ಬ್ರೇಕಿಂಗ್ ನ್ಯೂಸ್
15-07-24 11:01 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 15: ಮುಸ್ಲಿಂ ವಿಚ್ಛೇದಿತ ಮಹಿಳೆಯರಿಗೆ ಜೀವನಾಂಶ ಕೇಳುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಭಿಪ್ರಾಯಪಟ್ಟಿದೆ. ಅಲ್ಲದೆ, ಸುಪ್ರೀಂ ತೀರ್ಪನ್ನು ರದ್ದುಗೊಳಿಸಲು ಅಗತ್ಯವಿರುವ ಎಲ್ಲ ಮಾರ್ಗಗಳನ್ನು ಕಂಡುಕೊಳ್ಳಲು ನಿರ್ಧರಿಸಿದೆ.
ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಕುರಿತಾಗಿ ಕಾನೂನು ಮಂಡಳಿಯ ಸದಸ್ಯರು ಸಭೆ ನಡೆಸಿದ್ದು, ವಿಚ್ಛೇದಿತ ಮಹಿಳೆಯರು ಜೀವನಾಂಶಕ್ಕೆ ಅರ್ಹರು ಎಂದಿರುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು.
ಮದುವೆಗಳ ಸಂರಕ್ಷಣೆಗೆ ಕ್ರಮ
ಸಭೆಯ ನಿರ್ಣಯಗಳ ಬಗ್ಗೆ ಪ್ರಕಟಣೆ ನೀಡಿರುವ ಮಂಡಳಿ, ಮುಸ್ಲಿಂ ಕಾನೂನು ಮಂಡಳಿ ಪ್ರವಾದಿ ಮಹಮ್ಮದರ ನಿಯಮಗಳನ್ನು ಪಾಲಿಸಲಿದೆ. ಅಲ್ಲಾಹನ ದೃಷ್ಟಿಯಲ್ಲಿ ನಿಷೇಧಿತವಾಗಿರುವ ವಿಚ್ಛೇದನ ಪದ್ಧತಿ ತೊಡೆದು ಹಾಕಲು ಮಂಡಳಿ ಕೆಲಸ ಮಾಡಲಿದೆ. ಕುರಾನ್ ನಲ್ಲಿ ಉಲ್ಲೇಖಿಸಿದಂತೆ ಮದುವೆಗಳನ್ನು ಸಂರಕ್ಷಿಸಲು ಬೇಕಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ಆದಾಗ್ಯೂ ವೈವಾಹಿಕ ಜೀವನ ಕಷ್ಟ ಎಂದೆನಿಸಿದಾಗ ನೆಮ್ಮದಿಯ ಬದುಕಿಗೆ ವಿಚ್ಛೇದನ ನೀಡುವುದು ದಂಪತಿಯ ವೈಯಕ್ತಿಕ ನಿರ್ಧಾರವಾಗಲಿದೆ. ಇಂಥ ನಿರ್ಣಯಗಳನ್ನು ಮಂಡಳಿ ಬೆಂಬಲಿಸಲಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಇದಲ್ಲದೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಮಾರ್ಗದಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ಇಸ್ಲಾಮಿಕ್ ಕಾನೂನು ರಕ್ಷಿಸಿಕೊಳ್ಳಲು ತೀರ್ಪು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು ಎಂದು ಮಂಡಳಿ ವಕ್ತಾರ ಎಸ್.ಕ್ಯೂ.ಆರ್. ಇಲ್ಯಾಸ್ ಹೇಳಿದ್ದಾರೆ.
ಇದೇ ವೇಳೆ ಉತ್ತರಾಖಂಡ ಸರಕಾರ ಜಾರಿಗೊಳಿಸಿರುವ ಏಕರೂಪ ನಾಗರಿಕ ಸಂಹಿತೆ ಪ್ರಶ್ನಿಸಿ ಹೈಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸಲು ಮುಸ್ಲಿಂ ಮಂಡಳಿ ನಿರ್ಧರಿಸಿದೆ. ದೇಶದಲ್ಲಿ ಮುಸ್ಲಿಮರ ಕಲ್ಯಾಣಕ್ಕೆ ನೀಡಲಾಗಿರುವ ವಕ್ಫ್ ಆಸ್ತಿಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ನಿರ್ಧರಿಸಿರುವ ಮಂಡಳಿ, ವಕ್ಫ್ ಕಾನೂನುಗಳನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ, 1991ರ ಆರಾಧನಾ ಕಾಯಿದೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಲಾಗಿದೆ.
The All India Muslim Personal Law Board (AIMPLB) on July 14 asserted that the Supreme Court verdict on maintenance to Muslim women was against Islamic law and authorised its president to explore all possible measures to ensure that this decision is overturned. The board also decided to challenge in the Uttarakhand High Court the Uniform Civil Code brought in the State.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am