ಎ.22ರಿಂದ ಪಿಯು ವಾರ್ಷಿಕ ಪರೀಕ್ಷೆ ; ಸಮವಸ್ತ್ರ ಇರುವಲ್ಲಿ ಕಡ್ಡಾಯ, ಹಿಜಾಬ್ ಧಾರಣೆಗೆ ಅವಕಾಶ ಇಲ್ಲ ! 

19-04-22 03:51 pm       Bengaluru Correspondent   ಕರ್ನಾಟಕ

ಎ.22 ರಿಂದ ಮೇ 18ರ ವರೆಗೆ ರಾಜ್ಯದಲ್ಲಿ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದ್ದು ಆಯಾ ಪಿಯು ಕಾಲೇಜುಗಳಲ್ಲಿ ಎಸ್​ಡಿಎಂಸಿ ಆಡಳಿತ ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಗದಿಪಡಿಸಿದ್ದರೆ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. 

ಬೆಂಗಳೂರು, ಎ.19 : ಎ.22 ರಿಂದ ಮೇ 18ರ ವರೆಗೆ ರಾಜ್ಯದಲ್ಲಿ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದ್ದು ಆಯಾ ಪಿಯು ಕಾಲೇಜುಗಳಲ್ಲಿ ಎಸ್​ಡಿಎಂಸಿ ಆಡಳಿತ ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಗದಿಪಡಿಸಿದ್ದರೆ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. 

ಸಮವಸ್ತ್ರ ಇಲ್ಲದ ಕಡೆ ಯಾವುದೇ ಧರ್ಮವನ್ನು ಸಾಂಕೇತಿಸುವ ಉಡುಪು ಧರಿಸಿ ಬರುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಶ್​, ಈ ಬಾರಿ ಪಿಯುಸಿ ಪರೀಕ್ಷೆಗೆ ಒಟ್ಟು 6,84,255 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ಹೊಡೆಯುವ ಅವ್ಯವಹಾರ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾರ್ಥಿಗಳಿಗೆ ಏನಾದರೂ ಗೊಂದಲ ಉಂಟಾದರೆ ಅಥವಾ ಮಾಹಿತಿ ಬೇಕಿದ್ದರೆ ಪಿಯು ಪರೀಕ್ಷಾ ಸಹಾಯವಾಣಿ: 080 23080864ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

The 2nd PUC Exam will commence from April 22, and students who attend the exam must be in uniform. The Minister of Primary and Secondary Education BC Nagesh has made it clear that there is no religious dress including the Hijab.Speaking at a news conference, he said the uniform is mandatory for the secondary PUC test. April 22 to May. There will be a secondary PUC test for the 18th through 2021-22. Hijab wearers are not allowed to write test.