ಬ್ರೇಕಿಂಗ್ ನ್ಯೂಸ್
15-11-21 08:06 pm HK Desk ಕರ್ನಾಟಕ
ತಿರುವನಂತಪುರಂ, ನ.15: ಪುಣ್ಯಕ್ಷೇತ್ರ ಶಬರಿಮಲೆಯ ಅರವಣ ಪ್ರಸಾದ ತಯಾರಿ ಗುತ್ತಿಗೆಯನ್ನು ಮುಸ್ಲಿಮರಿಗೆ ವಹಿಸಲಾಗಿದೆ ಎನ್ನುವ ವದಂತಿ ಸುದ್ದಿ ಮತ್ತು ಅರವಣ ಪಾಯಸಂ ಪ್ಯಾಕೆಟ್ ಡಬ್ಬಿಯ ಫೋಟೋ ಭಾರೀ ವೈರಲ್ ಆಗಿತ್ತು. ಡಬ್ಬಿಯ ಮೇಲೆ ಅರೇಬಿಕ್ ಭಾಷೆಯಲ್ಲಿ ಬರೆದಿದ್ದ ಅಲ್ ಝಾಹಾ ಎನ್ನುವ ಹೆಸರು ಮತ್ತು ಅರವಣ ಪಾಯಸಂ – ಹಲಾಲ್ ಅನ್ನುವ ಪ್ಯಾಕೆಟ್ ಫೋಟೋ ವೈರಲ್ ಆಗಿದ್ದು ಹಿಂದುಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಬಗ್ಗೆ ದೆಹಲಿ ಮೂಲದ ನ್ಯೂಸ್ ಚೆಕ್ಕರ್ ಅನ್ನುವ ವೆಬ್ ಸೈಟ್ ಫ್ಯಾಕ್ಟ್ ಚೆಕ್ ಮಾಡಿದ್ದು, ಇದು ಶಬರಿಮಲೆಯಿಂದ ಕೊಡಲಾಗುವ ಅರವಣ ಪ್ರಸಾದ ಅಲ್ಲ ಅನ್ನುವುದನ್ನು ದೃಢಪಡಿಸಿದೆ.
ನವೆಂಬರ್ 15ಕ್ಕೆ ಶಬರಿಮಲೆ ಕ್ಷೇತ್ರ ಭಕ್ತರಿಗೆ ತೆರೆದುಕೊಳ್ಳುವ ಸಂದರ್ಭದಲ್ಲಿಯೇ ಈ ರೀತಿಯ ಫೋಟೋ ವೈರಲ್ ಆಗಿದ್ದು ಭಕ್ತರ ಭಾವನೆಗೆ ಧಕ್ಕೆ ಬರುವಂತಾಗಿತ್ತು. ಈ ಫೋಟೋ ಫೇಸ್ಬುಕ್, ಟ್ವಿಟರ್, ವಾಟ್ಸಪ್ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಲ್ಲದೆ, ಶಬರಿಮಲೆಯ ಆಡಳಿತ ನಡೆಸುತ್ತಿರುವ ದೇವಸ್ವಂ ಬೋರ್ಡ್, ಅರವಣ ಪ್ರಸಾದ ತಯಾರಿಯನ್ನು ದುಬೈ ಕಂಪನಿಗೆ ವಹಿಸಿದೆಯೇ ಎಂದು ಜನರು ಪ್ರಶ್ನೆ ಮಾಡಿದ್ದರು. ಆದರೆ ಜನರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಒಬ್ಬರಿಂದ ಇನ್ನೊಬ್ಬರಿಗೆ ಹರಿದಾಡುತ್ತಿದ್ದ ಅರವಣ ಪಾಯಸದ ಫೋಟೋ ಬಗ್ಗೆ ವೈರಲ್ ವಿಚಾರವನ್ನು ಪ್ರಮುಖವಾಗಿ ಕೈಗೆತ್ತಿಕೊಂಡು ಅದರ ವಸ್ತುನಿಷ್ಠತೆಯನ್ನು ಕ್ಲಾರಿಫೈ ಮಾಡುವ ವೆಬ್ ಸೈಟ್ ಈಗ ಸುದ್ದಿ ಮಾಡಿದೆ.
ಜಾಲತಾಣದಲ್ಲಿ ವೈರಲ್ ಆಗಿದ್ದ ಫೋಟೋ
ಮೊದಲಿಗೆ ರಾಮಯ್ಯರ್ ಶ್ರೀನಿವಾಸನ್ ಎಂಬವರು ಈ ಅರವಣ ಪಾಯಸಂ ಅನ್ನುವ ಹೆಸರಿನ ಫೋಟೋವನ್ನು ಹಂಚಿಕೊಂಡಿದ್ದು, ಕೇರಳದ ದೇವಸ್ವಂ ಬೋರ್ಡ್ ಅರವಣ ಪಾಯಸದ ಗುತ್ತಿಗೆಯನ್ನು ಮುಸ್ಲಿಮರಿಗೆ ವಹಿಸಿದೆ ಎಂದು ಹೇಳಿದ್ದಲ್ಲದೆ, ಪ್ರಸಾದ ತಯಾರಿಸುವ ಕಂಪನಿ ಇದನ್ನು ಅರೇಬಿಕ್ ಭಾಷೆಯಲ್ಲಿ ಬರೆದಿದ್ದಲ್ಲದೆ, ಇದನ್ನು ಹಲಾಲ್ ಎಂದು ಕರೆದು ಜನರ ಧಾರ್ಮಿಕ ಭಾವನಗೆ ಘಾಸಿಗೊಳಿಸಿದೆ ಎಂದು ಆರೋಪಿಸಿದ್ದರು. ಈ ಪೋಸ್ಟ್ ಅನ್ನು ನೂರಾರು ಮಂದಿ ಷೇರ್ ಮಾಡಿದ್ದಲ್ಲದೆ, ದುಬೈ ಮೂಲದ ಅಲ್ ಝಾಹಾ ಕಂಪನಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅರವಣ ಪಾಯಸಕ್ಕೆ ಹಲಾಲ್ ಸರ್ಟಿಫಿಕೇಟ್ ಕೊಟ್ಟಿದ್ದನ್ನು ವಿರೋಧಿಸಿದ್ದರು. ಅಲ್ಲದೆ, ಜಿಐ ಟ್ಯಾಗ್ ಹಾಕಿ ಅರವಣ ಪಾಯಸವನ್ನು ಕಮರ್ಶಿಯಲ್ ಮಾಡಲಾಗಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಅರವಣ ಪ್ಯಾಕೆಟಲ್ಲಿ ಅಯ್ಯಪ್ಪನ ಚಿತ್ರವಿಲ್ಲ
ಆದರೆ ಅಲ್ ಝಾಹಾ ಕಂಪನಿಯ ಅರವಣ ಪಾಯಸದ ಡಬ್ಬಿಯಲ್ಲಿ ಅಯ್ಯಪ್ಪನ ಚಿತ್ರವಿಲ್ಲ. ಅಲ್ಲದೆ, ಟ್ರಾವಂಕೂರು ದೇವಸ್ವಂ ಬೋರ್ಡ್ ಎನ್ನುವ ಹೆಸರನ್ನೂ ನಮೂದಿಸಿಲ್ಲ. ಶಬರಿಮಲೆಯಲ್ಲಿ ಕೊಡಲಾಗುವ ಅರವಣ ಪಾಯಸದ ಡಬ್ಬಿಯಲ್ಲಿ ಅರವಣ ಪ್ರಸಾದಂ ಎಂಬ ಹೆಸರಿದ್ದು ಮಧ್ಯದಲ್ಲಿ ಶರಣಂ ಅಯ್ಯಪ್ಪ ಎಂದು ಉಲ್ಲೇಖ ಇದೆ. ಆದರೆ, ಅಲ್ ಝಾಹಾ ಕಂಪನಿಯಿಂದ ತಯಾರಿಸಲಾಗುವ ಮತ್ತು ಈಗ ವೈರಲ್ ಆಗಿರುವ ಅರವಣ ಪಾಯಸಂ ಡಬ್ಬಿಯಲ್ಲಿ ಅದ್ಯಾವುದೇ ಉಲ್ಲೇಖ ಇಲ್ಲ. ಅಯ್ಯಪ್ಪನ ಚಿತ್ರವೂ ಇಲ್ಲ. ಅಲ್ ಝಾಹಾ ದುಬೈ ಕಂಪನಿಯಾಗಿದ್ದು, ದುಬೈ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟಕ್ಕಾಗಿ ಅರವಣ ಪಾಯಸಂ ಹೆಸರಲ್ಲಿ ತಿನಿಸೊಂದನ್ನು ತಯಾರಿಸುತ್ತದೆ. ಅದರ ಫೋಟೋ ಇದಾಗಿದ್ದು, ಇದಕ್ಕೂ ಶಬರಿಮಲೆಯ ಪ್ರಸಾದಕ್ಕೂ ಸಂಬಂಧ ಇರುವುದಿಲ್ಲ.
ಶಬರಿಮಲೆಗೂ ಕಂಪನಿಗೂ ಸಂಬಂಧ ಇಲ್ಲ
ನ್ಯೂಸ್ ಚೆಕ್ಕರ್ ವೆಬ್ ಸೈಟ್ ಸಿಬಂದಿ ಈ ಬಗ್ಗೆ ಅಲ್ ಝಾಹಾ ಕಂಪನಿಗೂ ಮಾಹಿತಿ ಕೇಳಿದ್ದು, ಸ್ಪಷ್ಟನೆ ಪಡೆದುಕೊಂಡಿದೆ. ದುಬೈನ ಅಲ್ ಝಾಹಾ ಕಂಪನಿ 2020ರಲ್ಲಿ ಆರಂಭಗೊಂಡಿದ್ದು, ಸ್ನಾಕ್ಸ್ ಮತ್ತು ಸ್ವೀಟ್ಸ್ ವಸ್ತುಗಳನ್ನು ಮಾತ್ರ ತಯಾರಿಸುತ್ತದೆ. ಅದರಲ್ಲಿ ಅರವಣ ಪಾಯಸಂ ಕೂಡ ಒಂದಾಗಿದ್ದು, ಇದಕ್ಕೆ ಯಾವುದೇ ಧರ್ಮ, ದೇವಸ್ಥಾನದ ಸಂಬಂಧ ಇಲ್ಲ. ಈ ಸ್ವೀಟ್ ತಿನಿಸಿಗೂ ಕೇರಳಕ್ಕಾಗಲೀ, ಶಬರಿಮಲೆಗಾಗಲೀ ಯಾವುದೇ ಸಂಬಂಧ ಇಲ್ಲ. ನಮ್ಮ ಕಂಪನಿ ಅರವಣ ತಯಾರಿಸುವುದಕ್ಕೆ ಯಾವುದೇ ಗುತ್ತಿಗೆ ಪಡೆದಿಲ್ಲ. ಇದನ್ನು ದುಬೈಯಲ್ಲಿ ಮಾತ್ರ ಮಾರಾಟ ಮಾಡಲು ಅನುಮತಿ ಪಡೆದಿದ್ದೇವೆ. ಅರವಣ ಅಂದರೆ, ಮಲಯಾಳದಲ್ಲಿ ಕಟ್ಟಿ ಪಾಯಸಂ (ದಪ್ಪ ಪಾಯಸ) ಎಂದಾಗಿರುತ್ತದೆ ಎಂದು ಕಂಪನಿ ಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದಾರೆ.
ಪ್ರಸಾದ ತಯಾರಿಯನ್ನು ಗುತ್ತಿಗೆ ಕೊಟ್ಟಿಲ್ಲ
ಇದಲ್ಲದೆ, ಈ ಬಗ್ಗೆ ಟ್ರಾವಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್. ವಾಸು ಅವರನ್ನು ಸಂಪರ್ಕಿಸಿದ್ದು, ವೈರಲ್ ಪೋಸ್ಟ್ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. ಅರವಣ ಪಾಯಸ ಅನ್ನುವುದು ಶಬರಿಮಲೆಯ ಪ್ರಸಾದವಾಗಿದ್ದು, ಅದರ ತಯಾರಿಯನ್ನು ಯಾವುದೇ ಕಂಪನಿಗೂ ಗುತ್ತಿಗೆ ಕೊಟ್ಟಿಲ್ಲ. ಅರವಣ ಪಾಯಸವನ್ನು ಶಬರಿಮಲೆಯಲ್ಲಿಯೇ ತಯಾರಿಸುತ್ತಿದ್ದು, ಅದರ ತಯಾರಿಗೆಂದೇ ನಿಗದಿತ ಜಾಗ ಇದೆ. ಶಬರಿಮಲೆ ಆಡಳಿತಾಧಿಕಾರಿ ಅದನ್ನು ನೋಡಿಕೊಳ್ಳುತ್ತಾರೆ. ಅರವಣ ಪಾಯಸದ ತಯಾರಿಯನ್ನು ಇನ್ಯಾವುದೇ ಸಂಘಟನೆಗಾಗಲೀ, ಕಂಪನಿಗಾಗಲೀ ಗುತ್ತಿಗೆ ಕೊಡುವಂತಿಲ್ಲ ಎಂದು ತಿಳಿಸಿದ್ದಾರೆ.
ಅರವಣ ಪಾಯಸಂ ಅನ್ನುವ ಹೆಸರನ್ನು ಯಾರೂ ಪೇಟೆಂಟ್ ಪಡೆದಿಲ್ಲ. ಹೀಗಾಗಿ ಅರವಣ ಪಾಯಸಂ ಅನ್ನುವುದನ್ನು ಯಾರೂ ತಯಾರಿಸಬಹುದಾಗಿದೆ. ಇದೇ ರೀತಿ, 2007ರಲ್ಲಿ ಸಿಂಗಾಪುರ ಮೂಲದ ವಿಲ್ಮರ್ ಇಂಟರ್ನ್ಯಾಶನಲ್ ಎಂಬ ಕಂಪನಿ ಅರವಣ ಪಾಯಸ ತಯಾರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈಗ ದುಬೈ ಕಂಪನಿ ತಯಾರಿಸಿದ ಅರವಣ ಪಾಯಸಂ ಪ್ಯಾಕೆಟ್ ಚಿತ್ರ ವೈರಲ್ ಆಗಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಾಗಿತ್ತು.
A viral Facebook post claiming that the Kerala government has handed over the tender to manufacture the Aravana Payasam (an offering to the deity at the Sabarimala hill shrine) to a UAE based firm is doing the rounds on social media platforms. The post carries an image of a packaged food material with a label- ‘Aravana Payasam’ & ‘halal’ and additional text in what appears to be Arabic. A quick fact check by Newschecker has revealed that the claim is not true and misleading.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 10:46 pm
Mangalore Correspondent
Mines, Krishnaveni Mangalore, Dinesh gundrao;...
08-02-25 01:08 pm
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
08-02-25 10:16 pm
Bangalore Correspondent
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am