ಸಿಸಿಬಿ ಒಳಗೇ ಖದೀಮ ! ಡ್ರಗ್ಸ್ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ ಎಸಿಪಿ ಸಸ್ಪೆಂಡ್ ! 

23-09-20 07:39 pm       Bangalore Correspondent   ಕ್ರೈಂ

ಸಿಸಿಬಿ ಪೊಲೀಸರು ಒಂದೆಡೆ ಡ್ರಗ್ಸ್ ಪ್ರಕರಣದ ಬುಡವನ್ನೇ ಜಾಲಾಡುತ್ತಿದ್ದರೆ, ಸಿಸಿಬಿಯಲ್ಲೇ ಇದ್ದ ಎಸಿಪಿ ದರ್ಜೆಯ ಅಧಿಕಾರಿಯೊಬ್ಬ ತನಿಖೆಯ ಮಾಹಿತಿಗಳನ್ನು ಆರೋಪಿಗಳಿಗೆ ಸೋರಿಕೆ ಮಾಡುತ್ತಿದ್ದರು.

ಬೆಂಗಳೂರು, ಸೆಪ್ಟಂಬರ್ 23: ಸಿಸಿಬಿ ಪೊಲೀಸರು ಒಂದೆಡೆ ಡ್ರಗ್ಸ್ ಪ್ರಕರಣದ ಬುಡವನ್ನೇ ಜಾಲಾಡುತ್ತಿದ್ದರೆ, ಸಿಸಿಬಿಯಲ್ಲೇ ಇದ್ದ ಎಸಿಪಿ ದರ್ಜೆಯ ಅಧಿಕಾರಿಯೊಬ್ಬ ತನಿಖೆಯ ಮಾಹಿತಿಗಳನ್ನು ಆರೋಪಿಗಳಿಗೆ ಸೋರಿಕೆ ಮಾಡುತ್ತಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ವೇಳೆ ಎಸಿಪಿಯ ಕೈವಾಡ ಕಂಡುಬಂದಿತ್ತು. ಇದನ್ನು ತಿಳಿದ ಬೆಂಗಳೂರು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ಸರಕಾರಕ್ಕೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದರು. ಇದೀಗ ಸಿಸಿಬಿಯ ಎಸಿಪಿ ಆಗಿದ್ದ ಮುದವಿ ಎಂಬವರನ್ನು ರಾಜ್ಯ ಸರಕಾರ ಅಮಾನತುಗೊಳಿಸಿ ಆದೇಶ ಮಾಡಿದೆ. 

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಕಿಂಗ್ ಪಿನ್ ಎನ್ನಲಾಗುತ್ತಿರುವ ದೆಹಲಿ ಮೂಲದ ವೀರೇನ್ ಖನ್ನಾ ಜೊತೆಗೆ ಎಸಿಪಿ ಮುದವಿ ಸಂಪರ್ಕ ಹೊಂದಿದ್ದಲ್ಲದೆ, ತನಿಖಾ ಮಾಹಿತಿಯನ್ನು ಆರೋಪಿಗಳಿಗೆ ಸೋರಿಕೆ ಮಾಡುತ್ತಿದ್ದರು. ಈ ವಿಚಾರ ಆರೋಪಿಗಳ ತನಿಖೆ ಸಂದರ್ಭದಲ್ಲಿ ಸಿಸಿಬಿ ಮುಖ್ಯಸ್ಥರಿಗೆ ತಿಳಿದುಬಂದಿತ್ತು. ಖಚಿತ ಮಾಹಿತಿ ಜೊತೆಗೆ ಸಂದೀಪ್ ಪಾಟೀಲ್, ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದರು. ಎಸಿಪಿ ಮುದವಿ, ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ತನಿಖಾ ತಂಡದಲ್ಲಿ ಇರಲಿಲ್ಲ. ಸಿಸಿಬಿ ಮಹಿಳಾ ಸುರಕ್ಷತಾ ವಿಭಾಗದಲ್ಲಿ ಎಸಿಪಿ ಆಗಿದ್ದರು. ಆದರೆ, ತಂಡದಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಮಲ್ಲಿಕಾರ್ಜುನ ಎಸಿಪಿಗೆ ಮಾಹಿತಿ ನೀಡುತ್ತಿದ್ದರು‌. ಇವರಿಬ್ಬರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಿಗೆ ತನಿಖೆಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ವಿಚಾರ ವಿಚಾರಣೆಯಲ್ಲಿ ತಿಳಿದುಬಂದಿತ್ತು‌. ಇದೀಗ ಹೆಡ್ ಕಾನ್ಸ್ ಟೇಬಲ್ ಮತ್ತು ಎಸಿಪಿ ಇಬ್ಬರನ್ನೂ ಸರಕಾರ ಸಸ್ಪೆಂಡ್ ಮಾಡಿದೆ. 

ವೀರೇನ್ ಖನ್ನಾ ಬಂಧನವಾದ ನಂತರವೂ ಎಸಿಪಿ ಆತನಿಗೆ ಸಹಕರಿಸುತ್ತಿದ್ದರು. ಕಸ್ಟಡಿಯಲ್ಲಿದ್ದ ಸಂದರ್ಭ ಖನ್ನಾಗೆ ಮೊಬೈಲ್ ನೀಡಿದ್ದ ಆರೋಪವೂ ಎಸಿಪಿ ಮೇಲಿದೆ. 

Join our WhatsApp group for latest news updates (2)