ಬ್ರೇಕಿಂಗ್ ನ್ಯೂಸ್
18-10-22 02:09 pm HK News Desk ದೇಶ - ವಿದೇಶ
ನವದೆಹಲಿ, ಅ.18 : ತನ್ನನ್ನು ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರುವಂತೆ ಒತ್ತಡ ಹೇರಲಾಗಿದೆ ಎಂದು ಸಿಬಿಐ ತನಿಖೆಗೆ ಒಳಗಾಗಿರುವ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಸಿಬಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಸತತ ಒಂಬತ್ತು ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗಿದ್ದ ಅವರು, ಅಲ್ಲಿಂದ ಹೊರಬಂದು ಹೊಸ ಬಾಂಬ್ ಹಾಕಿದ್ದಾರೆ.
10 ಸಾವಿರ ಕೋಟಿ ಅಬಕಾರಿ ಹಗರಣ ನಡೆದಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಇಂತಹ ಯಾವುದೇ ಹಗರಣ ನಡೆದಿಲ್ಲ ಮತ್ತು ಇಡೀ ಪ್ರಕರಣವೇ ನಕಲಿ ಎಂದು ಸಿಬಿಐ ಕಚೇರಿಯಲ್ಲಿ ಕಂಡುಕೊಂಡಿದ್ದೇನೆ. ನನ್ನ ವಿರುದ್ಧದ ಪ್ರಕರಣವು ದೆಹಲಿಯಲ್ಲಿ ಬಿಜೆಪಿಯ 'ಆಪರೇಷನ್ ಕಮಲ' ಕಾರ್ಯಾಚರಣೆ ಹಿಂದಿನ ಷಡ್ಯಂತ್ರ ಎಂದು ಸಿಸೋಡಿಯಾ ಹೇಳಿದ್ದಾರೆ.

ಎಎಪಿ ತೊರೆಯುವಂತೆ ನನ್ನ ಮೇಲೆ ಒತ್ತಡ ಹೇರಿದ್ದು ದೆಹಲಿ ಸಿಎಂ ಸ್ಥಾನ ನೀಡುವ ಆಫರ್ ನೀಡಲಾಗಿದೆ. ಸಿಎಂ ಸ್ಥಾನ ಸ್ವೀಕರಿಸಬೇಕು ಇಲ್ಲವೇ ಜೈಲು ಶಿಕ್ಷೆ ಅನುಭವಿಸಬೇಕೆಂಬ ಆಯ್ಕೆ ನೀಡಿದ್ದಾರೆ ಎಂದು ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ.
ಆದರೆ, ಸಿಸೋಡಿಯಾ ಅವರ ಆರೋಪಗಳನ್ನು ಕೇಂದ್ರ ತನಿಖಾ ಸಂಸ್ಥೆ ತಳ್ಳಿಹಾಕಿದೆ. ಕಾನೂನು ರೀತಿಯಲ್ಲಿ ವಿಚಾರಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಎಫ್‌ಐಆರ್‌ನಲ್ಲಿ ದಾಖಲಾದ ಪ್ರಕಾರ ಸಿಸೋಡಿಯಾ ಅವರನ್ನು ವೃತ್ತಿಪರ ಮತ್ತು ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಲಾಗಿದೆ. ಪ್ರಕರಣದ ತನಿಖೆ ಕಾನೂನಿನ ಪ್ರಕಾರವೇ ಮುಂದುವರಿಯಲಿದೆ ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
The Central Bureau of Investigation (CBI), which summoned Delhi's deputy chief minister Manish Sisodia on Monday for alleged irregularities in Delhi's excise policy, refuted Sisodia's claim that he was pressurised to leave the Aam Aadmi Party (AAP).Sisodia, who left the CBI headquarters after nine hours of questioning, said that he was pressurised to leave the AAP and was offered the Delhi Chief Minister's post. "BJP says there is a Rs 10,000 crore excise scam. There is no scam and a fake case has been registered against me.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm