boAt ನಿಂದ ಅತ್ಯಾಕರ್ಷಕ ವಾಚ್‌ ಅನಾವರಣ: ಫೀಚರ್ಸ್ ಏನು?, ಬೆಲೆ ಎಷ್ಟು?

07-07-23 08:08 pm       Source: Gizbot   ಡಿಜಿಟಲ್ ಟೆಕ್

ಸ್ಮಾರ್ಟ್‌ವಾಚ್‌ಗಳಲ್ಲಿ ಬೋಟ್‌ ಕಂಪೆನಿಯ ವಾಚ್‌ಗಳಿಗೆ ಇನ್ನಿಲ್ಲದ ಬೇಡಿಕೆ. ಈ ನಡುವೆ ಬೋಟ್‌ ಸಹ ವಿವಿಧ ಸುಧಾರಿತ ಫೀಚರ್ಸ್‌ ಇರುವ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಇದೀಗ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಲಾಗಿದೆ.

ಸ್ಮಾರ್ಟ್‌ವಾಚ್‌ಗಳಲ್ಲಿ ಬೋಟ್‌ ಕಂಪೆನಿಯ ವಾಚ್‌ಗಳಿಗೆ ಇನ್ನಿಲ್ಲದ ಬೇಡಿಕೆ. ಈ ನಡುವೆ ಬೋಟ್‌ ಸಹ ವಿವಿಧ ಸುಧಾರಿತ ಫೀಚರ್ಸ್‌ ಇರುವ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದ್ದು, ಇದೀಗ ಮತ್ತೊಂದು ಆಕರ್ಷಕ ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಲಾಗಿದೆ. ಈ ವಾಚ್‌ ಈ ಹಿಂದೆ ಲಾಂಚ್‌ ಮಾಡಲಾದ ವಾಚ್‌ಗಿಂತ ವಿಶೇ‍ಷ ಪಡೆದಿದೆ.

ಹೌದು, ಬೋಟ್ ಸಂಸ್ಥೆಯು ಬೋಟ್ ವೇವ್ ಫ್ಯೂರಿ (boAt Wave Fury) ಎಂಬ ವಾಚ್ ಅನ್ನು ಅನಾವರಣ ಮಾಡಿದ್ದು, ಈ ವಾಚ್‌ 550 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆಯೊಂದಿಗೆ ವಾಚ್ ನಾಲ್ಕು ಸಿಲಿಕೋನ್ ಪಟ್ಟಿಗಳು ಮತ್ತು ಒಂದು ಲೋಹೀಯ ಪಟ್ಟಿಗಳಲ್ಲಿ ಕಂಡುಬಂದಿದೆ. ಜೊತೆಗೆ ಪೂರ್ಣ ಚಾರ್ಜಿಂಗ್‌ನಲ್ಲಿ ಒಂದು ತಿಂಗಳ ಸ್ಟ್ಯಾಂಡ್‌ ಬೈ ಹೊಂದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿವರ ತಿಳಿಯೋಣ ಬನ್ನಿ.

boAt Wave Fury smartwatch launched in India: price, features, availability

ಬೋಟ್ ವೇವ್ ಫ್ಯೂರಿ ಡಿಸ್‌ಪ್ಲೇ ವಿವರ : ಈ ಹೊಸ ಸ್ಮಾರ್ಟ್‌ವಾಚ್‌ 1.83 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240*284 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ನೊಂದಿಗೆ ಚದರ ಡಯಲ್ ಶೈಲಿ ಪಡೆದಿದೆ. ಇನ್ನು ಆಕರ್ಷಕ ಕ್ರೌನ್‌ ಬಟನ್‌ ಆಯ್ಕೆ ಹೊಂದಿದ್ದು, 550 ನಿಟ್ಸ್‌ನ ಗರಿಷ್ಟ ಬ್ರೈಟ್‌ನೆಸ್‌ ಆಯ್ಕೆ ಇದರಲ್ಲಿ ವಿಶೇಷ ಎಣಿದಿದೆ. ಈ ಮೂಲಕ ಬಳಕೆದಾರರನ್ನು ಸೆಳೆಯವ ನೋಟ ಪಡೆದಿದೆ.

ಬೋಟ್ ವೇವ್ ಫ್ಯೂರಿ ಫೀಚರ್ಸ್‌: ಬ್ಲೂಟೂತ್ ಕರೆ ಸೌಲಭ್ಯ ಹೊಂದಿರುವ ಈ ವಾಚ್‌ ಉತ್ತಮ ಗುಣಮಟ್ಟದ ಇನ್‌ಬಿಲ್ಟ್‌ ಮೈಕ್ರೊಫೋನ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಡಯಲ್ ಪ್ಯಾಡ್ ಆಯ್ಕೆ ಹಾಗೂ 10 ಸಂಪರ್ಕಗಳನ್ನು ಸೇವ್‌ ಮಾಡಿಕೊಳ್ಳುವ ಸಾಮರ್ಥ್ಯ ಪಡೆದಿದೆ ಹಾಗೂ ಈ ಬೋಟ್ ವೇವ್ ಫ್ಯೂರಿ 50 ಕ್ಕೂ ಹೆಚ್ಚು ಸ್ಪೋರ್ಟ್‌ ಮೋಡ್‌ ಹೊಂದಿದ್ದು, ಹೃದಯ ಬಡಿತ ಟ್ರ್ಯಾಕಿಂಗ್, ರಕ್ತದ ಆಮ್ಲಜನಕ (SpO2), ನಿದ್ರೆ ಸೇರಿದಂತೆ ಇನ್ನಿತರೆ ಪ್ರಮುಖ ಆರೋಗ್ಯ ಸಂಬಂಧಿ ವಿಷಯಗಳ ಮೇಲೆ ಕಣ್ಣಿಡಲಿದೆ.

boAt Wave Fury with Bluetooth Calling launched at an introductory price of  Rs. 1299

ಇದರೊಂದಿಗೆ IP67 ರೇಟ್ ಹೊಂದಿದ್ದು, ಧೂಳು ಮತ್ತು ನೀರು ನಿರೋಧಕವಾಗಿದೆ. ಈ ಮೂಲಕ ನೀವು ಎಲ್ಲಿ ಬೇಕಾದರೂ ಈ ವಾಚ್‌ ಅನ್ನು ಬಳಕೆ ಮಾಡಬಹುದು. ಹಾಗೆಯೇ ಕ್ವಿಕ್ ಡಯಲ್ ಪ್ಯಾಡ್, ಕ್ಯಾಮೆರಾ ಕಂಟ್ರೋಲ್, ಮ್ಯೂಸಿಕ್ ಕಂಟ್ರೋಲ್, ವೆದರ್ ಅಪ್‌ಡೇಟ್ ಸೇರಿದಂತೆ ವಿವಿಧ ಫೀಚರ್‌ಗಳು ಈ ವಾಚ್‌ನಲ್ಲಿದ್ದು ಒಂದು ಫೋನ್‌ನಲ್ಲಿ ಇರುವ ಬಹುತೇಕ ಅಗತ್ಯ ಫೀಚರ್ಸ್ ಈ ವಾಚ್‌ನಲ್ಲಿವೆ ಎಂದರೆ ತಪ್ಪಾಗಲಾರದು.

ಬೋಟ್ ವೇವ್ ಫ್ಯೂರಿ ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ತಿಳಿಯುವುದಾದರೆ ಈ ವಾಚ್‌ 30 ದಿನಗಳ ಸ್ಟ್ಯಾಂಡ್‌ಬೈ ಬ್ಯಾಟರಿ ಬ್ಯಾಕಪ್ ಹೊಂದಿದೆ. ಅದರಂತೆ 5 ರಿಂದ 7 ದಿನಗಳವರೆಗೆ ಸಾಮಾನ್ಯ ಬ್ಯಾಟರಿ ಬ್ಯಾಕಪ್ ಈ ವಾಚ್‌ನಲ್ಲಿ ಲಭ್ಯ ಆಗಲಿದೆ. ಈ ಮೂಲಕ ವಾಚ್‌ ಅನ್ನು ಪದೇ ಪದೇ ಚಾರ್ಜಿಂಗ್‌ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗಿದ್ರೆ, ಬನ್ನಿ ಈ ವಾಚ್‌ನ ಆಫರ್‌ ಬೆಲೆ ಹಾಗೂ ಎಲ್ಲಿ ಲಭ್ಯ ಆಗಲಿದೆ ಎಂಬುದನ್ನು ತಿಳಿಯೋಣ.

Price to buy! Rs.1,299 is enough! 30 day battery backup! Metal Body! Which  model? | Boat Wave Fury Specifications Price

ಬೋಟ್ ವೇವ್ ಫ್ಯೂರಿ ಬೆಲೆ ಹಾಗೂ ಲಭ್ಯತೆ: ಈ ವಾಚ್‌ಗೆ 1,299 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಇದನ್ನು ಅಧಿಕೃತ ಇ-ಸ್ಟೋರ್ ಮೂಲಕ ಖರೀದಿ ಮಾಡಬಹುದು. ಜೊತೆಗೆ ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯವಿದೆ. ಬೋಟ್ ವೇವ್ ಫ್ಯೂರಿಯನ್ನು ನಾಲ್ಕು ಸಿಲಿಕೋನ್ ಸ್ಟ್ರಾಪ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಟೀಲ್ ಗ್ರೀನ್, ಚೆರ್ರಿ ಬ್ಲಾಸಮ್, ಆಕ್ಟಿವ್ ಬ್ಲ್ಯಾಕ್ ಮತ್ತು ಸಿಯಾನ್ ಬ್ಲೂನಲ್ಲಿ ಕಾಣಿಸಿಕೊಂಡಿದೆ.

Boat Wave Fury Smartwatch with ip67 Rating launched Details.