ಬ್ರೇಕಿಂಗ್ ನ್ಯೂಸ್
20-07-21 12:09 pm Udupi Correspondent ಕ್ರೈಂ
ಉಡುಪಿ, ಜುಲೈ 20: ವಿಶಾಲಾ ಗಾಣಿಗ ಕೊಲೆ ಪ್ರಕರಣದಲ್ಲಿ ಪೊಲೀಸರು ಆಕೆಯ ಗಂಡನನ್ನೇ ಬಂಧಿಸಿದ್ದಾರೆ. ಪತ್ನಿಯ ಕೊಲೆ ಪ್ರಕರಣದ ಬಳಿಕ ಅಂತ್ಯಕ್ರಿಯೆ ಸಲುವಾಗಿ ಊರಿಗೆ ಬಂದಿದ್ದ ರಾಮಕೃಷ್ಣ ಗಾಣಿಗ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ವಿಚಾರದ ಸಂಚು ಹೊರಬಿದ್ದಿದೆ.
ಉಡುಪಿ ಎಸ್ಪಿ ವಿಷ್ಣುವರ್ಧನ್, ವಿಶಾಲಾ ಕೊಲೆ ಪ್ರಕರಣದಲ್ಲಿ ಗಂಡ ರಾಮಕೃಷ್ಣ ಅವರನ್ನು ಬಂಧಿಸಿರುವುದನ್ನು ದೃಢಪಡಿಸಿದ್ದಾರೆ. ಸುಳಿವುಗಳನ್ನು ಆಧರಿಸಿ ಸುಪಾರಿ ಕಿಲ್ಲರ್ ಗಳನ್ನು ವಶಕ್ಕೆ ಪಡೆದು ರಾಮಕೃಷ್ಣ ಗಾಣಿಗ ಹೆಸರು ಕೇಳಿಬಂದಿದೆ. ಯಾಕಾಗಿ ಕೊಲೆ ನಡೆಸಿದ್ದಾನೆ ಅನ್ನೋದ್ರ ಬಗ್ಗೆ ವಿವರ ನೀಡಲಿದ್ದೇವೆ ಎಂದು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

ದುಬೈನಲ್ಲಿ ಸೆಟ್ಲ್ ಆಗಿದ್ದ ರಾಮಕೃಷ್ಣ ಗಾಣಿಗ ಅಲ್ಲಿ ಬಿಜೂರು ಮೂಲದ ಎನ್ನಾರೈ ಉದ್ಯಮಿಯೊಬ್ಬರ ಪಿಎ ಆಗಿ ಕೆಲಸ ಮಾಡುತ್ತಿದ್ದ. ವಿಶಾಲಾ ಮದುವೆಯ ಬಳಿಕ ದುಬೈನಲ್ಲಿಯೇ ದಂಪತಿ ಸೆಟ್ಲ್ ಆಗಿದ್ದರು. ಇತ್ತೀಚೆಗೆ, ಜುಲೈ 12 ರಂದು ಕೊಲೆಯಾಗುವ ಹತ್ತು ದಿನಗಳ ಹಿಂದೆ ವಿಶಾಲಾ ತನ್ನ ಏಳು ವರ್ಷದ ಹೆಣ್ಣು ಮಗುವಿನ ಜೊತೆ ಊರಿಗೆ ಬಂದಿದ್ದಳು. ಅಂದು ಬ್ರಹ್ಮಾವರದ ಕುಮ್ರಗೋಡಿನ ಫ್ಲಾಟಿನಲ್ಲಿ ಒಬ್ಬಂಟಿಯಾಗಿದ್ದ ವೇಳೆ ವಿಶಾಲಾ ಅವರನ್ನು ಕೊಲೆ ಮಾಡಲಾಗಿತ್ತು.






ಫ್ಲಾಟಿನಲ್ಲಿ ಇಬ್ಬರು ಟೀ ಕುಡಿದು ಹೋಗಿದ್ದ ಬಗ್ಗೆ ಸಾಕ್ಷ್ಯ ಲಭಿಸಿತ್ತು. ಇದನ್ನು ಆಧರಿಸಿ ಪರಿಚಿತರೇ ಕೊಲೆ ಕೃತ್ಯ ನಡೆಸಿದ್ದರು ಎನ್ನುವ ಅನುಮಾನ ಬಂದಿತ್ತು. ಅದರಂತೆ, ಪೊಲೀಸರು ನಾಲ್ಕು ತಂಡಗಳಲ್ಲಾಗಿ ಕಾರ್ಯಾಚರಣೆ ಆರಂಭಿಸಿದ್ದರು. ವಿವಿಧ ಆಯಾಮಗಳಲ್ಲಿ ವಿಚಾರಣೆ ಬಳಿಕ ಕರ್ನಾಟಕದಿಂದ ಹೊರರಾಜ್ಯದ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಉತ್ತರ ಪ್ರದೇಶ ಮೂಲದ ಇಬ್ಬರು ಸುಪಾರಿ ಕಿಲ್ಲರ್ ಆಗಿದ್ದು ಅವರನ್ನು ಟ್ರೇಸ್ ಮಾಡಿದಾಗ ಕೊಲೆ ವಿಚಾರ ಬಯಲಾಗಿತ್ತು. ಅಲ್ಲದೆ, ಅವರಿಬ್ಬರು ರಾಮಕೃಷ್ಣ ಗಾಣಿಗ ಮೇಲೆ ಬೆರಳು ತೋರಿಸಿದ್ದರು. ಅದಕ್ಕೂ ಮುನ್ನ ರಾಮಕೃಷ್ಣ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದರು. ನಾಲ್ಕು ದಿನಗಳ ಹಿಂದೆ ಖಚಿತ ಸುಳಿವು ಆಧರಿಸಿ ಮತ್ತೆ ವಶಕ್ಕೆ ಪಡೆದು ಗಂಡ ರಾಮಕೃಷ್ಣನ ಬಾಯಿ ಬಿಡಿಸಿದ್ದಾರೆ. ಮಂಗಳವಾರ ಬಂಧನವನ್ನು ಖಾತ್ರಿ ಪಡಿಸಿದ್ದಾರೆ.
ಇಬ್ಬರು ಆಗಂತುಕರು ಉತ್ತರ ಪ್ರದೇಶ ಮೂಲದ ಸುಪಾರಿ ಕಿಲ್ಲರ್ ಆಗಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಇವರು ಬ್ರಹ್ಮಾವರದ ಫ್ಲಾಟಿಗೆ ಬಂದಿದ್ದು ಅವರನ್ನು ಗಂಡ ತನ್ನ ಗೆಳೆಯರೆಂದು ಪರಿಚಯ ಮಾಡಿಸಿದ್ದ. ಮೊನ್ನೆ ಕೊಲೆಯಾದ ದಿನ ಅವರೇ ಬಂದಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇವರಿಬ್ಬರ ಜೊತೆ ರಾಮಕೃಷ್ಣ ನಿಕಟ ಮೊಬೈಲ್ ಸಂಪರ್ಕ ಇರಿಸಿಕೊಂಡಿದ್ದು ಪತ್ತೆಯಾಗಿದೆ. ಸಾಂದರ್ಭಿಕ ಸಾಕ್ಷ್ಯ ಆಧರಿಸಿ, ಪೊಲೀಸರು ಇಬ್ಬರು ಕಿಲ್ಲರ್ ಮತ್ತು ಸಂಚು ನಡೆಸಿದ ಗಂಡನನ್ನು ಬಂಧಿಸಿದ್ದಾರೆ. ಯಾಕಾಗಿ ಕೊಲೆ ನಡೆದಿತ್ತು. ಪತ್ನಿಯ ಮೇಲೆ ಅಂಥಾ ವೈಮನಸ್ಸು ಏನಿತ್ತು ಅನ್ನೋದನ್ನು ಪೊಲೀಸರು ಪತ್ತೆ ಮಾಡಲಿದ್ದಾರೆ.
Video:
The Udupi Police have arrested NRI Husband Ramakrishna Ganiga, 42 for allegedly plotting to Murder of his wife Vishala Ganiga in her apartment in Brahmavara, Udupi. Vishala Ganiga (35), was strangulated with a wire on July 12. Vishala had returned on July 2 from Dubai along with her daughter. After coming to her hometown, she stayed at her flat in Kumragodu. Her husband Ramakrishna’s ancestral property was divided just a few days back.
02-01-26 06:09 pm
HK News Desk
Ballari Banner Fight, FIR, Death: ಬ್ಯಾನರ್ ವಿಚ...
02-01-26 04:13 pm
ಕೋಗಿಲು ಬಡಾವಣೆ ನಿರಾಶ್ರಿತರಿಗೆ ಮನೆ ಹಂಚಿಕೆ ; ವ್ಯಾ...
02-01-26 01:58 pm
ಎಲ್ಲರಂತೆ ನನಗೂ ಆಕಾಂಕ್ಷೆ ಇದೆ ; ಕುರ್ಚಿ ಫೈಟ್ ನಡು...
01-01-26 06:21 pm
ಜನವರಿ 15ರ ನಂತರ ಸಂಪುಟ ವಿಸ್ತರಣೆ ಆಗಲಿದೆ, ನನಗೂ ಮಂ...
01-01-26 05:18 pm
02-01-26 06:43 pm
HK News Desk
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಗೆ ಬೆಂಕಿ ಹ...
01-01-26 09:34 pm
ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೋಕವಾಗಿ ಮಾರ್ಪಟ್ಟ ಹೊಸ...
01-01-26 09:30 pm
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದು ಯುವಕನ ಹತ್ಯೆ ;...
30-12-25 06:48 pm
ಹಿಂದುಗಳ ಮನೆ ಸುಡುತ್ತಿದ್ದರೆ ಮಹಮ್ಮದ್ ಯೂನಸ್ ಕೊಳಲು...
30-12-25 03:32 pm
02-01-26 02:02 pm
Mangalore Correspondent
Dr Vinaya Hegde Death, NItte Mangalore: ನಿಟ್ಟ...
01-01-26 09:43 am
ಧರ್ಮಸ್ಥಳ ಪ್ರಕರಣದಲ್ಲಿ ಕ್ಷೇತ್ರದ ಪರ ಬೆಳ್ತಂಗಡಿ ಕೋ...
31-12-25 10:57 pm
ಕೋಗಿಲು ಬಡಾವಣೆಯ ಅಕ್ರಮ ವಲಸಿಗರು ಎಲ್ಲಿಯವರು? ಇಲ್ಲಿ...
31-12-25 09:16 pm
ಕೋಟೆಕಾರು ಪ.ಪಂ ಸಭೆ ; ಸರ್ಕಾರಿ ಜಮೀನು ಅತಿಕ್ರಮಣ ಪರ...
31-12-25 03:35 pm
02-01-26 12:58 pm
Mangalore Correspondent
ಮುಂಬೈ ಪೊಲೀಸ್ ಹೆಸರಲ್ಲಿ ಹೆದರಿಸಿ ಡಿಜಿಟಲ್ ಅರೆಸ್ಟ್...
02-01-26 12:32 pm
ಹೊಸ ವರ್ಷ ಸಂಭ್ರಮಾಚರಣೆ ; ಮಂಗಳೂರಿನಲ್ಲಿ ಒಂದು ಸಾವಿ...
01-01-26 08:25 pm
ಕಾರು ಬಾಡಿಗೆ ನೆಪದಲ್ಲಿ ಸುಳ್ಯದಿಂದ ಯುವಕನ ಕರೆದೊಯ್ದ...
31-12-25 07:05 pm
ಶಿರ್ವದಲ್ಲಿ ಸ್ಕೂಟರ್ ಕಳ್ಳತನ ; ಅಂತರ್ ಜಿಲ್ಲಾ ಕಳ್ಳ...
31-12-25 07:05 pm