ಬ್ರೇಕಿಂಗ್ ನ್ಯೂಸ್
28-03-24 08:44 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.28: ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ಪ್ರಮುಖ ಸಂಚುಕೋರ ಎನ್ನಲಾದ ಮುಝಾಮಿಲ್ ಶರೀಫ್ ಎಂಬಾತನನ್ನು ಬಂಧಿಸಿದ್ದಾರೆ.
ಎರಡು ದಿನಗಳಿಂದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕರ್ನಾಟಕದ 12 ಕಡೆ, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ ಒಂದು ಕಡೆ ಏಕಕಾಲದಲ್ಲಿ ದಾಳಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ, ಮುಝಾಮಿಲ್ ಶರೀಫ್ ಎಂಬಾತನನ್ನು ಪ್ರಮುಖ ಸಂಚುಕೋರ ಎಂದು ಹೆಸರಿಸಿ ಅರೆಸ್ಟ್ ಮಾಡಿದ್ದಾರೆ.
ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಎನ್ಐಎ ಅಧಿಕಾರಿಗಳು ಸಿಸಿಟಿವಿ ಆಧರಿಸಿ ಬಾಂಬ್ ಇರಿಸಿ ಹೋಗಿದ್ದ ವ್ಯಕ್ತಿಯನ್ನು ತೀರ್ಥಹಳ್ಳಿ ಮೂಲದ ಮುಸಾವಿರ್ ಶಜೀಬ್ ಹುಸೇನ್ ಎಂದು ಗುರುತಿಸಿದ್ದರು. ಅಲ್ಲದೆ, ಕೃತ್ಯಕ್ಕೆ ಆತನ ಸಹಚರ ಅಬ್ದುಲ್ ಮತೀನ್ ತಾಹಾ ಸಹಕಾರ ನೀಡಿದ್ದ ಎಂದೂ ಪತ್ತೆ ಮಾಡಿದ್ದರು. ಘಟನೆಗೂ ಮುನ್ನ ಎರಡು ತಿಂಗಳ ಕಾಲ ಇವರಿಬ್ಬರು ಚೆನ್ನೈನಲ್ಲಿ ಉಳಿದುಕೊಂಡಿದ್ದರು ಎನ್ನುವುದನ್ನೂ ಪತ್ತೆ ಹಚ್ಚಿದ್ದರು.
ಕಾರ್ಯಾಚರಣೆ ಬಗ್ಗೆ ಎನ್ಐಎ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಮುಝಾಮಿಲ್ ಶರೀಫ್ ಎಂಬಾತ ಇಬ್ಬರು ಆರೋಪಿಗಳಿಗೆ ರಾಮೇಶ್ವರ ಕೆಫೆಯಲ್ಲಿ ಇರಿಸಲಾಗಿದ್ದ ಐಇಡಿ ಬಾಂಬ್ ಸಾಮಗ್ರಿಯನ್ನು ತಲುಪಿಸಲು ಸಹಕರಿಸಿದ್ದ ಎಂದು ಹೇಳಿದೆ. ಮಾರ್ಚ್ 1ರಂದು ಕೆಫೆಯಲ್ಲಿ ಐಇಡಿ ಬಾಂಬ್ ಸ್ಫೋಟಗೊಂಡು ಹೊಟೇಲ್ ಸಿಬಂದಿ ಸೇರಿ 9 ಮಂದಿ ಗಾಯಗೊಂಡಿದ್ದರು. ಬ್ಲಾಸ್ಟ್ ಆದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಸ್ಫೋಟಕ್ಕೂ ಮುನ್ನ ಬಂದು ಹೋಗಿದ್ದ ವ್ಯಕ್ತಿಯೊಬ್ಬ ಚೀಲದಲ್ಲಿ ಬಾಂಬ್ ಅನ್ನು ಇಟ್ಟು ಹೋಗಿರುವುದೂ ಸೆರೆಯಾಗಿತ್ತು.
ಮುಸಾವಿರ್ ಮತ್ತು ಅಬ್ದುಲ್ ಮತೀನ್ ಕೃತ್ಯ ಎಸಗಿದವರು ಎಂದು ಎನ್ಐಎ ಅಧಿಕಾರಿಗಳು ದೃಢಪಡಿಸಿದ್ದು, ಆ ಹಿನ್ನೆಲೆಯಲ್ಲಿ ಶಿವಮೊಗ್ಗದ ತೀರ್ಥಹಳ್ಳಿಯ ಅವರ ಮನೆಗಳು, ಶಾಪ್ ಗಳು, ಅವರ ಸಹವರ್ತಿಗಳ ಭಟ್ಕಳದ ಮನೆಗಳಿಗೆ ದಾಳಿ ನಡೆಸಲಾಗಿತ್ತು. ಈ ವೇಳೆ, ಹಲವಾರು ಡಿಜಿಟಲ್ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿತ್ತು. ಪ್ರಮುಖ ಆರೋಪಿಗಳಾದ ಮುಸಾವಿರ್ ಮತ್ತು ಅಬ್ದುಲ್ ಮತೀನ್ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದೀಗ ಅರೆಸ್ಟ್ ಆಗಿರುವ ಮುಝಾಮಿಲ್ ಶರೀಫ್ ಎಲ್ಲಿಯವನು ಎಂಬ ಬಗ್ಗೆ ಎನ್ಐಎ ಅಧಿಕಾರಿಗಳು ಮಾಹಿತಿ ಬಿಟ್ಟುಕೊಟ್ಟಿಲ್ಲ.
The key conspirator in the Rameshwaram cafe blast case in Bangalore Muzammil Shareef is arrested by the National Investigation Agency today after massive raids across multiple locations in three states. Several customers and hotel staff members were injured in the blast on March 1, which caused extensive damage to the popular cafe.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
23-02-25 11:22 pm
HK News Desk
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
Kerala school teacher suicide, catholic Churc...
22-02-25 03:53 pm
23-02-25 03:20 pm
Mangalore Correspondent
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
Thumbay Group, Fergana College, Uzbekistan: ಉ...
21-02-25 07:54 pm
23-02-25 03:42 pm
HK News Desk
Visa fraud, Bangalore crime, Arrest: ವಿದೇಶಿ ವ...
22-02-25 10:36 pm
Ankola Car Robbery, Rajendra Pawar, Gold Smug...
20-02-25 01:22 pm
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm