ಬ್ರೇಕಿಂಗ್ ನ್ಯೂಸ್
29-03-24 10:38 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.29: ಕರಾವಳಿಯ ದಕ್ಷಿಣ ಕನ್ನಡ, ಕೊಡಗಿನ ಗಡಿಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿರುವ ಹೊತ್ತಲ್ಲೇ ರಾಜ್ಯ ಸರಕಾರ ನಕ್ಸಲರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶರಣಾಗಿ ಬರುವ ನಕ್ಸಲರಿಗೆ 7.5 ಲಕ್ಷ ಮೊತ್ತದ ಬಹುಮಾನ ನೀಡುವ ಆಫರ್ ನೀಡಿದೆ.
ಇದಲ್ಲದೆ, ನಕ್ಸಲ್ ವಾದ ಬಿಟ್ಟು ಮುಖ್ಯ ವಾಹಿನಿಗೆ ಬರುವವರಿಗೆ ಅವರ ವಿರುದ್ಧ ದಾಖಲಾದ ಪ್ರಕರಣಗಳನ್ನು ವಜಾ ಮಾಡುವುದು ಸೇರಿ ಅವರಿಗೆ ಸ್ವಉದ್ಯೋಗ ಕಂಡುಕೊಳ್ಳಲು ಸೂಕ್ತ ತರಬೇತಿಯನ್ನೂ ಕೊಡಿಸಲಾಗುವುದು ಎಂದು ರಾಜ್ಯ ಸರಕಾರ ಹೇಳಿದೆ. ಈ ರೀತಿ ಆಫರ್ ನೀಡುವ ಯೋಜನೆಯನ್ನು 2015ರಲ್ಲಿ ತರಲಾಗಿತ್ತು. ಅದನ್ನೀಗ ಮತ್ತೆ ರಿವೈಸ್ ಮಾಡಿ ಜಾರಿಗೆ ತರಲಾಗಿದೆ.
ನಕ್ಸಲರನ್ನು ಮೂರು ಗುಂಪುಗಳಾಗಿ ವಿಭಜಿಸಿದ್ದು, ಕೇಂದ್ರ ಮಟ್ಟದ ಅಥವಾ ರಾಜ್ಯ ಮಟ್ಟದ ನಕ್ಸಲ್ ಗುಂಪಿನಲ್ಲಿ ಗುರುತಿಸಿದ್ದರೆ ಅಂಥವರಿಗೆ 7.5 ಲಕ್ಷ ಮೊತ್ತದ ಸಂಭಾವನೆ ನೀಡಲಾಗುವುದು. ಬಿ ಮತ್ತು ಸಿ ಕೆಟಗರಿಯಲ್ಲಿ ಇರುವವರಿಗೆ ನಾಲ್ಕು ಮತ್ತು ಎರಡು ಲಕ್ಷ ಮೊತ್ತದ ಬಹುಮಾನ ನೀಡಲಾಗುವುದು. ಬಿ ಗ್ರೂಪಿನಲ್ಲಿ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನಲ್ಲಿದ್ದು ಗುಪ್ತ ಚಟುವಟಿಕೆ ನಡೆಸುತ್ತಿದ್ದವರು, ಸಿ ಗ್ರೂಪಿನಲ್ಲಿ ನಕ್ಸಲರಿಗೆ ಬೆಂಬಲ ನೀಡುತ್ತಿದ್ದವರನ್ನು ಗುರುತಿಸಲಾಗಿದೆ.
ನಕ್ಸಲರು ತಮ್ಮ ಶಸ್ತ್ರಗಳನ್ನು ತಂದು ಒಪ್ಪಿಸಿದಲ್ಲಿ ಅಂಥವರಿಗೆ ಪ್ರತ್ಯೇಕ ಸಂಭಾವನೆ ಸಿಗಲಿದೆ. ಅಲ್ಲದೆ, ತರಬೇತಿ ಪಡೆಯುವರಿಗೆ ತಿಂಗಳಿಗೆ 5 ಸಾವಿರದಂತೆ ಎರಡು ವರ್ಷಗಳ ಕಾಲ ನಿಶ್ಚಿತ ಮೊತ್ತ ಸಿಗಲಿದೆ. ಇದಲ್ಲದೆ, ಅವರ ವಿರುದ್ಧದ ಕೇಸುಗಳನ್ನು ಹಿಂಪಡೆಯಲಾಗುವುದು. ಅವರಿಗೆ ವಕೀಲರ ಸೌಲಭ್ಯ ಬೇಕಿದ್ದಲ್ಲಿ ಅದನ್ನೂ ಒದಗಿಸಲಾಗುವುದು. ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 14 ನಕ್ಸಲರು ಸರಕಾರದ ಮುಂದೆ ಶರಣಾಗಿದ್ದು, ಮುಖ್ಯ ವಾಹಿನಿಗೆ ಬಂದಿದ್ದಾರೆ. ಕಾಡಿನಲ್ಲಿ ಅಡಗಿಕೊಂಡು ಜೀವನ ಸವೆಸುವ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಮತ್ತೆ ನೈಜ ಜೀವನಕ್ಕೆ ಹೊರಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
In a bid to reintegrate Naxals into mainstream society, the state government has introduced a novel initiative offering Rs 7.5 lac to those who voluntarily surrender. In addition to the cash reward, they will receive skill training, withdrawal of cases against them, and rehabilitation. This scheme, initially launched in 2015, has been recently revised.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm