ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ಯಶಸ್ವಿ ಉಡಾವಣೆ ; 15 ಲಕ್ಷ ಕಿಮೀ ದೂರದ ಗಮ್ಯ ಸೇರಲು ಬೇಕು 125 ದಿನ ! 

02-09-23 02:36 pm       Bangalore Correspondent   ಕರ್ನಾಟಕ

ಆದಿತ್ಯ-ಎಲ್ 1 ಸುಮಾರು 15 ಲಕ್ಷ ಕಿಮೀ ಉದ್ದದ ಗಮ್ಯ ಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳಲಿದೆ ಎಂದವರು ತಿಳಿಸಿದ್ದಾರೆ.

ಬೆಂಗಳೂರು, ಸೆ.2: ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ಯಶಸ್ವಿಯಾಗಿ ಉಡಾವಣೆಯಾಗಿದೆ. ಇಂದು ಪೂರ್ವಾಹ್ನ 11.50 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನ ನೌಕೆ ನಭಕ್ಕೆ ಉಡಾವಣೆ ಆಗಿದ್ದು ಇದರ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಸ್ ಸೋಮನಾಥ್, ಉಡಾವಣೆ ಯಶಸ್ವಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. 
  
ಆದಿತ್ಯ-ಎಲ್ 1 ಸುಮಾರು 15 ಲಕ್ಷ ಕಿಮೀ ಉದ್ದದ ಗಮ್ಯ ಸ್ಥಾನವನ್ನು ತಲುಪಲು 125 ದಿನಗಳನ್ನು ತೆಗೆದುಕೊಳ್ಳಲಿದೆ ಎಂದವರು ತಿಳಿಸಿದ್ದಾರೆ. ಉಪಗ್ರಹ ಉಡಾವಣೆಗೂ ಮೊದಲು ವಿಜ್ಞಾನಿಗಳು ತಿರುಪತಿ ಜಿಲ್ಲೆಯ ಚೆಂಗಾಲಮ್ಮ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Aditya-L1 is an important launch and will take 125 days to reach": ISRO  chief

ಆದಿತ್ಯ-ಎಲ್ 1 ಯಶಸ್ವಿ ಉಡಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮನಾಥ್, ಪಿಎಸ್‌ಎಲ್‌ವಿ ರಾಕೆಟ್‌ ಸಹಾಯದಿಂದ ಆದಿತ್ಯ ಎಲ್ 1 ತನ್ನ ಗಮ್ಯಸ್ಥಾನಕ್ಕೆ ಪಯಣಿಸಲಿದೆ. ಮಿಷನ್ ಉಡಾವಣೆ ಮಾಡಲು ಪಿಎಸ್‌ಎಲ್ ವಿ ರಾಕೆಟ್‌ನ ಎಕ್ಸ್‌ಎಲ್ ಆವೃತ್ತಿಯನ್ನು ಬಸಲಾಗಿದೆ ಎಂದು ಹೇಳಿದರು.

ಭೂಮಿಯಿಂದ ಸರಿಸುಮಾರು 15 ಲಕ್ಷ ಕಿ.ಮೀ ದೂರದಲ್ಲಿರುವ ಲ್ಯಾಂಗ್ರೇಜಿಯನ್ ಪಾಯಿಂಟ್-1ರಲ್ಲಿ ಆದಿತ್ಯ ಬಾಹ್ಯಾಕಾಶ ನೌಕೆಯನ್ನು ಇರಿಸಲಾಗುತ್ತದೆ. ಇಲ್ಲಿಂದ ನಿರಂತರವಾಗಿ ಸೂರ್ಯನ ಮೇಲೆ ಕಣ್ಣಿಟ್ಟು ಅಧ್ಯಯನ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ. 

ಆದಿತ್ಯ-L1 ಭಾರತ ಮೊದಲ ಬಾರಿಗೆ ಸೂರ್ಯನ ಅಧ್ಯಯನಕ್ಕಾಗಿ ಕಳಿಸಿಕೊಟ್ಟ ಉಪಗ್ರಹವಾಗಿದೆ. ಸೂರ್ಯನ ಕುರಿತು ಅಧ್ಯಯನಕ್ಕಾಗಿ ಇದರಲ್ಲಿ ಏಳು ವಿಭಿನ್ನ ಪೇಲೋಡ್‌ಗಳನ್ನು ಒಯ್ಯಲಾಗಿದೆ. ಅದರಲ್ಲಿ ನಾಲ್ಕು ಸೂರ್ಯನ ಬೆಳಕನ್ನು ವೀಕ್ಷಿಸುತ್ತದೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯುತ್ತದೆ. ಅದರ ಮಾಪನವನ್ನು ಇಸ್ರೋ ಸಂಸ್ಥೆಗೆ ಕಳಿಸಿಕೊಡಲಿದೆ.‌

ISRO's trusted PSLV will carry the Aditya L1 mission on a 125-day voyage to the Sun. The Aditya L1 spacecraft will stay in Earth's orbit for sixteen days. After four months of journey, the satellite will be placed on the L1 point in the halo orbit around the Sun.