೆ ಕತ್ತರಿಸಿ, ಕಣ್ಣು ಕೀಳಲಾಗಿತ್ತು ಎಂದು ಆಕೆಯ ತಂದೆ ತಿಳಿಸಿದ್ದರು. ಈ ತಿಂಗಳ ಆರಂಭದಲ್ಲಿ ಯುಪಿಯ ಹಾಪುರ್‌ನಲ್ಲಿ 6 ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರವೆಸಗಲಾಗಿತ್ತು. ಕಳೆದ ವಾರ ಆರೋಪಿಯನ್ನು ಬಂಧಿಸಲಾಗಿದೆ. ಆಗಸ್ಟ್ 10 ರಂದು ಬುಲಂದ್‌ಶಹರ್‌ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯೊರ್ವಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಳು. ಇಬ್ಬರು ಕಿಡಿಗೇಡಿಗಳು ಆಕೆಗೆ ಕಿರುಕುಳ ನೀಡಿದ್ದರು ಎಂದು ಆಕೆಯ ಕುಟುಂಬ ಆರೋಪಿಸಿತ್ತು.
ಒಟ್ಟಿನಲ್ಲಿ ಪ್ರತಿನಿತ್ಯ ಮಹಿಳಾ ಕಿರುಕುಳ, ಕೊಲೆ ಅತ್ಯಾಚಾರಗಳು ಉತ್ತರ ಪ್ರದೇಶದಲ್ಲಿ ವರದಿಯಾಗುತ್ತಿದ್ದರೂ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ ಮತ್ತು ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಮುಂದಾಗಿಲ್ಲ ಎಂಬುದು ಬಹಳಷ್ಟು ಜನರ ಅಭಿಪ್ರಾಯವಾಗಿದೆ.
16-04-25 06:42 pm
Bangalore Correspondent
CM Siddaramaiah, Lokayukta, Muda: ಸಿಎಂ ಸಿದ್ದರ...
15-04-25 08:44 pm
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
16-04-25 03:54 pm
HK News Desk
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
16-04-25 08:22 pm
Mangalore Correspondent
Asif Apatbandava, Rauf Bengre Honey Trap, Man...
16-04-25 02:02 pm
Panambur Bike Accident, Mangalore: ಪಣಂಬೂರಿನಲ್...
16-04-25 01:29 pm
NIA, Praveen Nettaru: ಪ್ರವೀಣ್ ನೆಟ್ಟಾರು ಕೊಲೆ ಪ...
15-04-25 09:57 pm
Drowning, Surathkal Beach, Mangalore, News: ಮ...
15-04-25 09:21 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm