'ದೇಶ ಸುರಕ್ಷಿತ ಕೈಯಲ್ಲಿದೆ' ;  ನರೇಂದ್ರ ಮೋದಿ ಸರ್ಕಾರಕ್ಕೆ ಸೋನಿಯಾ ಗಾಂಧಿ ಪರಮಾಪ್ತ ಅಹ್ಮದ್ ಪಟೇಲ್ ಪುತ್ರನಿಂದ ಬಹುಪರಾಕ್‌, ಆಪರೇಶನ್ ಸಿಂಧೂರ್, ಶಶಿ ತರೂರ್, ಡಿಕೆಶಿ ನಾಯಕತ್ವಕ್ಕೆ ಶ್ಲಾಘನೆ 

12-08-25 02:49 pm       HK News Desk   ದೇಶ - ವಿದೇಶ

ಕರ್ನಾಟಕದಲ್ಲಿ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ರಾಹುಲ್‌ ಗಾಂಧಿಯವರ ಮತಗಳವು ಆರೋಪಕ್ಕೆ ತದ್ವಿರುದ್ಧವಾಗಿ ಮಾತನಾಡಿ ಸಚಿವ ಸ್ಥಾನದಿಂದ ವಜಾಗೊಂಡ ಮರುದಿನವೇ ಕಾಂಗ್ರೆಸ್‌ನ ಹಿರಿಯ ಮುಖಂಡ, ಕಾಂಗ್ರೆಸ್‌ ಅಧಿನಾಯಕಿಯಾಗಿದ್ದ ಸೋನಿಯಾ ಗಾಂಧಿಯವರ ಪರಮಾಪ್ತರಾಗಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್…

ನವದೆಹಲಿ, ಆ.12 :  ಕರ್ನಾಟಕದಲ್ಲಿ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ರಾಹುಲ್‌ ಗಾಂಧಿಯವರ ಮತಗಳವು ಆರೋಪಕ್ಕೆ ತದ್ವಿರುದ್ಧವಾಗಿ ಮಾತನಾಡಿ ಸಚಿವ ಸ್ಥಾನದಿಂದ ವಜಾಗೊಂಡ ಮರುದಿನವೇ ಕಾಂಗ್ರೆಸ್‌ನ ಹಿರಿಯ ಮುಖಂಡ, ಕಾಂಗ್ರೆಸ್‌ ಅಧಿನಾಯಕಿಯಾಗಿದ್ದ ಸೋನಿಯಾ ಗಾಂಧಿಯವರ ಪರಮಾಪ್ತರಾಗಿದ್ದ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್‌ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಕ್ಕೆ ಬಹುಪರಾಕ್‌ ಎಂದಿದ್ದು, "ದೇಶ ಸುರಕ್ಷಿತ ಕೈಯಲ್ಲಿದೆ" ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ಪಾಳಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. 

ನರೇಂದ್ರ ಮೋದಿ ಸರ್ಕಾರವನ್ನು ಶ್ಲಾಘಿಸಿರುವ ಜೊತೆಗೆ ತನಗೆ ಕಾಂಗ್ರೆಸ್‌ ಬಗ್ಗೆ ಅಸಮಾಧಾನ ಏನೂ ಇಲ್ಲ, ಆದರೆ ಸಾರ್ವಜನಿಕ ಜೀವನದಿಂದ ಕೆಲಕಾಲ ದೂರವಿರುವುದಾಗಿ ಪ್ರತಿಕ್ರಿಯಿಸಿದರು. ತಾನು ಕಾಂಗ್ರೆಸ್‌ ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದು ಕಾಂಗ್ರೆಸ್‌ ಜೊತೆ ತಂದೆ ಅಹ್ಮದ್‌ ಪಟೇಲ್‌ ಅವರಂತೆ ಕೆಲಸ ಮಾಡುವುದಿಲ್ಲ ಎಂದು ಕಳೆದ ತಿಂಗಳು ಹೇಳಿಕೆ ನೀಡಿದ್ದರು. 

Narendra Modi tells Indian farmers he will 'never compromise' in face of  50% US tariffs

RIP Ahmed Patel: Babubhai of Bharuch who made the Gandhis formidable

ಅಹ್ಮದ್‌ ಪಟೇಲ್‌ ಗುಜರಾತ್‌ನ ಭರೂಚ್‌ ಕ್ಷೇತ್ರದಿಂದ ಮೂರು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದು, ಆ ಬಳಿಕ ಮೂರು ದಶಕಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದರು. ಕಾಂಗ್ರೆಸ್‌ ಪಕ್ಷದ ತಂತ್ರಗಾರಿಕೆಯ ನಿಪುಣರಾಗಿ ಗುರುತಿಸಿಕೊಂಡಿದ್ದ ಅಹ್ಮದ್‌ ಪಟೇಲ್‌, ಸೋನಿಯಾ ಗಾಂಧಿ ಯುಪಿಎ ಮುಖ್ಯಸ್ಥರಾಗಿದ್ದಾಗ ಅವರಿಗೆ ರಾಜಕೀಯ ಸಲಹೆಗಾರರಾಗಿ ಹಾಗೂ ಪಕ್ಷದ ಪ್ರಮುಖ ಟ್ರಬಲ್‌ ಶೂಟರ್‌ ಆಗಿ ಗುರುತಿಸಿಕೊಂಡಿದ್ದರು. 2020ರಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದರು. 2024ರ ಲೋಕಸಭಾ ಚುನಾವಣೆ ವೇಳೆ  ಫೈಸಲ್‌ ಪಟೇಲ್‌ ಭರೂಚ್‌ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ, ಆಮ್‌ ಆದ್ಮಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್‌ ಆ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಹಾಕದೆ ಆಮ್‌ ಆದ್ಮಿ ಪಕ್ಷವನ್ನು ಬೆಂಬಲಿಸಿತ್ತು. ಇದು ಸಹಜವಾಗಿಯೇ ಫೈಸಲ್‌ ಮತ್ತು ಅಹ್ಮದ್‌ ಪಟೇಲ್‌ರ ಪುತ್ರಿ ಮುಮ್ತಾಜ್‌ ಅವರನ್ನು ಕೆರಳಿಸಿದ್ದಲ್ಲದೆ ಪಕ್ಷದ ಚಟುವಟಿಕೆಯಿಂದ ಅವರು ದೂರವುಳಿದಿದ್ದರು. ಕೊನೆಗೆ ಬಿಜೆಪಿಯೇ ಈ ಕ್ಷೇತ್ರದಲ್ಲಿ ಜಯ ಸಾಧಿಸಿತ್ತು. 

Shri Rahul Gandhi raises the concerns of students in LS, says our  examination system is up for sale

Congress parliamentary party chairperson Sonia Gandhi turns 78; PM Modi and  others send greetings - The Economic Times

ತಾನು ಕಾಂಗ್ರೆಸ್‌ ಪರ ಕೆಲಸ ಮಾಡುವುದನ್ನು ನಿಲ್ಲಿಸುವುದಾಗಿ ಮೊದಲೇ ಅಹ್ಮದ್‌ ಪಟೇಲ್‌ ಘೋಷಿಸಿದ್ದರು. ನನ್ನ ತಂದೆಯವರು ತಮ್ಮ ಇಡೀ ಜೀವನವನ್ನು ದೇಶ, ಪಕ್ಷ ಮತ್ತು ಗಾಂಧಿ ಕುಟುಂಬಕ್ಕಾಗಿ ಕೆಲಸ ಮಾಡಲು ಅರ್ಪಿಸಿದ್ದರು. ನಾನು ಅವರ ಹೆಜ್ಜೆಗಳನ್ನು ಅನುಸರಿಸಲು ಪ್ರಯತ್ನಿಸಿದೆ, ಆದರೆ ಅದಕ್ಕೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಅದಕ್ಕಾಗಿ ಪಕ್ಷದ ಹಿಂದೆ ಹೋಗುವುದನ್ನು ಬಿಟ್ಟು, ಮಾನವೀಯ ಆಧಾರದಲ್ಲಿ ಕೆಲಸ ಮಾಡಲು ಇಚ್ಛಿಸಿದ್ದೇನೆ. ಕಾಂಗ್ರೆಸ್ ಪಕ್ಷವು ಯಾವಾಗಲೂ ಇದ್ದಂತೆ ನನ್ನ ಕುಟುಂಬವಾಗಿ ಉಳಿಯುತ್ತದೆ ಎಂದು ಅವರು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. 

Former MP Ahmed Patel's son Faisal breaks ties with Congress: 'With great  pain and anguish...' | Ahmed News – India TV

ಕಾಂಗ್ರೆಸ್ ಬಗ್ಗೆ ಯಾವುದೇ ಅಸಮಾಧಾನ ಇಲ್ಲ, ನನ್ನ ಕುಟುಂಬ ಮತ್ತು ನಾನು ಈಗಲೂ ಪಕ್ಷದ ಹಿರಿಯ ನಾಯಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೇವೆ. ನಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಆದರೆ ಸ್ವಲ್ಪಕಾಲದ ಮಟ್ಟಿಗೆ ಸಾರ್ವಜನಿಕ ಜೀವನದಿಂದ ವಿಶ್ರಾಂತಿ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. 
ನರೇಂದ್ರ ಮೋದಿ ಸರ್ಕಾರವನ್ನು ಕೊಂಡಾಡಿರುವ ಫೈಸಲ್‌ ಪಟೇಲ್‌ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿ, ಸಶಸ್ತ್ರ ಪಡೆಗಳು ಉತ್ತಮವಾಗಿ ಕೆಲಸ ಮಾಡಿವೆ, ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ನಾಯಕತ್ವವನ್ನು ಪ್ರದರ್ಶಿಸಿ ನಮ್ಮನ್ನು ದೊಡ್ಡ ಬಿಕ್ಕಟ್ಟಿನಿಂದ ಹೊರತಂದಿದ್ದಾರೆ. ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬಗ್ಗೆಯೂ ತುಂಬಾ ಗೌರವವಿದೆ. ಮೋದಿಯವರು, ಅಧಿಕಾರಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ, ಅವರನ್ನು ಹೇಗೆ ನಾಯಕರನ್ನಾಗಿ ಮಾಡುತ್ತಾರೆ ಮತ್ತು ಅವರನ್ನು ಸಚಿವ ಸ್ಥಾನಗಳಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಇತರರು ಅನುಸರಿಸಬೇಕಾದ ವಿಷಯ ಎಂದು ನೇರವಾಗಿಯೇ ಹೇಳಿದ್ದಾರೆ. 

External Affairs Minister S Jaishankar lists contact, chemistry,  credibility as three Cs of success - India Today

ಇದೇ ವೇಳೆ ರಾಹುಲ್‌ ಗಾಂಧಿಯವರ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸಿದ ಫೈಸಲ್‌, ರಾಹುಲ್‌ ಒಬ್ಬ ಕಠಿಣ ಪರಿಶ್ರಮಿ ನಾಯಕ ಬಣ್ಣಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಶಶಿ ತರೂರ್, ಡಿಕೆ ಶಿವಕುಮಾರ್, ರೇವಂತ್ ರೆಡ್ಡಿ, ದೀಪೇಂದ್ರ ಹೂಡಾ ಮತ್ತು ಸಚಿನ್ ಪೈಲಟ್‌ರಂತಹ ಅತ್ಯಂತ ಪ್ರತಿಭಾನ್ವಿತ ಮತ್ತು ಬುದ್ಧಿವಂತ ನಾಯಕರಿದ್ದಾರೆ. ಅವರು ಬಹಳ ಸಮರ್ಥರು. ಪಕ್ಷದಲ್ಲಿ ಆಂತರಿಕವಾಗಿ ಕೆಲವೊಂದು ಸಮಸ್ಯೆಗಳಿವೆ ಮತ್ತು ಪಕ್ಷವನ್ನು ನಡೆಸುತ್ತಿರುವ ಹಿರಿಯರಿಗೆ ಸರಿಯಾದ ಸಲಹೆ ಸಿಗುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಸಲಹೆಗಾರರು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್‌ನ ಉನ್ನತ ನಾಯಕರ ಒಂದು ವರ್ಗದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

In a move that has surprised political circles, Faisal Patel — son of the late senior Congress strategist and close aide to Sonia Gandhi, Ahmed Patel — has praised Prime Minister Narendra Modi’s leadership, saying the country is in “safe hands.” His remarks come a day after Karnataka Cooperation Minister K.N. Rajanna was removed from his post for making statements contrary to the party’s line.