ಬ್ರೇಕಿಂಗ್ ನ್ಯೂಸ್
11-04-24 09:55 pm HK NEWS ಕರ್ನಾಟಕ
ಬೆಂಗಳೂರು, ಎ.11: ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲೇ ಅರ್ಧ ಪಾಕಿಸ್ತಾನ ಇದೆಯೆಂಬ ಟೀಕೆ, ಆ ಬಗ್ಗೆ ಎಫ್ಐಆರ್ ದಾಖಲಾದ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಹೇಳಿಕೆ ನೀಡುವಾಗ ನಾನು ಯಾವುದೇ ಸ್ತ್ರೀಲಿಂಗ, ಪುಲ್ಲಿಂಗ ಬಳಸಿಲ್ಲ. ಅದನ್ನ ಅವರಿಗೆ (ತಬು ರಾವ್) ಅಂದಿರುವುದಾಗಿ ತಿಳಿದುಕೊಂಡ್ರೆ ಯತ್ನಾಳ್ ಏನೂ ಮಾಡಕಾಗಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಅವರು ಹೆಗಲು ಮುಟ್ಟಿಕೊಂಡು ನೋಡಿದರೆ ಏನು ಮಾಡೋದು ಎಂದು ವ್ಯಂಗ್ಯವಾಡಿದ್ದಾರೆ.
ನಿಮ್ಮ ಮನೆ ಅಂದ್ರೆ ಯಾವುದು? ಅವರ ಮನೆ ಹೇಗಿದೆ ಅಂತಾ ಯಾರಿಗೆ ಗೊತ್ತು. ಕಾಂಗ್ರೆಸ್ ಮನೆಯಲ್ಲಿ ಇರುವವರು ಅರ್ಧ ಪಾಕಿಸ್ತಾನ ಏಜೆಂಟ್ರಿದ್ದಾರೆ. ಕಾಂಗ್ರೆಸ್ಸಿಗರು ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದನ್ನು ಸಮರ್ಥಿಸಿಕೊಂಡಿದ್ದರು. ಅದಕ್ಕೆ ಕಾಂಗ್ರೆಸ್ ಅರ್ಧ ಪಾಕಿಸ್ತಾನ ಇದೆ ಅಂತ ಹೇಳಿದ್ದೆ. ದಿನೇಶ್ ಗುಂಡೂರಾವ್ ಮನೆಯಂದ್ರೆ, ಕಾಂಗ್ರೆಸ್ ಮನೆ ಎಂದರ್ಥ ಎಂಬುದಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಅದು ಒಂದು ದುರಂತ. ಪ್ರಣಾಳಿಕೆಯಲ್ಲಿ 370 ಕಲಂ ಮತ್ತೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಅಂದ್ರೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅಂತ ಇವರು ಭಾವಿಸಿಲ್ಲ. ಅಲ್ಪಸಂಖ್ಯಾತರಿಗಾಗಿ ವಿಶೇಷ ಕಾನೂನು ಮಾಡುತ್ತೇವೆ ಅನ್ನುತ್ತಾರೆ. ಮುಸ್ಲಿಂ ಪರವಾಗಿ ವಿಶೇಷ ಕಾನೂನು ಮಾಡ್ತಾರೆ ಅಂದ್ರೆ 5 ವರ್ಷದಲ್ಲಿ ಪಾಕಿಸ್ತಾನ ಮಾಡ್ತಾರಾ ಎಂದು ಪ್ರಶ್ನೆ ಮಾಡಿದರು.
ಇವರಿಗೆ ಮಾನ ಮರ್ಯಾದೆ ಇದೆಯಾ? ಒಂದಾದ್ರೂ ಹಿಂದುಗಳ ಪರವಾಗಿ ಏನಾದ್ರೂ ಮಾಡಿದ್ದೀರಾ? ಅಯೋಧ್ಯ ರಾಮನಿಗೆ ವಿರೋಧ ಮಾಡಿದ ನಾಲಾಯಕರು ಕಾಂಗ್ರೆಸ್ಸಿಗರು ಎಂದು ವಾಗ್ದಾಳಿ ನಡೆಸಿದರು.
ಈಶ್ವರಪ್ಪ ತಮ್ಮ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಿದ್ದಕ್ಕೆ ವಿರೋಧ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರಧಾನಿ ಮೋದಿ ಫೋಟೋ ಹಾಕಲು ಯಾರದೂ ತಕರಾರು ಇಲ್ಲ. ಅವರು ಇಡೀ ಜಗತ್ತಿನ ನಾಯಕರಿದ್ದಾರೆ. ನಾನು ಮೋದಿ ಫ್ಯಾನ್ ಇದ್ದೇನೆ ಅಂದ್ರೆ ಏನು ಮಾಡಕಾಗಲ್ಲ. ಮೋದಿ ಪೋಟೋ ಹಾಕಲು ನಾನು ವಿರೋಧ ಮಾಡಲ್ಲ ಎಂದು ಈಶ್ವರಪ್ಪ ಪರ ಬ್ಯಾಟ್ ಬೀಸಿದರು.
BJP MLA Yatnal half Pakistan, says it was not for dinesh gundu rao wife. The Bengaluru police recently booked BJP Bijapur MLA Basanagouda Patil Yatnal for allegedly referring to Karnataka Health Minister Dinesh Gundu Rao’s house as ‘half Pakistan’.
20-09-25 02:59 pm
HK News Desk
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
20-09-25 11:42 am
HK News Desk
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
20-09-25 02:31 pm
Mangalore Correspondent
ಅಪಸ್ಮಾರ ಕಾಯಿಲೆ, ಕುಂಪಲದ ಹದಿಹರೆಯದ ಬ್ಯೂಟೀಷಿಯನ್ ಯ...
19-09-25 10:46 pm
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm