MLA Pradeep Eshwar, Eshwarappa, DK Shivakumar: ಡಿಕೆಶಿಗೆ ಸೆಟ್ಲುಮೆಂಟ್ ಮಾಡಿ ಮುಗಿಸ್ತೀವಿ ಎಂದ ಈಶ್ವರಪ್ಪ ; ಬಾಯಿ ಮುಚ್ಚಿಕೊಂಡು ತೆಪ್ಪಗೆ ಇರಬೇಕು, ನಮ್ ಸಾಹೇಬರನ್ನ ಟಚ್ ಕೂಡ ಮಾಡಕ್ಕಾಗಲ್ಲ ಎಂದ ಶಾಸಕ ಈಶ್ವರ್

12-02-24 10:23 pm       Bangalore Correspondent   ಕರ್ನಾಟಕ

ಡಿಕೆ ಶಿವಕುಮಾರ್​​ಗೆ ಸೆಟ್ಲುಮೆಂಟ್ ಮಾಡಿ ಮುಗಿಸ್ತೇವೆ ಅಂತ ಈಶ್ವರಪ್ಪ ಕೌಂಟರ್ ಕೊಟ್ಟ ವಿಚಾರ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ.

ಬೆಂಗಳೂರು, ಫೆ 12: ಡಿಕೆ ಶಿವಕುಮಾರ್​​ಗೆ ಸೆಟ್ಲುಮೆಂಟ್ ಮಾಡಿ ಮುಗಿಸ್ತೇವೆ ಅಂತ ಈಶ್ವರಪ್ಪ ಕೌಂಟರ್ ಕೊಟ್ಟ ವಿಚಾರ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಿಜೆಪಿ ಅವರಿಗೆ ಮಾನ ಮರ್ಯಾದೆ ಇಲ್ಲ. ಕಳೆದ ಹತ್ತು ವರ್ಷದಲ್ಲಿ 5 ಸಾವಿರದ 233 IT, ED ರೇಡ್ ಆಗಿವೆ. ಕೇವಲ 22 ಮಾತ್ರ ಪ್ರೂವ್ ಆಗಿವೆ. 3 ಸಾವಿರ ಜನ ಕಾಂಗ್ರೆಸ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಈಶ್ವರಪ್ಪ ಅವರ ಅಧಿಕಾರ ಹೋಗಿದೆ. ಅವರು ದೊಡ್ಡವರು. ಅವರು ಬಾಯಿ ಮುಚ್ಚಿಕೊಂಡು ತೆಪ್ಪಗೆ ಇರಬೇಕು ಎಂದಿದ್ದಾರೆ.

Row escalates over Eshwarappa's 'shoot the traitor' remark | Bengaluru -  Hindustan Times

ಸಿದ್ದರಾಮಯ್ಯ ಸಾಹೇಬರು, ಡಿಕೆ ಶಿವಕುಮಾರ್ ಸಾಹೇಬರನ್ನು ಟಚ್ ಕೂಡ ಮಾಡಕ್ಕಾಗಲ್ಲ. ಅಮಿತ್ ಶಾ ಅವರೇ ಹೇಳಿದ್ದಾರೆ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಗೆಲ್ಲಬೇಕು ಅಂತ. ಅವರಿಗೆ ಇಬ್ಬರ ಬಗ್ಗೆ ಎಷ್ಟು ಭಯ ಇದೆ ನೋಡಿ ಎಂದರು.

Not a drop of water to TN from KRS, asserts DK Shivakumar | Not a drop of  water to TN from KRS, asserts DK Shivakumar

Siddaramaiah, DK Shivakumar, Karnataka: 4 Facts About Siddaramiah, Set To  Take Charge As Karnataka Chief Minister

ಸುಧಾಕರ್ ಮತ್ತೆ ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇಲ್ಲ ಬಿಡಿ ಸರ್​. ಔಟ್ ಡೇಟೆಡ್ ಬಗ್ಗೆ ನಾನ್ ಮಾತಾಡಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಸುಧಾಕರ್‌ನ ಔಟ್ ಡೇಟೆಡ್ ಅಂತ ಪರೋಕ್ಷವಾಗಿ ಹೇಳಿದರು.

ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಇಬ್ಬರು ಗೂಂಡಾಗಳು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನನ್ನ ಮಾತಿಗೆ ಸಿನಿಮಾ ಸ್ಟೈಲ್‍ನಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಅವರ ಅರ್ಧ ಜೀವನ ತಿಹಾರ್ ಜೈಲಿನಲ್ಲಿ ಸೆಟಲ್‍ಮೆಂಟ್ ಆಗಿದೆ. ಉಳಿದ ಇನ್ನೊಂದು ಪಾರ್ಟ್ ಕೂಡ ಜೈಲಿನಲ್ಲೇ ಸೆಟಲ್‍ಮೆಂಟ್ ಆಗುತ್ತೆ. ನೋಡ್ತಾ ಇರಿ, ಇಷ್ಟರಲ್ಲೆ ಡಿಕೆ ಶಿವಕುಮಾರ್ ಮತ್ತೆ ತಿಹಾರ್ ಜೈಲು ಸೇರಲಿದ್ದಾರೆ ಎಂದು ಹೇಳಿದರು.

ನಾಡಪ್ರಭು ಕೆಂಪೇಗೌಡ ಅವರು ಡಿಕೆ ಶಿವಕುಮಾರ್‌ ಅವರ ಆಸ್ತಿಯಲ್ಲ. ತಮ್ಮನ್ನು ರಾಜ್ಯ ಕಟ್ಟಿದ ವ್ಯಕ್ತಿಯ ಜೊತೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದ ಈಶ್ವರಪ್ಪ, ರಾಷ್ಟ್ರದ್ರೋಹಿ ಹೇಳಿಕೆಗೆ ಡಿಕೆ ಸುರೇಶ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳಿ ಎಂದರೆ ನನಗೆ ನೋಟಿಸ್ ಕಳುಹಿಸುತ್ತಾರೆ. ರಾಷ್ಟ್ರ ದ್ರೋಹಿಗಳನ್ನ ರಕ್ಷಣೆ ಮಾಡಿದ್ದಾರೆ ಎಂದು ಕಿಡಿಕಾರಿದರು.

MLA Pradeep Eshwar Slams Eshwarappa over remarks on DK Shivkumar. Recently eshwarappa made statement saying that they will settle DK ShivKumar case to go to the jail, in contradict to the statement MLA Eshwar said that no one can touch our Boss DK Shivkumar.