ಬ್ರೇಕಿಂಗ್ ನ್ಯೂಸ್
01-03-24 08:14 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.1: ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟ ಘಟನೆಗೆ ಬಾಂಬ್ ಕಾರಣ ಎಂಬುದು ಎಫ್ಎಸ್ಎಲ್ ತನಿಖೆಯಲ್ಲಿ ದೃಢಪಟ್ಟಿದೆ. ಗ್ರಾಹಕರ ಸೋಗಿನಲ್ಲಿ ಹೊಟೇಲಿಗೆ ಬಂದಿದ್ದ ವ್ಯಕ್ತಿಯೊಬ್ಬರು ಇಟ್ಟು ಹೋಗಿದ್ದ ಬ್ಯಾಗಿನಲ್ಲಿದ್ದ ಐಇಡಿ ಮಾದರಿಯ ಸ್ಫೋಟಕ ಬ್ಲಾಸ್ಟ್ ಆಗಿದೆಯಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ.
ಸ್ಫೋಟ ಘಟನೆಯಲ್ಲಿ ಇಬ್ಬರು ಹೊಟೇಲ್ ಸಿಬಂದಿ ಸೇರಿ 9 ಮಂದಿ ಗಾಯಗೊಂಡಿದ್ದಾರೆ. ಹೊಟೇಲ್ ಸಿಬಂದಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹೊಟೇಲ್ ಒಳಗಿನ ಸಿಸಿಟಿವಿಯಲ್ಲಿ ವ್ಯಕ್ತಿಯೊಬ್ಬ ಬ್ಯಾಗನ್ನು ಇಟ್ಟು ಹೋಗಿರುವುದು ಪತ್ತೆಯಾಗಿದೆ.






ಆರಂಭದಲ್ಲಿ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟ ಆಗಿದೆಯೆಂದು ಹೇಳಲಾಗಿತ್ತು. ಅಗ್ನಿಶಾಮಕ ದಳ, ಪೊಲೀಸರು, ಬಾಂಬ್ ನಿಷ್ಕ್ರಿಯ ದಳದವರು ಬಂದು ತನಿಖ ನಡೆಸಿದ್ದರು. ಸ್ಫೋಟಗೊಂಡ ಸ್ಥಳದಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಊಟಕ್ಕೆ ಕುಳಿತಿದ್ದ ಜಾಗದ ಅಡಿಭಾಗದಲ್ಲೇ ಬ್ಯಾಗ್ ಒಂದನ್ನು ಇಟ್ಟಿರುವುದು ಪತ್ತೆಯಾಗಿತ್ತು. ಬ್ಯಾಗಿನಲ್ಲಿದ್ದ ಯಾವುದೋ ಸ್ಫೋಟಕ ವಸ್ತು ಸ್ಫೋಟಗೊಂಡಿದೆ. ಆದರೆ ದೊಡ್ಡ ಮಟ್ಟದಲ್ಲಿ ಸ್ಫೋಟ ಆಗದೇ ಇದ್ದುದರಿಂದ ಹೆಚ್ಚಿನ ಅಪಾಯ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ಘಟನೆ ಹಿನ್ನೆಲೆಯಲ್ಲಿ ತನಿಖೆಗೆ ಎನ್ಐಎ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಸ್ಥಳದಲ್ಲಿ ಎಡಿಜಿಪಿ ಅಲೋಕ್ ಮೋಹನ್ ಠಿಕಾಣಿ ಹೂಡಿದ್ದು, ಬಾಂಬ್ ಬ್ಲಾಸ್ಟ್ ಅನ್ನುವುದನ್ನು ದೃಢಪಡಿಸಿದ್ದಾರೆ. ಇದರ ಹಿಂದಿರುವ ಶಕ್ತಿಯನ್ನು ಪತ್ತೆ ಮಾಡುತ್ತೇವೆ. ಆದರೆ ಅದು ದೊಡ್ಡ ಮಟ್ಟದ ಸ್ಫೋಟ ಆಗಿರಲಿಲ್ಲ ಎಂದವರು ತಿಳಿಸಿದ್ದಾರೆ. ಐಇಡಿ ಸ್ಫೋಟಕ ವಸ್ತುವನ್ನು ಬಳಸಿರುವುದು ಕಂಡುಬಂದಿದೆ. ಈ ಹಿಂದೆಯೂ ಇಂತಹ ಬ್ಲಾಸ್ಟ್ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಅಂತಹ ಸ್ಫೋಟ ಆಗಿರಲಿಲ್ಲ. ಕಳೆದ ಸರಕಾರ ಇದ್ದಾಗ ಮಂಗಳೂರಿನಲ್ಲಿ ಅದೇ ಮಾದರಿ ಸ್ಫೋಟ ಆಗಿತ್ತು ಎಂದವರು ಹಾರಿಕೆಯ ಉತ್ತರ ನೀಡಿದ್ದಾರೆ.
#Bangalore Rameshwaram Cafe bomb blast, Explosion was IED blast, confirms CM Siddaramaiah, 9 injured. Chief Minister #Siddaramaiah said investigation is on to ascertain the cause and nature of the explosion at the popular #RameshwaramCafe in #Whitefiled pic.twitter.com/3KS4KTmJfW
— Headline Karnataka (@hknewsonline) March 1, 2024
Bangalore Rameshwaram Cafe bomb blast, Explosion was IED blast, confirms CM Siddaramaiah, 9 injured. Chief Minister Siddaramaiah said investigation is on to ascertain the cause and nature of the explosion at the popular Rameshwaram Cafe in Whitefiled, and added it might have been caused by an "improvised explosive" device.
11-03-26 07:16 pm
HK News Staffer
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 500 ರಿಂದ 600 ವರ್ಷ ಹಳ...
11-03-26 12:57 pm
ಶಿಕ್ಷಕರಿಗೆ ಬೀದಿ ನಾಯಿ ನಿಯಂತ್ರಣ ಜವಾಬ್ದಾರಿ ಕೊಟ್ಟ...
11-03-26 11:48 am
LPG ಸಿಲಿಂಡರ್ ಪೂರೈಕೆ ಸ್ಥಗಿತ ; ಬೆಂಗಳೂರಿನಲ್ಲಿ ಹಲ...
10-03-26 01:47 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
11-03-26 09:15 pm
Mangalore Correspondent
ಬಾಡಿಗೆ ಮನೆಯಲ್ಲಿ ಡ್ರಗ್ಸ್ ಮಾರಾಟ ; ಬಂಟ್ವಾಳದ ನೇರಳ...
11-03-26 07:22 pm
ಗ್ಯಾಸ್ ಬಿಕ್ಕಟ್ಟು ; ಕುಕ್ಕೆ ಸುಬ್ರಹ್ಮಣ್ಯಕ್ಕೆ ತಟ್...
11-03-26 06:26 pm
ಕುತ್ತಾರಿನಲ್ಲಿ ಹಿಟ್ ಆಂಡ್ ರನ್ ಪ್ರಕರಣ ; ಬೈಕ್ ಧಾ...
11-03-26 03:25 pm
ಕಂಬಳಕ್ಕೆ ಪ್ರದೇಶದ ಗಡಿ ಇಲ್ಲ ; ಕರಾವಳಿ ಸಂಸ್ಕೃತಿ ಬ...
11-03-26 11:54 am
11-03-26 10:58 am
HK News Staffer
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am