ವಿಟ್ಲ ; ರಕ್ತಚಂದನ ಸಾಗಿಸುತ್ತಿದ್ದ ವ್ಯಕ್ತಿಯ ಸೆರೆ 

26-09-20 09:30 pm       Mangaluru Correspondent   ಕ್ರೈಂ

ರಕ್ತ ಚಂದನ ಮರದ ತುಂಡನ್ನು ಅಕ್ರಮವಾಗಿ ಒಯ್ಯುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು, ಸೆಪ್ಟಂಬರ್ 26: ರಕ್ತ ಚಂದನ ಮರದ ತುಂಡನ್ನು ಅಕ್ರಮವಾಗಿ ಒಯ್ಯುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪುತ್ತೂರು ತಾಲೂಕಿನ ಸವಣೂರು ಗ್ರಾಮದ ನಿವಾಸಿ ಅಬ್ಬು ಚಾಪಳ್ಳ @ ಉಮ್ಮರ್ ಫಾರೂಕ್ ಎಂದು ಪೊಲೀಸರು ತಿಳಿಸಿದ್ದಾರೆ. 

ಉಮ್ಮರ್ ಫಾರೂಕ್, ಸಯ್ಯದ್ ಎಂಬಾತನಿಂದ 12.100 ಕಿಲೋ ಗ್ರಾಂ ತೂಕದ ರಕ್ತಚಂದನ ಪಡೆದು ಮಾರಾಟದ ಉದ್ದೇಶದಲ್ಲಿ ಬೇರೆಡೆ ಸಾಗಿಸುತ್ತಿದ್ದ. ವಿಟ್ಲ ಕಸಬಾ ಎಂಬಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಂಡು ತೆರಳುತ್ತಿದ್ದಾಗ ಪೊಲೀಸರು ವಿಚಾರಿಸಿದ್ದು ಅನುಮಾನಾಸ್ಪದ ಕಂಡುಬಂದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ. ರಕ್ತಚಂದನ ಮರದ ಮೌಲ್ಯ 24200 ಎಂದು ಅಂದಾಜು ಮಾಡಲಾಗಿದೆ.

Join our WhatsApp group for latest news updates (2)