ಬ್ರೇಕಿಂಗ್ ನ್ಯೂಸ್
11-08-24 08:47 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 11: ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ನಾವು ನೀಡಿದ್ದ ವರದಿಯನ್ನು ಅಧ್ಯಯನ ಮಾಡದೇ ತಪ್ಪು ಅಭಿಪ್ರಾಯಗಳನ್ನು ಜನರಲ್ಲಿ ತುಂಬಿದ್ದರಿಂದ ವಿಕೋಪಗಳನ್ನು ನೋಡುವಂತಾಯಿತು. ಈಗಲೂ ಆ ವರದಿಯನ್ನು ಜಾರಿ ಮಾಡಿದರೆ ಪಶ್ಚಿಮಘಟ್ಟದ ಪರಿಸರ ಮತ್ತು ಜನಜೀವನಕ್ಕೆ ರಕ್ಷಣೆ ಸಿಗಲಿದೆ ಎಂದು ಪರಿಸರ ತಜ್ಞ ಮಾಧವ್ ಗಾಡ್ಗೀಳ್ ಹೇಳಿದರು.
ಬೆಂಗಳೂರಿನಲ್ಲಿ ʼಪರಿಸರಕ್ಕಾಗಿ ನಾವುʼ ಸಂಘಟನೆ ಏರ್ಪಡಿಸಿದ್ದ ʼಗಾಡ್ಗೀಳ್ ವರದಿ ಜಾರಿ ಮಾಡಲು ಇನ್ನೂ ಎಷ್ಟು ಬಲಿ ಬೇಕು?ʼ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಶ್ಚಿಮಘಟ್ಟದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಯೋಜನೆಗಳನ್ನು ನಿಷೇಧಿಸುವಂತೆ ನಾವು ವರದಿ ನೀಡಿರಲಿಲ್ಲ. ಘಟ್ಟ ಪ್ರದೇಶವನ್ನು ಸಾಮಾನ್ಯ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಮೂರು ವಲಯಗಳಾಗಿ ನಾವು ಗುರುತಿಸಿದ್ದೆವು. ಸಾಮಾನ್ಯ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವನ್ನು ಸೂಚಿಸಿರಲಿಲ್ಲ. ಕೇವಲ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ವಲಯದಲ್ಲಿ ಮಾತ್ರ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಬಾರದು ಎಂದು ಸಲಹೆ ನೀಡಿದ್ದೆವು. ಆದರೆ, ಆ ವರದಿಯನ್ನು ಓದದೇ ಕೇವಲ ಊಹಾಪೋಹ ಮತ್ತು ತಪ್ಪುಗ್ರಹಿಕೆಗಳನ್ನು ಹರಡಿ ಅದನ್ನು ಬದಿಗೆ ಸರಿಸಲಾಯಿತು. ಜನರಲ್ಲಿ ಭಯ ಬಿತ್ತಲಾಯಿತು ಎಂದು ಅವರು ವಿವರಿಸಿದರು.
ಐದು ವರ್ಷಗಳ ಹಿಂದೆ ಕೇರಳದಲ್ಲಿ ಸಂಭವಿಸಿದ ಭೂ ಕುಸಿತ ಮತ್ತು ಪ್ರವಾಹದಲ್ಲಿ ಟೀ ತೋಟಗಳ ಬಡ ಕಾರ್ಮಿಕರು ಜೀವ ಕಳೆದುಕೊಂಡರು. ಹಿಮಾಲಯ, ಮಹಾರಾಷ್ಟ್ರ, ಪಶ್ಚಿಮಘಟ್ಟ ಸೇರಿದಂತೆ ಎಲ್ಲೇ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ ಬಡವರೇ ಹೆಚ್ಚು ಜೀವ ಕಳೆದುಕೊಳ್ಳುವುದು. ಆದರೆ, ವಯನಾಡಿನಲ್ಲಿ ಆದ ಪ್ರಮಾಣದಲ್ಲಿ ಈ ಹಿಂದೆ ಎಲ್ಲೂ ಅನಾಹುತ ಸಂಭವಿಸಿರಲಿಲ್ಲ. ಈಗಿನ ಅಭಿವೃದ್ಧಿ ಚಿಂತನಾ ಕ್ರಮದಲ್ಲೇ ಲೋಪ ಇದೆ. ಪರಿಸರ ಪೂರಕವಾಗಿ ಸುಸ್ಥಿರ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳದೆ ಪಶ್ಚಿಮಘಟ್ಟ ಪರಿಸರ ಮತ್ತು ಜನಜೀವನಕ್ಕೆ ನೆಮ್ಮದಿ ಇರದು ಎಂದೂ ಅವರು ಎಚ್ಚರಿಕೆ ನೀಡಿದರು.
ಮೇಕೆದಾಟು ಯೋಜನೆ ಕೈಬಿಡಿ
ಸಂವಾದದಲ್ಲಿ ಮಾತನಾಡಿದ ಪರಿಸರ ವಿಜ್ಞಾನಿ ಡಾ.ಟಿ.ವಿ ರಾಮಚಂದ್ರ, ಬೆಂಗಳೂರು ನಗರಕ್ಕೆ ನೀರು ತರಲು ಐದು ಸಾವಿರ ಹೆಕ್ಟೇರ್ ಕಾಡು ನಾಶ ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟುವುದು ಅನಾಹುತಕಾರಿ. ಇದು ನೂರು ಟಿಎಂಸಿ ನೀರು ಇಂಗಿಸುವ ಕಾಡು ಮುಳುಗಿಸಿ 65 ಟಿಎಂಸಿ ನೀರು ತರುವ ಮೂರ್ಖತನ ಎಂದು ಹೇಳಿದರು.
ಬೆಂಗಳೂರಿಗೆ ವರ್ಷಕ್ಕೆ 18 ಟಿಎಂಸಿ ಅಡಿ ನೀರು ಬೇಕಿದೆ. ಬೆಂಗಳೂರಿನಲ್ಲಿ ವಾರ್ಷಿಕ ಬೀಳುವ ಮಳೆ ನೀರು ಸಂಗ್ರಹದ ಮೂಲಕವೇ 15 ಟಿಎಂಸಿ ನೀರು ಪಡೆಯಬಹುದು. ಮತ್ತು ಅದೇ ನೀರನ್ನು ಮರು ಬಳಕೆ ಮಾಡುವ ಮೂಲಕ ಇಡೀ ಬೆಂಗಳೂರಿನ ನೀರಿನ ಅಗತ್ಯವನ್ನೇ ಪೂರೈಕೆ ಮಾಡಬಹುದು. ಅದಕ್ಕಾಗಿ ಪರಿಸರಕ್ಕೆ ತೀರಾ ಮಾರಕವಾಗಿ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತಿರುವುದು ಅನಾಹುತಕಾರಿ ಎಂದವರು ಅಭಿಪ್ರಾಯಪಟ್ಟರು.
ಸಂವಾದ ಸಭೆಯಲ್ಲಿ ಮಂಡಿಸಲಾದ ಹಕ್ಕೊತ್ತಾಯಗಳು
There were landslips in the Western Ghats region even earlier. In 1984, there were landslips in Kodagu and again in 2019 and 2020. However, there were not so many deaths and not much attention given to the matter. But now, after hundreds of people died in the landslip at Wayanad in Kerala, discussions about my report have begun,” said ecologist Madhav Gadgil on Saturday.
24-02-25 01:36 pm
HK News Desk
Kumar Bangarappa, BJP President: ಬಿಜೆಪಿ ರಾಜ್ಯ...
23-02-25 06:38 pm
Telangana Model, Pramod Muthalik, CM Siddaram...
21-02-25 10:47 pm
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
24-02-25 10:14 pm
HK News Desk
India Pak Match 2025 Live: ಪಾಕ್ ತಂಡವನ್ನು ಚಾಂಪ...
23-02-25 11:22 pm
ಗಂಗಾ ನದಿಗಿದೆ ಸ್ವಯಂ ಶುದ್ಧೀಕರಣದ ಶಕ್ತಿ ; ಕೋಟ್ಯಂತ...
23-02-25 09:52 pm
ದುಬೈನಲ್ಲಿ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳ...
22-02-25 09:48 pm
ದುಬೈ ಉದ್ಯಮಿ ಬಿ.ಆರ್ ಶೆಟ್ಟಿಗೆ ದುಬೈ ಕೋರ್ಟಿನಿಂದ ಮ...
22-02-25 07:51 pm
24-02-25 02:50 pm
Mangalore Correspondent
Mangalore accident, Surathkal, Raichur: ಸುರತ್...
23-02-25 03:20 pm
Rani Abbakka, Mamata Ballal, Mangalore: ಐನೂರು...
23-02-25 01:12 pm
Siddaramaiah, Priyank Kharge Mangalore, D K S...
22-02-25 05:21 pm
Singari Beedi Robbery, IPS, crime: ಸಿಂಗಾರಿ ಬೀ...
21-02-25 08:22 pm
24-02-25 10:51 pm
HK News Desk
Illegal drug supply, Mangalore: ಮಂಗಳೂರು ಜೈಲಿಗ...
24-02-25 09:43 pm
Bangalore crime, Police constable, Rape, Bomm...
24-02-25 07:08 pm
Sirsi Murder, KSRTC Bus, crime: ಶಿರಸಿ ; ಹತ್ತು...
23-02-25 03:42 pm
Visa fraud, Bangalore crime, Arrest: ವಿದೇಶಿ ವ...
22-02-25 10:36 pm