Supreme Court, SBI Electoral bonds: ರಾಜಕೀಯ ಪಕ್ಷಗಳ ಚುನಾವಣಾ ಬಾಂಡ್ ಅಕ್ರಮ ; ಎಸ್ ಬಿಐ ನೀಡಿದ್ದ ಮಾಹಿತಿಯನ್ನು ವೆಬ್ ನಲ್ಲಿ ಪ್ರಕಟಿಸಿದ ಚುನಾವಣಾ ಆಯೋಗ, ದಾನಿ ಮತ್ತು ಪಕ್ಷಗಳ ನೇರ ವ್ಯವಹಾರದ ಮಾಹಿತಿ ಇಲ್ಲ ! 

15-03-24 10:35 am       HK News Desk   ದೇಶ - ವಿದೇಶ

ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಹಿರಂಗಪಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಬಾಂಡ್‌ಗಳ ಡೇಟಾವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು.

ನವದೆಹಲಿ, ಮಾ.15: ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಹಿರಂಗಪಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಬಾಂಡ್‌ಗಳ ಡೇಟಾವನ್ನು ಆಯೋಗಕ್ಕೆ ಹಸ್ತಾಂತರಿಸಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸಿ, ಇಸಿಐ ತನ್ನ ವೆಬ್‌ಸೈಟ್‌ನಲ್ಲಿ ಡೇಟಾಗಳನ್ನು ಅಪ್‌ಲೋಡ್ ಮಾಡಿದ್ದು ಯಾರೆಲ್ಲ ರಾಜಕೀಯ ಪಕ್ಷಗಳಿಗೆ ಎಷ್ಟೆಲ್ಲಾ ದೇಣಿಗೆ ನೀಡಿದ್ದಾರೆಂದು ಬಹಿರಂಗವಾಗಿದೆ. 

ಸುಪ್ರೀಂಕೋರ್ಟ್ ಇದೇ ವರ್ಷದ ಫೆಬ್ರವರಿ 15 ಮತ್ತು ಮಾರ್ಚ್ 11 ರಂದು ನೀಡಿದ ಆದೇಶ ಅನುಸಾರ, ಎಸ್ ಬಿಐ ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದೆ. ಮಾರ್ಚ್ 12 ರಂದು ಎಸ್ ಬಿಐ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ ಗಳ ಬಗ್ಗೆ ಮಾಹಿತಿ ನೀಡಿತ್ತು. ಆಯೋಗ ತನ್ನ ವೆಬ್ ಸೈಟ್ ನಲ್ಲಿ ಆ ಮಾಹಿತಿಯನ್ನು ಪ್ರಕಟಿಸಿದೆ. ಎಸ್ ಬಿಐನಿಂದ ಪಡೆದ ಮಾಹಿತಿಯನ್ನು url: https://www.eci.gov.in/candidate-politicalparty " ನಲ್ಲಿ ಲಭ್ಯವಿದೆ ಎಂದು ಚುನಾವಣಾ ಆಯೋಗ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. 

2019ರ ಏಪ್ರಿಲ್ 12 ರಿಂದ 2024ರ ಫೆಬ್ರವರಿ 15 ರ ನಡುವೆ ಖರೀದಿಸಿದ ಮತ್ತು ಎನ್​ಕ್ಯಾಶ್​ ಮಾಡಿದ ಬಾಂಡ್‌ಗಳಿಗೆ ಸಂಬಂಧಿಸಿ ಡೇಟಾವನ್ನು ಡಿಜಿಟಲ್​ ರೂಪದಲ್ಲಿ ಒದಗಿಸಲಾಗಿದೆ. ಏಪ್ರಿಲ್ 01, 2019 ರಿಂದ ಫೆಬ್ರವರಿ 15, 2024 ರ ಅವಧಿಯಲ್ಲಿ 22,217 ಬಾಂಡ್​ಗಳನ್ನು ಖರೀದಿ ಮಾಡಲಾಗಿದೆ. ಅದರಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 11 ರ ನಡುವೆ ಖರೀದಿಸಿದ ಒಟ್ಟು ಬಾಂಡ್‌ಗಳ ಸಂಖ್ಯೆ 3346. ಅದರಲ್ಲಿ 1609 ಎನ್​ಕ್ಯಾಶ್​ ಮಾಡಲಾಗಿದೆ. 2019ರ ಏಪ್ರಿಲ್​ 12 ರಿಂದ ಫೆಬ್ರವರಿ 15, 2024 ರ ನಡುವೆ 18871 ಬಾಂಡ್‌ಗಳನ್ನು ಖರೀದಿಸಿದರೆ, 20,421 ಎನ್​ಕ್ಯಾಶ್​ ಮಾಡಲಾಗಿದೆ ಎಂದು ಅಫಿಡವಿಟ್​ನಲ್ಲಿ ನಮೂದಿಸಲಾಗಿದೆ.

Electoral bonds case: SBI files compliance affidavit with Supreme Court -  India Today

ಚುನಾವಣಾ ಬಾಂಡ್‌ಗಳನ್ನು ರಿಡೀಮ್ ಮಾಡಿದ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷಗಳು ಸೇರಿವೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಚುನಾವಣಾ ಬಾಂಡ್‌ಗಳ ಖರೀದಿದಾರರಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಾಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೋ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್‌ವೈಸ್, ಪಿವಿಆರ್, ಕೆವೆಂಟರ್, ಸುಲಾ ವೈನ್, ವೆಲ್ಸ್ಪನ್ ಮತ್ತು ಸನ್ ಫಾರ್ಮಾ ಸೇರಿದ್ದು ಇವರಲ್ಲದೆ, ವೈಯಕ್ತಿಕವಾಗಿಯೂ ಹಲವರು ಉದ್ಯಮಿಗಳು ಚುನಾವಣಾ ಬಾಂಡ್ ಖರೀದಿಸಿದ್ದಾರೆ. 

ಆದರೆ, ಚುನಾವಣಾ ಬಾಂಡ್​ ಕುರಿತ ಮಾಹಿತಿಯಲ್ಲಿ ಯಾರು ದಾನ ಮಾಡಿದ್ದನ್ನು ಯಾವ ಪಕ್ಷ ಪಡೆದುಕೊಂಡಿದೆ ಎಂಬ ಮಾಹಿತಿ ಇಲ್ಲ. ದಾನಿ ಮತ್ತು ಪಕ್ಷಗಳ ನಡುವಿನ ನೇರ ವ್ಯವಹಾರದ ಮಾಹಿತಿಯನ್ನು ಕೊಟ್ಟಿಲ್ಲ. ಒಟ್ಟಾರೆ ಎಷ್ಟು ಬಾಂಡ್​ಗಳಿವೆ, ಅವುಗಳ ಬೆಲೆ, ಎಷ್ಟು ಬಾಂಡ್​ಗಳನ್ನು ಪಕ್ಷಗಳು ನಗದು ಮಾಡಿಕೊಂಡಿವೆ ಎಂಬ ಮಾಹಿತಿಯಷ್ಟೇ ಇದೆ. ಒಟ್ಟು ಮಾಹಿತಿಯನ್ನು ನೂರಾರು ಪುಟಗಳಲ್ಲಿ ನೀಡಲಾಗಿದೆ. 

ಫೆಬ್ರವರಿ 15 ರಂದು ಐವರು ನ್ಯಾಯಾಧೀಶರನ್ನೊಳಗೊಂಡ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ, ಅನಾಮಧೇಯ ವ್ಯಕ್ತಿಗಳಿಂದ ರಾಜಕೀಯ ದೇಣಿಗೆಯನ್ನು ಅನುಮತಿಸುವ ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತ್ತು. ಇದನ್ನು "ಅಸಂವಿಧಾನಿಕ" ಎಂದು ಕರೆದಿದ್ದ ಸುಪ್ರೀಂಕೋರ್ಟ್, ದಾನಿಗಳಿಂದ ಪಡೆದ ದೇಣಿಗೆ ಮೊತ್ತವನ್ನು ಬಹಿರಂಗಪಡಿಸಲು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

The State Bank of India has filed a compliance affidavit with the Supreme Court in the electoral bonds case. It also informed the court that a total number of 22,217 bonds were purchased during the period from April 1, 2019, to February 15, 2024, out of which, 22,030 electoral bonds were redeemed.