ಐತಿಹಾಸಿಕ ಭವ್ಯ ರಾಮಮಂದಿರಕ್ಕೆ ಮೋದಿಯಿಂದ ಭೂಮಿಪೂಜೆ

05-08-20 07:30 am       Headline Karnataka News Network   ದೇಶ - ವಿದೇಶ

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಾಧು–ಸಂತರು, ರಾಜಕಾರಣಿಗಳು ಸೇರಿದಂತೆ ಒಟ್ಟು 175 ಮಂದಿ ಅತಿಥಿಗಳು ಆಗಮಿಸಿದ್ದಾರೆ.

ಲಕ್ನೋ, ಆಗಸ್ಟ್ 05: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಾಧು–ಸಂತರು, ರಾಜಕಾರಣಿಗಳು ಸೇರಿದಂತೆ ಒಟ್ಟು 175 ಮಂದಿ ಅತಿಥಿಗಳು ಆಗಮಿಸಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಹೆಚ್ಚು ಜನ ಸ್ಥಳಕ್ಕೆ ಬರಬಾರದೆಂದು ಮನವಿಯನ್ನೂ ಮಾಡಿದೆ. ಭೂಮಿಪೂಜೆ ಕಾರ್ಯಕ್ರಮದ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ದೇವಾಲಯದ ಮುಖ್ಯ ಶಿಲೆಯನ್ನು ಗರ್ಭಗ್ರಹದಲ್ಲಿ ಇರಿಸುವ ಮೂಲಕ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

ಐತಿಹಾಸಿಕ ಸಂಭ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈಗಾಗಲೇ ಅತಿಥಿಗಳಿಗೆ ಆಹ್ವಾನ ಸಹ ಕಳುಹಿಸಿದೆ. ಇನ್ನು ಆಗಸ್ಟ್ 5 ರಂದು ಪ್ರಧಾನಿ ಮೋದಿ ಸುಮಾರು ಮೂರು ಗಂಟೆಗಳ ಕಾಲ ಅಯೋಧ್ಯೆಯಲ್ಲಿರಲಿದ್ದಾರೆ ಎಂಬ ವಿವರ ಲಭ್ಯವಾಗಿದೆ. ಬೆಳಗ್ಗೆ 9.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಲಕ್ನೋ ಕಡೆ ಪ್ರಯಾಣ ಆರಂಭಿಸಲಿದ್ದಾರೆ.