ಬ್ರೇಕಿಂಗ್ ನ್ಯೂಸ್
21-03-24 07:00 pm HK News Desk ಕರ್ನಾಟಕ
ಹಾಸನ, ಮಾ.21: ತಾಳಿ ಕಟ್ಟುವ ಶುಭ ವೇಳೆಯಲ್ಲೇ ವಧುವಿನ ಪ್ರಿಯತಮ ಬಂದು ಕಿರಿಕ್ ಮಾಡಿದ್ದರಿಂದ ಮದುವೆ ಅರ್ಧದಲ್ಲೇ ಮುರಿದು ಬಿದ್ದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಬೇಲೂರಿನ ಒಕ್ಕಲಿಗರ ಸಂಘದಲ್ಲಿ ಗುರುವಾರ ಬೇಲೂರಿನ ತೇಜಸ್ವಿನಿ ಹಾಗ ಶಿವಮೊಗ್ಗ ಮೂಲದ ಪ್ರಮೋದ್ ಕುಮಾರ್ ಮದುವೆ ಏರ್ಪಾಡು ಆಗಿತ್ತು. ತಾಳಿ ಕಟ್ಟಲು ಇನ್ನೇನು ಸಿದ್ಧತೆ ಆಗುತ್ತಿದ್ದಾಗಲೇ ಯುವಕನೊಬ್ಬ ಕಲ್ಯಾಣ ಮಂಟಪಕ್ಕೆ ಬಂದು ಮದುವೆಗೆ ಅಡ್ಡಿಪಡಿಸಿದ್ದಾನೆ. ಹಾಸನ ಹೊರವಲಯದ ಗವೇನಹಳ್ಳಿಯ ಯುವಕ ನವೀನ್ ಎಂಬಾತ ತಾಳಿಯನ್ನು ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ, ನನ್ನ ಜೊತೆಗೇ ಮದುವೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾನೆ. ಇದರಿಂದ ಕಲ್ಯಾಣ ಮಂಟಪದಲ್ಲಿ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಯಿತು. ಬಳಿಕ ಬೇಲೂರು ಪೊಲೀಸರು ಆಗಮಿಸಿದ್ದು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತೇಜಸ್ವಿನಿ ಹಾಗೂ ನವೀನ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ತನ್ನ ಪ್ರೀತಿ ವಿಚಾರ ಮುಚ್ಚಿಟ್ಟು ಪ್ರಮೋದ್ ಕುಮಾರ್ ಜೊತೆ ಮದುವೆಗೆ ಯುವತಿ ಮುಂದಾಗಿದ್ದಳು. ಆದರೆ ವಂಚನೆಗೊಳಗಾದ ಯುವಕ ತನ್ನ ಜೊತೆಗಿನ ಪ್ರೀತಿ ವಿಷಯ ಬಯಲು ಮಾಡಿದ್ದಾನೆ. ಯುವತಿಯ ಪ್ರೀತಿ ಪ್ರೇಮದ ವಿಚಾರ ತಿಳಿದು ವರ ಪ್ರಮೋದ್ ತನಗೆ ಈ ಮದುವೆ ಬೇಡ ಎಂದು ಮದುವೆ ಮಂಟಪದಿಂದಲೇ ಹೊರ ನಡೆದಿದ್ದಾನೆ. ವಧು ಮತ್ತು ವರನ ಸಂಬಂಧಿಕರು ಬೇಲೂರು ಪೊಲೀಸ್ ಠಾಣೆಯಲ್ಲಿ ಸೇರಿದ್ದು ಮಾತುಕತೆ ನಡೆಸಿದ್ದಾರೆ.
Hassan marriage stopped by lover at last moment. Lover who came suddenly into the wedding hall alleged that the bride was in love with him and took away the Mangala Sutra. Belur police have registered a case.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm