ಭಾರೀ ಡಿಸ್ಕೌಂಟ್‌ನಲ್ಲಿ ಗೂಗಲ್‌ ಪಿಕ್ಸಲ್‌ ಮೊಬೈಲ್‌ ಖರೀದಿಸಬೇಕೆ?..ಇಲ್ಲಿ ಗಮನಿಸಿ!

12-07-23 06:48 pm       Source: Gizbot Kannada   ಡಿಜಿಟಲ್ ಟೆಕ್

ಟೆಕ್‌ ವಲಯದಲ್ಲಿ ಗೂಗಲ್‌ ಕಂಪನಿಯು ಪಿಕ್ಸಲ್‌ ಫೋನ್‌ ಶ್ರೇಣಿಗಳ ಮೂಲಕ ಗುರುತಿಸಿಕೊಂಡಿದೆ. ಪಿಕ್ಸಲ್‌ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಪ್‌ ಮಾದರಿಯ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿವೆ.

ಟೆಕ್‌ ವಲಯದಲ್ಲಿ ಗೂಗಲ್‌ ಕಂಪನಿಯು ಪಿಕ್ಸಲ್‌ ಫೋನ್‌ ಶ್ರೇಣಿಗಳ ಮೂಲಕ ಗುರುತಿಸಿಕೊಂಡಿದೆ. ಪಿಕ್ಸಲ್‌ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಪ್‌ ಮಾದರಿಯ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿವೆ. ಅವುಗಳಲ್ಲಿ ಗೂಗಲ್‌ ಪಿಕ್ಸಲ್‌ 6 ಪ್ರೊ 5G ಫೋನ್‌ ಇದೀಗ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ನಲ್ಲಿ ಸಖತ್‌ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು ಖುಷಿ ಪಡುವಂತೆ ಮಾಡಿದೆ.

ಹೌದು, ಅಮೆಜಾನ್‌ ತಾಣದಲ್ಲಿ ಗೂಗಲ್‌ ಪಿಕ್ಸಲ್‌ 6 ಪ್ರೊ 5G ಮೊಬೈಲ್‌ 6% ರಷ್ಟು ಡಿಸ್ಕೌಂಟ್‌ ಅನ್ನು ಪಡೆದಿದೆ. 12GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯ ಗೂಗಲ್‌ ಪಿಕ್ಸಲ್‌ 6 ಪ್ರೊ 5G ಬೆಲೆಯು 52,999ರೂ. ಆಗಿದ್ದು, ರಿಯಾಯಿತಿಯಲ್ಲಿ 49,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಖರೀದಿದಾರರಿಗೆ ಆಯ್ದ ಬ್ಯಾಂಕ್‌ ಆಫರ್‌ ಕೊಡುಗೆಗಳು ಸಹ ಲಭ್ಯ.

Pixel 7 series launched: Top specs, features, India price, and everything  you need to know

ಅಂದಹಾಗೆ ಗೂಗಲ್‌ ಪಿಕ್ಸಲ್‌ 6 ಪ್ರೊ 5G ಸ್ಮಾರ್ಟ್‌ಫೋನ್‌ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ ಬಲದಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್‌ 13 ಓಎಸ್‌ ಬೆಂಬಲ ಒಳಗೊಂಡಿದೆ. ಇದರ ಜೊತೆಗೆ 48ಎಂಪಿ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಇದ್ದು, 5003mAh ಸಾಮರ್ಥ್ಯದ ಬ್ಯಾಟರಿ ಪಡೆದುಕೊಂಡಿದೆ. ಇನ್ನುಳಿದಂತೆ ಗೂಗಲ್‌ ಪಿಕ್ಸಲ್‌ 6 ಪ್ರೊ 5G ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ. ಗೂಗಲ್‌ ಪಿಕ್ಸಲ್‌ 6 ಪ್ರೊ 5G : ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಗೂಗಲ್‌ ಪಿಕ್ಸೆಲ್‌ 6 ಪ್ರೊ ಮೊಬೈಲ್‌ 1,440 x 3,120 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಎಲ್‌ಟಿಪಿಒ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 10Hz ನಿಂದ 120Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್‌ ಅನ್ನು ಪಡೆದುಕೊಂಡಿದೆ. ಇನ್‌ ಡಿಸ್‌ಪ್ಲೇ ವೆನಿಲ್ಲಾ ಮಾದರಿ ಅನ್ನು ಪಡೆದಿದೆ. ಅಲ್ಲದೇ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ ಸಹ ಪಡೆದಿದೆ.

Google Pixel 6a India Launch Tipped for July 21, Price Leaked | Technology  News

ಗೂಗಲ್‌ ಪಿಕ್ಸಲ್‌ 6 ಪ್ರೊ 5G : ಪ್ರೊಸೆಸರ್‌ ಪವರ್ ಗೂಗಲ್‌ ಪಿಕ್ಸೆಲ್‌ 6 ಪ್ರೊ ಮೊಬೈಲ್‌ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಟೆನ್ಸರ್ 20-ಕೋರ್ ಜಿಪಿಯು ಹೊಂದಿದೆ. ಉತ್ತಮ ಕಾರ್ಯ ಕ್ಷಮತೆ ಮತ್ತು ದಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಗೂಗಲ್ ಅಭಿವೃದ್ಧಿ ಪಡಿಸಿದ ಟೆನ್ಸರ್ ಚಿಪ್ CPU ಕಾರ್ಯಕ್ಷಮತೆಯನ್ನು 80X ಹೆಚ್ಚಿಸುತ್ತದೆ. ಹಾಗೆಯೇ 12 GB RAM ಮತ್ತು 512 GB ಡೀಫಾಲ್ಟ್ ಸ್ಟೋರೇಜ್ ಅನ್ನು ಹೊಂದಿದೆ.

ಗೂಗಲ್‌ ಪಿಕ್ಸಲ್‌ 6 ಪ್ರೊ 5G : ಕ್ಯಾಮೆರಾ ವಿನ್ಯಾಸ ಗೂಗಲ್‌ ಪಿಕ್ಸೆಲ್‌ 6 ಪ್ರೊ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದು 150% ಹೆಚ್ಚು ಬೆಳಕನ್ನು ಸೆರೆಹಿಡಿಯುತ್ತದೆ. ಇನ್ನು ಎರಡನೇ ಕ್ಯಾಮೆರಾ 48ಎಂಪಿ ಟೆಲಿಫೋಟೋ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 12ಎಂಪಿ ಅಲ್ಟ್ರಾ-ವೈಡ್ ಲೆನ್ಸ್‌ ಅನ್ನು ಪಡೆದಿದೆ. ಇನ್ನು ಗೂಗಲ್‌ ಪಿಕ್ಸೆಲ್ 6 ಪ್ರೊ 4X ಆಪ್ಟಿಕಲ್ ಜೂಮ್ ಮತ್ತು 20x ಜೂಮ್ ವರೆಗೆ ಪಿಕ್ಸೆಲ್‌ನ ಸೂಪರ್ ರೆಸ್ ಜೂಮ್‌ನ ಅಪ್‌ಡೇಟ್‌ ಆವೃತ್ತಿಯನ್ನು ಹೊಂದಿದೆ.

ಗೂಗಲ್‌ ಪಿಕ್ಸಲ್‌ 6 ಪ್ರೊ 5G : ಬ್ಯಾಟರಿ ಮತ್ತು ಇತರೆ ಗೂಗಲ್‌ ಪಿಕ್ಸೆಲ್ 6 ಪ್ರೊ ಸ್ಮಾರ್ಟ್‌ಫೋನ್‌ 5,003mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 30W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 23W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಸಹ ಪಡೆದಿದೆ. ಇನ್ನು ಗೂಗಲ್‌ ಪಿಕ್ಸೆಲ್‌ 6 ಪ್ರೊ ಸ್ಮಾರ್ಟ್‌ಫೋನ್‌ ಇತ್ತೀಚಿನ ಗೂಗಲ್ ಫೋನ್‌ಗಳ ಲಾಕ್‌ಸ್ಕ್ರೀನ್‌ನಿಂದ ನೇರವಾಗಿ ಸ್ನ್ಯಾಪ್‌ಚಾಟ್ ಕ್ಯಾಮೆರಾವನ್ನು ಬಳಕೆದಾರರಿಗೆ ಆಕ್ಸಸ್‌ಗೆ 'ಕ್ವಿಕ್ ಟ್ಯಾಪ್ ಟು ಸ್ನ್ಯಾಪ್' ಎಂಬ ಫೀಚರ್ಸ್‌ ಅನ್ನು ನೀಡಲಾಗಿದೆ. ಇದು ಲಾಕ್‌ಸ್ಕ್ರೀನ್‌ನಿಂದ ಸ್ನ್ಯಾಪ್‌ಚಾಟ್ ಕ್ಯಾಮೆರಾವನ್ನು ತೆರೆಯಲು ಬಳಕೆದಾರರಿಗೆ ಅವಕಾಶ ಒದಗಿಸಲಿದೆ.

you can buy google pixel 6 pro at huge discount price details.