ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್ ಯಡಿಯೂರಪ್ಪ ; ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್ ಹೊರಕ್ಕೆ

17-08-22 05:30 pm       HK News Desk   ದೇಶ - ವಿದೇಶ

ಬಿಜೆಪಿಯ ಉನ್ನತ ಮಟ್ಟದ ನಿರ್ಧಾರಗಳನ್ನು ತೀರ್ಮಾನಿಸುವ ಪಕ್ಷದ ಸಂಸದೀಯ ಮಂಡಳಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸರ್ಬಾನಂದ ಸೋನಾವಾಲ್ ಅವರನ್ನು ಸೇರ್ಪಡೆ ಮಾಡಲಾಗಿದೆ.

ನವದೆಹಲಿ, ಆಗಸ್ಟ್ 17: ಬಿಜೆಪಿಯ ಉನ್ನತ ಮಟ್ಟದ ನಿರ್ಧಾರಗಳನ್ನು ತೀರ್ಮಾನಿಸುವ ಪಕ್ಷದ ಸಂಸದೀಯ ಮಂಡಳಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈಬಿಡಲಾಗಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸರ್ಬಾನಂದ ಸೋನಾವಾಲ್ ಅವರನ್ನು ಸೇರ್ಪಡೆ ಮಾಡಲಾಗಿದೆ.

ಉಳಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ರಾಜನಾಥ್ ಸಿಂಗ್, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ ಪುರ, ಸುಧಾ ಯಾದವ್, ಸತ್ಯನಾರಾಯಣ್ ಜತಿಯಾ ಮತ್ತು ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಈ ಸಮಿತಿಯಲ್ಲಿದ್ದಾರೆ. ಇದೇ ವೇಳೆ, ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಸ್ಥಾನ ಪಡೆದಿದ್ದಾರೆ.

Nitin Gadkari: Bottleneck in PLI scheme will be addressed

Ex-Maharashtra CM Devendra Fadnavis accuses MVA government of being devoted  to Dawood Ibrahim- The New Indian Express

ಫಡ್ನವಿಸ್ ಮತ್ತು ಕೆ.ಲಕ್ಷ್ಮಣ್ ಅವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಪಕ್ಷದ ಕೇಂದ್ರ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಫಡ್ನವಿಸ್ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಜೊತೆ ಸೇರಿ ಬಿಜೆಪಿ ಮೈತ್ರಿ ಸರಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಓಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕೆ.ಲಕ್ಷ್ಮಣ್, ತೆಲಂಗಾಣದಲ್ಲಿ ಪಕ್ಷವನ್ನು ಮೇಲೆತ್ತಲು ಶ್ರಮಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಇವರಿಗೆ ಕೇಂದ್ರ ಸಮಿತಿಯಲ್ಲಿ ಸ್ಥಾನ ಸಿಕ್ಕಿದೆ ಎನ್ನಲಾಗುತ್ತಿದೆ.

Amit Shah Bihar visit: Bihar BJP plans a big show of strength during Amit  Shah visit on April 23 - The Economic Times

ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಷಾ, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಖಾಸಗಿಯಾಗಿ ಮಾತುಕತೆ ನಡೆಸಿದ್ದರು. ಪಕ್ಷದಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎನ್ನುವ ಇರಾದೆಯನ್ನೂ ಅಮಿತ್ ಷಾ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಪಕ್ಷದ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುವ ಕೇಂದ್ರ ಮಂಡಳಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಾರೆ. ಸಂಸದೀಯ ಮಂಡಳಿ ಅನ್ನುವುದು ಬಿಜೆಪಿಯ ಪ್ರಮುಖ ಹೊಣೆಗಾರಿಕೆಯನ್ನು ನಿರ್ವಹಿಸುವ ಕಮಿಟಿಯಾಗಿದೆ. ರಾಷ್ಟ್ರೀಯ ನೆಲೆಯಲ್ಲಿ ಪಕ್ಷದ ಯಾವುದೇ ತೀರ್ಮಾನಗಳನ್ನು ಅಂತಿಮವಾಗಿ ತೆಗೆದುಕೊಳ್ಳುವುದು ಈ ಸಮಿತಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸೇರಿ ಹತ್ತು ಮಂದಿ ಕಾರ್ಯಕಾರಿ ಸದಸ್ಯರು ಮೊದಲ ಹಂತದಲ್ಲಿ, ಆನಂತರದ ಸ್ಥಾನದಲ್ಲಿ ಸಂಸದೀಯ ಮಂಡಳಿ ಇರುತ್ತದೆ.

Union Minister Nitin Gadkari and Madhya Pradesh Chief Minister Shivraj Chouhan were dropped from the BJP's highest decision-making body today in an organisational shake-up that saw Devendra Fadnavis and BS Yediyurappa score after recent setbacks.Uttar Pradesh Chief Minister Yogi Adityanath, who led the BJP to an unprecedented second term in the state, is a glaring exclusion after buzz that he would be rewarded with a seat at the decision-making table.