ಬ್ರೇಕಿಂಗ್ ನ್ಯೂಸ್
21-08-23 01:34 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 21: ಭಾರತದ ಚಂದ್ರಯಾನ ಬೆನ್ನಲ್ಲೇ ಗಗನ ನೌಕೆ ಹಾರಿಸಿದ್ದ ರಷ್ಯಾ ತನ್ನ ಪ್ರಯತ್ನದಲ್ಲಿ ಮುಗ್ಗರಿಸಿದೆ. ಅದರ ಬಾಹ್ಯಾಕಾಶ ನೌಕೆ ಲೂನಾ 25 ಚಂದ್ರನ ಅಂಗಳ ಇಳಿಯುವ ಮೊದಲೇ ಪತನಗೊಂಡು ಸ್ಫೋಟವಾಗಿದೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾದ ಬ್ಯಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಹೇಳಿದೆ.
ಭಾರತದ ಚಂದ್ರಯಾನ-3ಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ರಷ್ಯಾ ಲೂನಾ 25 ಮಿಷನ್ ರೂಪಿಸಿತ್ತು. ಭಾರತದ ನೌಕೆ ಉಡಾವಣೆಯಾದ ತಿಂಗಳ ಬಳಿಕ ಆಗಸ್ಟ್ 11 ರಂದು ರಷ್ಯಾ ಈ ರಾಕೆಟ್ ಉಡಾವಣೆ ಮಾಡಿತ್ತು. ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಭಾರತಕ್ಕೂ ಮೊದಲೇ ಚಂದ್ರನ ಕಕ್ಷೆ ತಲುಪಿದ್ದಲ್ಲದೆ ದಕ್ಷಿಣ ಧ್ರುವದಲ್ಲಿ ತರಾತುರಿಯಲ್ಲಿ ಉಪಗ್ರಹ ಇಳಿಸಲು ಪ್ಲಾನ್ ಮಾಡಿತ್ತು. ಆದರೆ ಈ ಪ್ರಯತ್ನದಲ್ಲಿ ರಷ್ಯಾ ಸಫಲವಾಗಿಲ್ಲ.
ಆಗಸ್ಟ್ 21 ರಂದು ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ರೋಸ್ಕೋಸ್ಮಾಸ್ ಉದ್ದೇಶಿಸಿತ್ತು. ಆದರೆ ನೌಕೆಯು ತಪ್ಪಾದ ಕಕ್ಷೆಗೆ ಜಾರಿ ಸಂಪರ್ಕ ಕಳೆದುಕೊಂಡಿದ್ದರಿಂದ ಚಂದ್ರನ ಮೇಲ್ಮೈಗೆ ಡಿಕ್ಕಿ ಹೊಡೆದಿದೆ. 1976ರ ಬಳಿಕ ರಷ್ಯಾ ಸುಮಾರು 47 ವರ್ಷಗಳ ಬಳಿಕ ಈ ಬಾರಿ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿಕೊಟ್ಟಿತ್ತು. ಒಂದು ವೇಳೆ ರಷ್ಯಾದ ಈ ಮಿಷನ್ ಯಶಸ್ವಿಯಾಗುತ್ತಿದ್ದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಿದ ಮೊದಲ ರಾಷ್ಟ್ರ ಎಂಬ ಖ್ಯಾತಿಗೆ ಭಾಜನವಾಗುತ್ತಿತ್ತು.
ಇತ್ತ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ 3 ನೌಕೆಯು ಚಂದ್ರನ ಸಮೀಪಕ್ಕೆ ತಲುಪಿದೆ. ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರ ಬುಧವಾರ ಚಂದ್ರನ ಮೇಲೆ ಇಳಿಯಲು ತಯಾರಿ ನಡೆಸುತ್ತಿದ್ದರೆ, ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜುಲೈ 14 ರಂದು ಭಾರತೀಯ ಬಾಹ್ಯಕಾಶ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಿತ್ತು. ಆಗಸ್ಟ್ 5 ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಅಲ್ಲಿಂದ ನಿಧಾನ ಗತಿಯಲ್ಲಿ ಚಂದ್ರನ ಹತ್ತಿರದ ಪಥದಲ್ಲಿ ತಿರುಗತೊಡಗಿತ್ತು. ಆಗಸ್ಟ್ 21ರ ವೇಳೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿನ ಫೋಟೊವನ್ನು ಇಸ್ರೋಗೆ ಕಳಿಸಿಕೊಟ್ಟಿದ್ದು ಚಂದ್ರನ ಮೇಲ್ಮೈ ತಲುಪಿದ್ದನ್ನು ಖಾತ್ರಿ ಪಡಿಸಿದೆ.
Russia's first lunar mission in over five decades, Luna-25, crashed into the Moon on Sunday, leaving India's Chandrayaan-3 mission's lander module as the only spacecraft in the race to touch down on the lunar surface. "The apparatus moved into an unpredictable orbit and ceased to exist as a result of a collision with the surface of the moon," stated Russia's space agency in a statement.
12-02-25 12:55 pm
HK News Desk
ಬೆಂಗಳೂರಿನಲ್ಲಿ ಮೂರು ದಿನ ಜಾಗತಿಕ ಹೂಡಿಕೆದಾರರ ಸಮಾವ...
11-02-25 11:12 pm
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
12-02-25 10:58 pm
Mangalore Correspondent
MP Brijesh Chowta, ESI Hospital: ಮಂಗಳೂರು ಇಎಸ್...
12-02-25 09:18 pm
Puttur Police Women PSI News, Traffic: ಪುತ್ತೂ...
12-02-25 06:05 pm
Ullal News, Dr Kalladka Prabhakar Bhat: ಸಾಕು...
11-02-25 07:44 pm
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
12-02-25 10:28 pm
Mangalore Correspondent
Honor killing Bangalore, Daughter killed, Cri...
12-02-25 06:23 pm
Bhagappa Harijan deadly Murder, Crime report:...
12-02-25 12:27 pm
ಮ್ಯಾಟ್ರಿಮನಿ ಸೈಟ್ ನಲ್ಲಿ ಗಾಳ ; ಸರ್ಕಾರಿ ನೌಕರನೆಂದ...
11-02-25 06:41 pm
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm