ದೈತ್ಯ 'ಐಕ್ಯೂ ನಿಯೋ 7 ಪ್ರೊ 5G' ಫೋನ್‌ ಈಗ ಪ್ರಿ-ಆರ್ಡರ್‌ಗೆ ಲಭ್ಯ!..ಬೆಲೆ ಎಷ್ಟು?

05-07-23 06:42 pm       Source: Gizbot   ಡಿಜಿಟಲ್ ಟೆಕ್

ಐಕ್ಯೂ ಸಂಸ್ಥೆಯು ಇತ್ತೀಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ.

ಐಕ್ಯೂ ಸಂಸ್ಥೆಯು ಇತ್ತೀಗಷ್ಟೆ ಭಾರತದಲ್ಲಿ ಬಿಡುಗಡೆ ಮಾಡಿರುವ ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಇದೀಗ ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ ಪ್ರಿ-ಆರ್ಡರ್‌ಗೆ ಅವಕಾಶ ಇದ್ದು, ಖರೀದಿದಾರರು ಇ ಕಾಮರ್ಸ್‌ ತಾಣ ಅಮೆಜಾನ್ ಹಾಗೂ ಅಧಿಕೃತ ಐಕ್ಯೂ ವೆಬ್‌ಸೈಟ್‌ ಮೂಲಕ ಪ್ರಿ-ಆರ್ಡರ್ ಮಾಡಬಹುದಾಗಿದೆ.

ಹೌದು, ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ ಈಗ ಪ್ರಿ-ಆರ್ಡರ್‌ಗೆ ಲಭ್ಯ ಇದೆ. ಅಂದಹಾಗೆ ಈ ಫೋನ್‌ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 8GB + 128GB ಮತ್ತು 12GB + 256GB ಆಗಿವೆ. ಇನ್ನು ಈ ಫೋನಿನ ಆರಂಭಿಕ ವೇರಿಯಂಟ್‌ ಬೆಲೆಯು 34,999ರೂ. ಆಗಿದೆ. ಇದೇ ಜುಲೈ 15 ರಂದು ಅಮೆಜಾನ್‌ ಹಾಗೂ ಐಕ್ಯೂ ವೆಬ್‌ಸೈಟ್‌ ಮೂಲಕ ಮಾರಾಟ ಪ್ರಾರಂಭ ಮಾಡಲಿದೆ.

iQOO Neo 7 Pro with 120W fast charging launched in India

ಇನ್ನು ಈ ಫೋನ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್‌ ಪಡೆದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಇದರೊಂದಿಗೆ ಈ ಮೊಬೈಲ್‌ನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಕ್ಯೂ ನಿಯೋ 7 ಪ್ರೊ 5G ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ಹೇಗಿದೆ : ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ 6.78 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಇದ್ದು, 120Hz ರಿಫ್ರೆಶ್ ರೇಟ್‌ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಸಾಮರ್ಥ್ಯವನ್ನು ಒಳಗೊಂಡಿದೆ.

Trending news: iQOO Neo 7 Pro 5G launch: 5 special features of the phone,  which make it different - Hindustan News Hub

ಐಕ್ಯೂ ನಿಯೋ 7 ಪ್ರೊ 5G ಪ್ರೊಸೆಸರ್‌ ಪವರ್‌ ಯಾವುದು : ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಸಪೋರ್ಟ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

iQOO Neo 7 Pro launching in India today: time, how to watch live stream,  expected price, specs

ಐಕ್ಯೂ ನಿಯೋ 7 ಪ್ರೊ 5G ಕ್ಯಾಮೆರಾ ಸೆನ್ಸಾರ್‌ ಯಾವುದು : ಐಕ್ಯೂ ನಿಯೋ 7 ಪ್ರೊ 5G ಮೊಬೈಲ್‌ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್-ಲೆನ್ಸ್‌ ಅನ್ನು ಪಡೆದಿದೆ. ಹಾಗೆಯೇ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಇದರೊಂದಿಗೆ 16 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಪಡೆದಿದೆ.

ಐಕ್ಯೂ ನಿಯೋ 7 ಪ್ರೊ 5G ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಏನು : ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ 120W ಫ್ಲ್ಯಾಶ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ 5.2, GPS, GNSS, NavIC, ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ.

Iqoo neo 7 pro now available for pre order in India price and Specifications.