ಬ್ರೇಕಿಂಗ್ ನ್ಯೂಸ್
27-02-24 05:15 pm Bangalore Correspondent ಕರ್ನಾಟಕ
ಬೆಂಗಳೂರು, ಫೆ 27: ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ನಿನ್ನೆ ರಾತ್ರಿವರೆಗೂ ಪಕ್ಷದ ಸಂಪರ್ಕದಲ್ಲಿದ್ದರು. ಯಾವ ಕಾರಣಕ್ಕೂ ತಾಯಿಗೆ ದ್ರೋಹ ಮಾಡಲ್ಲ ಎಂದು ಹೇಳಿದ್ದರು. ಆದರೆ, ಮಾಡಿದ್ದೇನು? ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ .
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಅಡ್ಡ ಮತದಾನ ಮಾಡಿದ ಸೋಮಶೇಖರ್ ಮತ್ತು ಮತದಾನಕ್ಕೇ ಬಾರದ ಶಿವರಾಮ ಹೆಬ್ಬಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ʻಬಿಜೆಪಿ ಅಭ್ಯರ್ಥಿ ನಾರಾಯಣ ಭಾಂಡಗೆ ಅವರಿಗೆ ಮತ ಹಾಕುವಂತೆ 47 ಬಿಜೆಪಿ ಶಾಸಕರಿಗೆ ವಿಪ್ ಕೊಟ್ಟಿದ್ದೆವು. ಎಸ್ ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್‌ಗೂ ವಿಪ್ ಕಳಿಸಿದ್ದೆವು. ಸೋಮಶೇಖರ್ ಅವರ ಮನೆಗೇ ವಿಪ್ ಜಾರಿ ಮಾಡಲಾಗಿತ್ತು. ಶಿವರಾಮ ಹೆಬ್ಬಾರ್ ಅವರ ಶಾಸಕರ ಭವನದ ಕೊಠಡಿಗೇ ವಿಪ್ ಕಳುಹಿಸಲಾಗಿತ್ತುʼʼ ಎಂದು ಅಶೋಕ್ ವಿವರಿಸಿದರು.
ʻಕಳೆದ ವಾರದಿಂದ ಸೋಮಶೇಖರ್, ಹೆಬ್ಬಾರ್ ಮಾತನಾಡುತ್ತಿದ್ದರು. ಹೆಬ್ಬಾರ್ ಅವರಂತೂ ಕೊನೆ ಕ್ಷಣದ ವರೆಗೂ ಮಾತಾಡಿದ್ರು. ನಾವು ಪಕ್ಷಕ್ಕೆ ಮೋಸ ಮಾಡಲ್ಲ ಅಂದ್ರು. ತಾಯಿಗೆ ಮೋಸ ಮಾಡಲ್ಲ ಅಂದಿದ್ರು. ಆದರೆ, ಈಗ ಮೋಸ ಮಾಡಿದ್ದಾರೆ ಎಂದು ಹೇಳಿದರು.
ಸೋಮಶೇಖರ್ ಅಡ್ಡ ಮತದಾನ ಮಾಡಿದಾರೆ ಅಂತ ಗೊತ್ತಾಗಿದೆ. ಈ ರೀತಿ ಪದೇಪದೆ ಮೋಸ ಮಾಡೋದನ್ನು ಜನರು ಸಹಿಸಲ್ಲ, ಸೋಮಶೇಖರ್ ಅವರಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ ಎಂದು ವಿವರಣೆ ನೀಡಿದರು.
ಸೋಮಶೇಖರ್ ಅವರನ್ನು ಮಂತ್ರಿ ಮಾಡಿದೆವು. ಮೈಸೂರು ಇನ್ ಚಾರ್ಜ್ ಮಾಡಿದ್ದೆವು. ಅಭಿವೃದ್ಧಿಗೆ ಹಣ ಅಂತ ಈಗ ಹೇಳುತ್ತಾರೆ. ಅವರಿಗೆ ಹಿಂದೆ ಎಷ್ಟು ಬಾರಿ ಹಣ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು ಆರ್. ಅಶೋಕ್.
ಸೋಮಶೇಖರ್ ಅವರೇ ನಿನ್ನೆ ಕರೆ ಮಾಡಿದರು. ದ್ರೋಹ ಬಗೆಯಲ್ಲ ಅಂತ ಹೇಳಿದರು. ಅವರು ಸಿಎಂ ಸಿದ್ದರಾಮಯ್ಯ ಅವರ ಜತೆ ಓಡಾಟ ಶುರು ಮಾಡಿದಾಗಿನಿಂದಲೇ ನಮಗೆ ಗುಮಾನಿ ಇತ್ತು. ಆದರೂ ಅವರನ್ನು ನಂಬಿದ್ದೆವು. ಇವತ್ತು ಅವರು ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೂ ಜನ ಅವರನ್ನು ಕ್ಷಮಿಸುವುದಿಲ್ಲ. ಈ ರೀತಿ ಪಕ್ಷ ದ್ರೋಹ ಮಾಡಿರುವ ಇಬ್ಬರು ನಾಯಕರ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ನಮ್ಮ ಶಾಸಕರಾಗಿರುವ ವಿವೇಕ್ ರೆಡ್ಡಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಏನೆಲ್ಲಾ ಮಾಡಬಹುದು ಅನ್ನೋದು ತಿಳಿಸಿದ್ದಾರೆ ಎಂದು ಹೇಳಿದರು.
R Ashok angry over ST Somashekhar, Shivaram Hebbar for backstabbing BJP party. The BJP and the Janata Dal (Secular) coalition on Tuesday suffered a jolt in the Rajya Sabha elections as some from within its ranks voted for the Congress candidates. Amid cross-voting, JD(S) candidate and real estate businessman D Kupendra Reddy stands to lose out on an Upper House berth.
23-05-26 11:37 pm
HK News Desk
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣ...
22-05-26 09:30 pm
ಬಿಜೆಪಿಗಿಂತ ಹೆಚ್ಚು ಜನ ಕಾಕ್ರೋಚ್ ಪಾರ್ಟಿ ಬೆಂಬಲಿಸಿ...
22-05-26 06:01 pm
23-05-26 08:47 pm
HK News Staffer
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
ಬೆಲೆ ಏರಿಕೆ, ನಿರುದ್ಯೋಗ, ಮೋದಿ ವಿದೇಶ ಪ್ರವಾಸ ವಿರೋ...
23-05-26 01:59 pm
ಪೆಟ್ರೋಲ್ - ಡೀಸೆಲ್ ಬೆಲೆ ಮತ್ತೆ ಏರಿಕೆ ! ಬೆಂಗಳೂರಿ...
23-05-26 09:15 am
ಜೂನ್ 18ರಂದು ಹತ್ತು ರಾಜ್ಯಗಳಲ್ಲಿ 24 ರಾಜ್ಯಸಭೆ ಸ್ಥ...
22-05-26 05:57 pm
22-05-26 09:47 pm
HK News Staffer
ಬೈಕಂಪಾಡಿ- KIOCL ಜಂಕ್ಷನ್ ಮಧ್ಯೆ ಬಹು ನಿರೀಕ್ಷಿತ ಫ...
22-05-26 08:10 pm
ಮಂಗಳೂರಿನ ನಾಲ್ಕು ಕಡೆ ಅದ್ದೂರಿ ಸಭಾಭವನ ; ಲ್ಯಾಂಡ್...
21-05-26 05:52 pm
ಮೇ 25ರವರೆಗೆ ಮೀನುಗಾರರಿಗೆ ಸಮುದ್ರ ಪ್ರವೇಶ ನಿಷೇಧ ಎ...
20-05-26 06:51 pm
ಬೆಳ್ತಂಗಡಿ ; ನೇತ್ರಾವತಿ ನದಿಯಲ್ಲಿ ಸ್ನಾನಕ್ಕಿಳಿದು...
19-05-26 10:47 pm
24-05-26 02:01 pm
HK News Staffer
ಉಡುಪಿಯಲ್ಲಿ ನಿರ್ಮಾಣ ಹಂತದ ಬಾವಿ ಕುಸಿದು 25 ವರ್ಷದ...
23-05-26 11:54 am
ಕಲಬುರಗಿಯಲ್ಲಿ ಭೀಕರ ಅಪಘಾತ ; ಲಾರಿ-ಕ್ರೂಸರ್ ಮುಖಾಮು...
23-05-26 09:19 am
ಹಣದ ವಿಚಾರದಲ್ಲಿ ತಕರಾರು ; ಸ್ನೇಹಿತನ ಮನೆಯನ್ನೇ ದೋಚ...
22-05-26 09:25 pm
ಟಿಸಿಎಸ್ ಕಂಪನಿ ಜಿಹಾದ್ ಪ್ರಕರಣ ; ಪ್ರಮುಖ ಆರೋಪಿ ನಿ...
22-05-26 09:21 pm