ASI report links MPs Bhojshala: ಮಥುರೆ, ವಾರಣಾಸಿ ಬಳಿಕ ಭೋಜಶಾಲಾ ಮಸೀದಿ ಬಗ್ಗೆ ವಿವಾದ ; ಎಎಸ್ಐ ಸರ್ವೆಯಲ್ಲಿ ಮಂದಿರದ ಅವಶೇಷ ಪತ್ತೆ, 11ನೇ ಶತಮಾನದಲ್ಲಿ ಭೋಜರಾಜ ಕಟ್ಟಿಸಿದ್ದ ವಾಗ್ದೇವಿ ಮಂದಿರ! ಸಂಸ್ಕೃತ, ಪ್ರಾಕೃತ ಶಾಸನ, ಕೆತ್ತನೆಗಳು ಪತ್ತೆ

16-07-24 09:52 pm       HK News Desk   ದೇಶ - ವಿದೇಶ

ಮಥುರೆ, ವಾರಣಾಸಿಯ ಬಳಿಕ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ ಮಸೀದಿಯ ಕುರಿತ ವಿವಾದ ಮತ್ತೆ ಭುಗಿಲೆದ್ದಿದೆ. ಪ್ರಾಚ್ಯವಸ್ತು ಇಲಾಖೆಯ ವೈಜ್ಞಾನಿಕ ಸರ್ವೆ ವರದಿಯನ್ನು ಮಧ್ಯಪ್ರದೇಶ ಹೈಕೋರ್ಟಿಗೆ ಸಲ್ಲಿಸಲಾಗಿದ್ದು, ವರದಿಯಲ್ಲಿ ಈ ಹಿಂದೆ ಭೋಜರಾಜನ ಕಾಲದಲ್ಲಿ ಕಟ್ಟಲಾಗಿದ್ದ ಸರಸ್ವತಿ ಮಂದಿರವನ್ನೇ ಮಸೀದಿ ಮಾಡಲಾಗಿತ್ತು ಎಂಬುದನ್ನು ಉಲ್ಲೇಖಿಸಲಾಗಿದೆ.

ಇಂದೋರ್, ಜುಲೈ.16: ಮಥುರೆ, ವಾರಣಾಸಿಯ ಬಳಿಕ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ ಮಸೀದಿಯ ಕುರಿತ ವಿವಾದ ಮತ್ತೆ ಭುಗಿಲೆದ್ದಿದೆ. ಪ್ರಾಚ್ಯವಸ್ತು ಇಲಾಖೆಯ ವೈಜ್ಞಾನಿಕ ಸರ್ವೆ ವರದಿಯನ್ನು ಮಧ್ಯಪ್ರದೇಶ ಹೈಕೋರ್ಟಿಗೆ ಸಲ್ಲಿಸಲಾಗಿದ್ದು, ವರದಿಯಲ್ಲಿ ಈ ಹಿಂದೆ ಭೋಜರಾಜನ ಕಾಲದಲ್ಲಿ ಕಟ್ಟಲಾಗಿದ್ದ ಸರಸ್ವತಿ ಮಂದಿರವನ್ನೇ ಮಸೀದಿ ಮಾಡಲಾಗಿತ್ತು ಎಂಬುದನ್ನು ಉಲ್ಲೇಖಿಸಲಾಗಿದೆ.

ಎರಡು ಸಾವಿರ ಪುಟಗಳ ಸಮೀಕ್ಷಾ ವರದಿಯನ್ನು ಎಎಸ್ಐ ಪರ ವಕೀಲ ಹಿಮಾಂಶು ಜೋಶಿ ಹೈಕೋರ್ಟಿಗೆ ಸಲ್ಲಿಸಿದ್ದು, ಜುಲೈ 22ರಂದು ಮುಂದಿನ ವಿಚಾರಣೆ ನಡೆಯಲಿದೆ. ವರದಿಯಲ್ಲಿ ಮಸೀದಿಯ ಗೋಡೆಗಳಲ್ಲಿ ಹಿಂದು ದೇವರ ಭಗ್ನಗೊಂಡ ವಿಗ್ರಹಗಳು, ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಲ್ಲಿ ಬರೆದಿರುವ ಶಾಸನಗಳು ಪತ್ತೆಯಾಗಿವೆ. ಹಿಂದು ಆಚರಣೆಗೆ ಸಂಬಂಧಿಸಿದ ಕೆತ್ತನೆಗಳು, ಸರಸ್ವತಿ, ಹನುಮಂತ, ಶಿವ, ಬ್ರಹ್ಮ, ವಾಸುಕಿ, ನಾಗ ವಿಗ್ರಹಗಳು ಪತ್ತೆಯಾಗಿವೆ. ಇದಲ್ಲದೆ, ಮೆಟ್ಟಿಲುಗಳ ಬಳಿ ಲಾಕ್ ಮಾಡಿದ ಕೊಠಡಿಗಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಳ್ಳಿ, ತಾಮ್ರ, ಉಕ್ಕಿನ 31 ನಾಣ್ಯಗಳನ್ನು ಪತ್ತೆ ಮಾಡಲಾಗಿದೆ.

Bhojhshala Dispute: ASI Finds Hindu Deities Sculptures In Kamal Maula Mosque

ಈ ನಾಣ್ಯಗಳ ಕಾಲವನ್ನು ಕಾರ್ಬನ್ ಡೇಟಿಂಗ್ ಮೂಲಕ ಪತ್ತೆಹಚ್ಚಲಾಗಿದ್ದು, ಇಂಡೋ ಸಾಸಾನಿಯನ್ (10-11ನೇ ಶತಮಾನ), ದೆಹಲಿ ಸುಲ್ತಾನರು(13-14ನೇ ಶತಮಾನ), ಮಾಲವಾ ಸುಲ್ತಾನರು(15-16ನೇ ಶತಮಾನ), ಮೊಘಲರು (16-18ನೇ ಶತಮಾನ), ಧಾರ್ ರಾಜ್ಯ(19ನೇ ಶತಮಾನ), ಬ್ರಿಟಿಷರ (19-20ನೇ ಶತಮಾನ) ಕಾಲದ ವಿವಿಧ ಮಾದರಿಯ ನಾಣ್ಯಗಳೆಂಗು ಗುರುತಿಸಲಾಗಿದೆ. ಮಾರ್ಬಲ್, ಸುಣ್ಣದ ಕಲ್ಲು ಸೇರಿದಂತೆ ವಿವಿಧ ರೀತಿಯ ಕಲ್ಲುಗಳಲ್ಲಿ ರಚಿಸಿರುವ 94 ಮಾದರಿಯ ಹಿಂದು ದೇವರು, ಮಾನವರು, ಪ್ರಾಣಿಗಳನ್ನು ಪ್ರತಿನಿಧಿಸುವ ಕೆತ್ತನೆಗಳು ಸಿಕ್ಕಿವೆ. ಸಿಂಹ, ಆನೆ, ಕುದುರೆ, ನಾಯಿ, ಹನುಮಂತ, ಆಮೆ, ಹಕ್ಕಿಗಳ ರಚನೆಗಳೂ ಇವೆ. ಹಿಂದು ಪುರಾಣಗಳನ್ನು ಪ್ರತಿನಿಧಿಸುವ ಕೀರ್ತಿಮುಖದ ಚಿತ್ರಣ ಇದೆ.

ಸಂಸ್ಕೃತ, ಪ್ರಾಕೃತ ಭಾಷೆಯಲ್ಲಿ ಬರೆದಿರುವುದನ್ನು ನೋಡಿದರೆ, ಹಿಂದಿನ ಕಾಲದಲ್ಲಿ ಪ್ರಬಲ ಶಿಕ್ಷಣ ಕೇಂದ್ರ ಆಗಿತ್ತು ಎನ್ನುವುದನ್ನು ಸೂಚಿಸುತ್ತದೆ. ಒಂದು ಶಾಸನದಲ್ಲಿ ರಾಜ ನರವರ್ಮನ ಕಾಲದಲ್ಲಿ (ಆಡಳಿತ 1094-1133- ಪರಮರ ಸಾಮ್ರಾಜ್ಯ) ರಚಿಸಲ್ಪಟ್ಟ ಮಂದಿರ ಎಂದು ಸೂಚಿಸುತ್ತದೆ. ಇನ್ನೊಂದು ಶಾಸನದಲ್ಲಿ ಖಿಲ್ಜಿ ರಾಜ ಮಹಮ್ಮದ್ ಶಾ ಆಡಳಿತದಲ್ಲಿ ಮಂದಿರವನ್ನು ಮಸೀದಿಯನ್ನಾಗಿಸಿದೆ ಎಂದಿದೆ. ಅಲ್ಲದೆ, ಭೋಜರಾಜನ ಆಳ್ವಿಕೆ ಇದ್ದಾಗ ಭೋಜಶಾಲಾ ಶಿಕ್ಷಣ ಕೇಂದ್ರವಾಗಿತ್ತು. ವಾಗ್ದೇವಿ (ಶಿಕ್ಷಣದ ಅಧಿದೇವತೆ ಸರಸ್ವತಿ) ಮಂದಿರವಾಗಿತ್ತು. ಅದೇ ಮಂದಿರವನ್ನು ಮಸೀದಿ ಮಾಡಲಾಗಿತ್ತು ಎಂದು ಸರ್ವೆ ವರದಿಯಲ್ಲಿ ತಿಳಿಸಿದೆ.

11ನೇ ಶತಮಾನದಲ್ಲಿ ನಿರ್ಮಿತವಾಗಿದ್ದ ಸರಸ್ವತಿ ಮಂದಿರ ಎನ್ನುವುದು ಹಿಂದುಗಳ ವಾದವಾಗಿದ್ದರೆ, ಮುಸ್ಲಿಮರು ತಮ್ಮದೇ ಮಸೀದಿ, ಭೋಜಶಾಲಾ ಕಮಲಾ ಮೌಲಾ ಮಸೀದಿ ಎಂದು ಹೇಳುತ್ತಿದ್ದಾರೆ. 2003ರಲ್ಲಿ ಹಿಂದು- ಮುಸ್ಲಿಮರ ಮಧ್ಯೆ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಉಭಯ ಗುಂಪುಗಳ ನಡುವೆ ಸಂಧಾನ ನಡೆಸಿದ್ದ ಎಎಸ್ಐ ಅಧಿಕಾರಿಗಳು, ಪ್ರತಿ ಮಂಗಳವಾರ ಹಿಂದುಗಳಿಗೆ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಹಿಂದು ಫ್ರಂಟ್ ಫಾರ್ ಜಸ್ಟಿಸ್ ಎನ್ನುವ ಸಂಘಟನೆ, ಎಎಸ್ಐ ಮಾಡಿದ್ದ ಈ ತೆರನಾದ ವ್ಯವಸ್ಥೆಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅದರಂತೆ, ಮಸೀದಿ ಬಗ್ಗೆ ವೈಜ್ಞಾನಿಕ ಸರ್ವೆ ನಡೆಸುವಂತೆ ಮಾರ್ಚ್ 11ರಂದು ಹೈಕೋರ್ಟ್ ಆದೇಶ ಮಾಡಿತ್ತು. ವಿವಾದಿತ ಜಾಗದಲ್ಲಿ ಮಾರ್ಚ್ 22ರಂದು ಸರ್ವೆ ಆರಂಭಿಸಿದ್ದು, ಆರು ವಾರಗಳ ಒಳಗೆ ಸಮೀಕ್ಷೆ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಆದರೆ ವರದಿ ಸಲ್ಲಿಕೆ ಆಗಿರದೇ ಇದ್ದುದರಿಂದ ಜುಲೈ 4ರಂದು ನಡೆದ ವಿಚಾರಣೆಯಲ್ಲಿ ಜುಲೈ 15ರ ಒಳಗಡೆ ವರದಿ ಸಲ್ಲಿಸುವಂತೆ ಹೈಕೋರ್ಟ್ ತಿಳಿಸಿತ್ತು. ಇದೀಗ ವರದಿ ಸಲ್ಲಿಕೆಯಾಗಿದ್ದು, ಹಿಂದುಗಳ ಮಂದಿರವಾಗಿತ್ತು ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ.

The Archaeological Survey of India (ASI) told the Madhya Pradesh high court that the Bhojshala temple-Kamal Maula masjid in Madhya Pradesh’s Dhar district was built from the remains of earlier temples and the existing mosque at the site came up centuries later, adding the disputed structure to a string of similar conflicts roiling India for decades.