ಬ್ರೇಕಿಂಗ್ ನ್ಯೂಸ್
01-08-25 11:44 am HK News Desk ದೇಶ - ವಿದೇಶ
ನವದೆಹಲಿ, ಆ.1 : ಶೇ.25ರಷ್ಟು ಸುಂಕ ವಿಧಿಸುವ ಘೋಷಣೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹುಚ್ಚಾಟ ತೋರಿದ್ದಾರೆ. ಭಾರತ ಮತ್ತು ರಷ್ಯಾದ್ದು 'ಸತ್ಯ ಆರ್ಥಿಕ (ಡೆಡ್ ಎಕಾನಮಿ) ಎಂದು ಹೇಳಿ ಮೂದಲಿಸಿದ್ದಾರೆ. ರಷ್ಯಾದಿಂದ ಭಾರತವು ಶಸ್ತ್ರಾಸ್ತ್ರ ಹಾಗೂ ಕಚ್ಚಾ ತೈಲ ಮತ್ತು ಅನಿಲವನ್ನು ಆಮದು ಮುಂದುವರಿಸಿದಲ್ಲಿ ಸಾಕಷ್ಟು ಪರಿಣಾಮ ಎದುರಿಸಲಿದೆ ಎಂದು ಬೆದರಿಕೆ ಹಾಕಿದ್ದಾರೆ.
ಭಾರತದ ಜತೆ ಅಮೆರಿಕ ಅತ್ಯಲ್ಪ ವಾಣಿಜ್ಯ ಮಹಿವಾಟು ಹೊಂದಿದೆ ಎಂದು ತಮ್ಮ ಸಾಮಾಜಿಕ ಜಾಲತಾಣ 'ಟ್ರುತ್' ನಲ್ಲಿ ಹೇಳಿಕೊಂಡಿರುವ ಟ್ರಂಪ್, ಭಾರತ, ರಷ್ಯಾಗಳದ್ದು ಸತ್ತ ಆರ್ಥಿಕತೆ ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ವಾಣಿಜ್ಯ ವಹಿವಾಟಿಗೆ ಪ್ರತ್ಯೇಕ ಕರೆನ್ಸಿ ರೂಪಿಸಿಕೊಂಡರೆ ಸುಮ್ಮನಿರಲ್ಲ ಎಂದೂ ಗುಡುಗಿದ್ದಾರೆ. "ರಷ್ಯಾ ಜತೆ ಭಾರತ ಏನು ಮಾಡಿಕೊಳ್ಳುತ್ತದೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅದರಿಂದ ಏನೂ ಆಗಬೇಕಾಗಿಯೂ ಇಲ್ಲ. ಅವೆರಡೂ ರಾಷ್ಟ್ರಗಳು ಸತ್ತ ಆರ್ಥಿಕತೆ ಹೊಂದಿದ್ದು, ಒಟ್ಟಿಗೆ ಪಾತಾಳ ಸೇರಲಿ ಎಂದು ಕುಹಕದ ಮಾತುಗಳನ್ನಾಡಿದ್ದಾರೆ.
ಟ್ರಂಪ್ ಹೇಳಿಕೆಯನ್ನು ಭಾರತ ಬಲವಾಗಿ ಖಂಡಿಸಿದ್ದು ಆದರೆ ಪ್ರತಿಯಾಗಿ ತೆರಿಗೆ ಹೆಚ್ಚಿಸುವುದಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದಿದೆ. ಭಾರತದ ಆರ್ಥಿಕತೆ ವಿಶ್ವದಲ್ಲೇ ವೇಗದಲ್ಲಿ ಬೆಳೆಯುತ್ತಿದ್ದು ಅಮೆರಿಕದ ನೀತಿಯಿಂದ ಯಾವುದೇ ತೊಂದರೆ ಎದುರಾಗಲ್ಲ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಇದೇ ವೇಳೆ, ಅಮೆರಿಕದ ಅಧ್ಯಕ್ಷ ಪಾಕಿಸ್ತಾನದ ಜೊತೆಗೆ ತೈಲ ವ್ಯಾಪಾರ ಒಪ್ಪಂದ ಘೋಷಿಸಿದ್ದಾರೆ. ಪಾಕಿಸ್ತಾನದಲ್ಲಿ ಭಾರಿ ಪ್ರಮಾಣದಲ್ಲಿ ತೈಲ ನಿಕ್ಷೇಪಗಳಿವೆ. ನಾವು ಆ ದೇಶದ ಜತೆ ಒಪ್ಪಂದ ಮಾಡಿದ್ದು ತೈಲ ನಿಕ್ಷೇಪಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದೇವೆ. ಪಾಕಿಸ್ತಾನವು ಮುಂದೊಂದು ದಿನ ಭಾರತಕ್ಕೆ ತೈಲ ಮಾರಾಟಕ್ಕೆ ಮುಂದಾಗಬಹುದು ಎಂದು ಹೇಳಿದ್ದಾರೆ.
ಇದಲ್ಲದೆ, ಇರಾನ್‌ನಲ್ಲಿ ಪೆಟ್ರೋಲಿಯಂ ಮತ್ತು ಪೆಟ್ರೊ ಕೆಮಿಕಲ್ ಉತ್ಪನ್ನಗಳ ವ್ಯಾಪಾರ ನಡೆಸುತ್ತಿರುವ ಭಾರತದ ಆರು ಕಂಪನಿಗಳ ಮೇಲೆ ಟ್ರಂಪ್ ಆಡಳಿತ ನಿರ್ಬಂಧ ಹೇರಿದೆ. ಇರಾನ್ ಮೇಲಿನ ದ್ವೇಷಕ್ಕಾಗಿ ಅಮೇರಿಕಾ ಈ ನಡೆ ತೋರಿದ್ದು ಇರಾನ್ನಿನಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಹೆಚ್ಚಿದೆ. ತೈಲ ವ್ಯಾಪಾರದಿಂದ ಬರುವ ಹಣವನ್ನು ಉಗ್ರವಾದಕ್ಕೆ ಬಳಸಿಕೊಳ್ಳುತ್ತಿದೆ. ಹಾಗಾಗಿ, ಈ ಕ್ರಮ ಎಂಬುದಾಗಿ ಹೇಳಿಕೊಂಡಿದೆ.
ಅಮೆರಿಕವು ಈಗಾಗಲೇ ಇರಾನ್ ಪೆಟ್ರೋಲಿಯಂ ಮತ್ತು ಪೆಟ್ರೊ ಕೆಮಿಕಲ್ ಉತ್ಪನ್ನಗಳ ವ್ಯಾಪಾರ ನಡೆಸುತ್ತಿರುವ ಜಗತ್ತಿನ ಒಟ್ಟು 20 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ಆಲ್ ಕೆಮಿಕಲ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್, ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್, ರಾಮಿಕ್ಲಾಲ್ ಎಸ್ ಗೋಸಾಲಿಯಾ ಅಂಡ್ ಕಂಪನಿ, ಪರ್ಸಿಸ್ಟೆಂಟ್ ಪೆಟ್ರೊಕೆಮ್ ಪ್ರೈವೇಟ್ ಲಿಮಿಟೆಡ್ ನಿರ್ಬಂಧಕ್ಕೆ ಒಳಪಟ್ಟ ಭಾರತದ ತೈಲ ಕಂಪನಿಗಳಾಗಿವೆ.
US President Donald Trump has announced that the United States will impose a sweeping 25% tariff on all goods imported from India, effective August 1, 2025. This sudden move affects nearly all Indian exports to America.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am